ಬೆಂಗಳೂರು:ಹೊಸ ವರ್ಷಾಚರಣೆ ಹಿನ್ನೆಲೆ ಮದ್ಯದ ಅಮಲಿನಲ್ಲಿ ಫ್ಲೈಓವರ್ ಗಳ ಮೇಲೆ ಸಂಭ್ರಮಚಾರಣೆ ನಡೆಸಬಾರದು ಎಂಬ ಕಾರಣಕ್ಕೆ ನಗರದ ಎಲ್ಲಾ ಫ್ಲೈಓವರ್ಗಳನ್ನು ಬಂದ್ ಮಾಡಲಾಗಿತ್ತು.
ಫ್ಲೈಓವರ್ಗಳು ಬಂದ್: ರಾತ್ರಿಯಿಡಿ ಏರ್ಪೋರ್ಟ್ ಪ್ರಯಾಣಿಕರ ಪರದಾಟ - ಮದ್ಯದ ಅಮಲಿನಲ್ಲಿ ಫ್ಲೈಓವರ್ ಗಳ ಮೇಲೆ ಸಂಭ್ರಮಚಾರಣೆ
ಹೊಸವರ್ಷ ಆಚರಣೆ ಹಿನ್ನೆಲೆಯಿಂದಾಗಿ ಫ್ಲೈಓವರ್ಗಳ ಮೇಲೆ ಯಾವುದೇ ಅಹಿತಕರ ಘಟನೆಗಳು ನಡೆಯುದಿರಲಿ ಎಂದು ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರು. ಈ ಹಿನ್ನೆಲೆ ಬೆಂಗಳೂರಿನ ಎಲ್ಲಾ ಫ್ಲೈಓವರ್ಗಳನ್ನು ಬಂದ್ ಮಾಡಿದ್ದರಿಂದ ಏರ್ಪೋರ್ಟ್ಗೆ ತೆರಳುವವ ಪ್ರಯಾಣಿಕರು ಪರದಾಡಿದರು.
ಫ್ಲೈಓವರ್ಗೆ ಅಡ್ಡಲಾಗಿ ಇಟ್ಟರುವ ಬ್ಯಾರಿಕೇಡ್ಗಳು
ಫ್ಲೈಓವರ್ ಗಳ ಮೇಲೆ ಸಂಭ್ರಮಾರಣೆ ನಡೆಸುವುದರಿಂದ ಈ ಹಿಂದೆ ಕೆಲವು ಅಹಿತಕರ ಘಟನೆಗಳು ಸಹ ನಡೆದಿದ್ದವು. ಇದರಿಂದ ಎಚ್ಚೆತ್ತುಕೊಂಡಿದ್ದ ಪೊಲೀಸರು ಈ ವರ್ಷ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಿರಲಿ ಎಂಬ ಕಾರಣಕ್ಕೆ ನಗರದ ಫ್ಲೈಓವರ್ ಮೇಲೆ ಸಂಚಾರ ನಿಷೇಧಿಸಲಾಗಿತ್ತು.
ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಬರುವ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ತೆರಳುವ ಫ್ಲೈಓವರ್ ಸಹ ಬಂದ್ ಮಾಡಿದ್ದರಿಂದ ಏರ್ಪೋರ್ಟ್ ನತ್ತ ತೆರಳಬೇಕಿದ್ದ ಪ್ರಯಾಣಿಕರು ಪರದಾಡುವಂತಾಯಿತು.