ಬೆಂಗಳೂರು: ಕೊರೊನಾ ಎರಡನೇ ಅಲೆ 14 ದಿನಗಳ ಕಾಲ ಕಂಪ್ಲೀಟ್ ಕರ್ಫ್ಯೂವಿನ ಮೂರನೇ ದಿನವಾದ ಶುಕ್ರವಾರ ಸಹ ಬೆಳಗ್ಗೆ 6 ರಿಂದ 10 ಗಂಟೆಯೊಳಗೆ ತರಕಾರಿ ಹಣ್ಣು ದಿನಸಿ ಖರೀದಿ ಮಾಡಲು ಮಾರುಕಟ್ಟೆಗೆ ಜನ ಮುಗಿಬಿದ್ದಿದ್ದು ಕಂಡು ಬಂತು.
10 ಗಂಟೆಯವರೆಗೆ ವ್ಯಾಪಾರ ವಾಹಿವಾಟಿಗೆ ಅನುಮತಿ ಕೊಟ್ಟಿರುವ ಸರ್ಕಾರದ ನಿಯಮದಂತೆ ಸಿ ಟಿ ಮಾರ್ಕೆಟ್ನಲ್ಲಿ ವ್ಯಾಪಾರ ವಾಹಿವಾಟು ಜೋರಾಗಿತ್ತು, ಮಾಸ್ಕ ಧರಿಸಿ ಖರೀದಿಗೆ ಜನಸಾಮಾನ್ಯರು ಮುಂದಾಗಿದ್ದರು.
ಎಂದಿನಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯಾಪಾರ ನಡೆದಿತ್ತು, ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸಲು ಪೊಲೀಸರು ಸೂಚನೆ ಕೂಡ ನೀಡಿದ್ದು, ಕಟ್ಟುನಿಟ್ಟಾಗಿ ನಿಯಮ ಪಾಲಿಸಿಲ್ಲ ಅಂದ್ರೆ ಅಂಗಡಿಗಳನ್ನು ಮುಚ್ಚಿ ಎಂದು ಪೊಲೀಸರು ಹೇಳುತ್ತಿದ್ದದ್ದು ಕಂಡು ಬಂದಿತು.
ಸುತ್ತಮುತ್ತ ಟ್ರಾಫಿಕ್ ನೋಡಿ ಫ್ಲೈಓವರ್ ಓಪನ್ ಮಾಡಿಸಿದ ಡಿಸಿಪಿ ವ್ಯಾಪಾರ ಮಾಡಲು ಅನುಮತಿ ಕೊಟ್ಟರುವ ಸರ್ಕಾರದ ನಿಯಮ ಪಾಲಿಸದೇ ಜನರು ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ಕೆಲವು ದಿನಗಳಿಂದ ಮಾಹಿತಿ ಬಂದಿದ್ದರಿಂದ ಸಿಟಿ ಮಾರುಕಟ್ಟೆಗೆ ಹೆಚ್ಚಿನ ಪೊಲೀಸರ ನಿಯೋಜನೆಯಾಗಿತ್ತು. ಮಾರುಕಟ್ಟೆಯಲ್ಲಿ ಗುಂಪುಗುಂಪಾಗಿ ಸೇರುತ್ತಿದ್ದ ಜನರ ಗುಂಪು ಚದುರಿಸಿ ಆದಷ್ಟು ಬೇಗ ವ್ಯಾಪಾರ ವಹಿವಾಟು ಮುಗಿಸಲು ಪೊಲೀಸರ ಸೂಚನೆ ನೀಡಿದ್ರು.
ಹೊಯ್ಸಳ ವಾಹನದಲ್ಲಿ ಮೈಕ್ಗಳ ಮೂಲಕ ಅನೌನ್ಸ್ ಮಾಡಿ ಜಾಗೃತಿ ಮೂಡಿಸಲಾಯಿತು, ಒಂದು ವೇಳೆ ನಿಯಮ ಪಾಲನೆ ಮಾಡದಿದ್ದಲ್ಲಿ ಅಂಗಡಿಗಳು ತೆರೆಯದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸುವುದಾಗಿ ವಾರ್ನ್ ಮಾಡಲಾಯಿತು.
ಸಿಟಿ ಮಾರುಕಟ್ಟೆಯಲ್ಲಿ ಜನಜಂಗುಳಿ ಇದ್ದ ಹಿನ್ನೆಲೆಯಲ್ಲಿ ಫೀಲ್ಡಿಗಿಳಿದ ಖಾಕಿ ಪಡೆಯ ಎಸಿಪಿ ,ಇನ್ಸ್ಪೆಕ್ಟರ್, ಹಾಗೂ ಸಿಬ್ಬಂದಿಗಳೊಂದಿದೆ ಗಸ್ತು ತಿರುಗಿತು. ಅನಾವಶ್ಯಕ ಗುಂಪುಗೂಡುವುದು ಸುಖಾಸುಮ್ಮನೆ ವಾಹನಗಳ ಪಾರ್ಕಿಂಗ್ ಎಲ್ಲವನ್ನೂ ತೆರವುಗೊಳಿಸಿತು.
ಖುದ್ದು ಫೀಲ್ಡಿಗಿಳಿದ ಪಶ್ಚಿಮ ಡಿಸಿಪಿ ಸಂಜೀವ್ ಪಾಟೀಲ್:
ಕೆ ಆರ್ ಮಾರ್ಕೆಟ್ನಲ್ಲಿ ಜನ ಹೆಚ್ಚಾದ ಹಿನ್ನೆಲೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಕೂಡ ಕಾರ್ಯಾಚರಣೆಗೆ ಇಳಿದಿದ್ದರು. ಹೆಚ್ಚು ಜನ ಗುಂಪುಗೂಡದಂತೆ ಎಚ್ಚರಿಕೆ ನೀಡಿ ತರಕಾರಿ, ಹೂ, ಹಣ್ಣು ಖರೀದಿಸಿದವರು ಕೂಡಲೇ ಮನೆ ಕಡೆ ತೆರಳುವಂತೆ ಸೂಚನೆ ನೀಡಿದರು.
ಸಿಟಿ ಮಾರುಕಟ್ಟೆಗೆ ಭೇಟಿ ಕೊಟ್ಟ ಡಿಸಿಪಿ ಸಂಜೀವ್ ಪಾಟೀಲ್ ರಿಗೆ ಕೆಆರ್ ಮಾರುಕಟ್ಟೆಯಲ್ಲಿ ರಸ್ತೆಯುದ್ದಕ್ಕೂ ಟ್ರ್ಯಾಫಿಕ್ ಜಾಂ ಉಂಟಾಗಿದ್ದು ಸಹ ಕಂಡು ಬಂದಿತು, ಹೆಚ್ಚಾಗಿದ್ದ ವಾಹನ ಹಾಗೂ ಜನರ ದಟ್ಟಣೆ ಹಿನ್ನೆಲೆ ಕೆ ಆರ್ ಮಾರ್ಕೆಟ್ ಪ್ಲೇಓವರ್ ಸಹ ಓಪನ್ ಮಾಡಿಸಲಾಯ್ತು. ಕೆ ಆರ್ ಮಾರ್ಕೆಟ್ ನಿಂದ ಮೈಸೂರು ರಸ್ತೆ ಕಡೆಗೆ ಹೋಗುವ ಫ್ಲೈಓವರ್ ಓಪನ್ ಮಾಡಲಾಗಿದ್ದು, ವಾಹನಗಳ ಸಂಚಾರಕ್ಕೆ ಸಂಚಾರಿ ಪೊಲೀಸರು ಅವಕಾಶ ಮಾಡಿ ಕೊಟ್ಟರು.