ಬೆಂಗಳೂರು :ಲಾಕ್ಡೌನ್ ಹಿನ್ನೆಲೆ ಮನೆಯಲ್ಲಿಯೇ ಇರುವ ಮಕ್ಕಳು ಸದ್ಯ ಗಾಳಿಪಟ ಹಾರಿಸಿ ಮನೋರಂಜನೆ ಪಡೆಯುತ್ತಿದ್ದಾರೆ.
ಕೊರೊನಾ ಮಹಾಮಾರಿ ತಡೆಗೆ ಲಾಕ್ಡೌನ್ ಆದೇಶ ಪಾಲನೆಯಾಗುತ್ತಿದೆ. ಇದೇ ಕಾರಣಕ್ಕೆ ಶಾಲಾ-ಕಾಲೇಜುಗಳು ಬಂದ್ ಆಗಿರುವ ಕಾರಣ ಮಕ್ಕಳು, ಯುವಕರು ಮನೆಯಲ್ಲಿಯೇ ಇದ್ದಾರೆ. ಸದ್ಯ ಮನೆಯ ಒಳಗಡೆ ಇದ್ದು ಬೇಜಾರಾಗಿ ಹೊರಗಡೆ ಹೋದರೆ ಎಲ್ಲಿ ಕೊರೊನಾ ಸೋಂಕು ತಮಗೆ ಬರುತ್ತೋ ಅನ್ನೋ ಭಯದಲ್ಲಿ ಮನೆಯಲ್ಲಿಯೇ ಸಮಯ ಕಳೆಯಲು ಮಕ್ಕಳೀಗ ಗಾಳಿಪಟ ಹಾರಿಸೋದ್ರಲ್ಲಿ ನಿರತರಾಗಿದ್ದಾರೆ.
ಬಾನೆತ್ತರಕ್ಕೆ ಗಾಳಿಪಟ ಹಾರಿಸಿ.. ಮನೆಯಲ್ಲಿಯೇ ಖುಷಿಪಡಿ ಬಿಸಿಲನ್ನು ಲೆಕ್ಕಿಸದೆ ತಮ್ಮದೇ ಲೋಕದಲ್ಲಿ ಬಾನೆತ್ತರಕ್ಕೆ ಗಾಳಿ ಪಟ ಹಾರಿಸಿ ಖುಷಿ ಪಡುತ್ತಿದ್ದಾರೆ. ಮಕ್ಕಳ ಖುಷಿಗೆ ಪೋಷಕರೂ ಕೂಡಾ ಸಾಥ್ ನೀಡ್ತಿದ್ದಾರೆ. ಗಾಳಿಪಟ ಹಾರಿಸೋದ್ರಿಂದ ಪಕ್ಷಿಗಳಿಗೆ ತೊಂದರೆಯಾಗುತ್ತೆ ಅನ್ನೋ ಆರೋಪಗಳು ಕೂಡಾ ಕೇಳಿ ಬಂದಿತ್ತು. ಹೀಗಾಗಿ ಗಾಳಿಪಟಕ್ಕೆ ಬಳಸುವ ಗಾಜು ಲೇಪಿತ ಮಾಂಜಾ ದಾರವನ್ನ ಎಲ್ಲೆಡೆ ಬ್ಯಾನ್ ಮಾಡಲಾಗಿದೆ. ಸದ್ಯ ಬಟ್ಟೆ ಹೊಲಿಯುವ ದಾರ ಬಳಸಿ ಯಾವುದೇ ಪಕ್ಷಿಗಳಿಗೆ ತೊಂದರೆಯಾಗದ ರೀತಿ ಗಾಳಿಪಟ ಹಾರಿಸಿ ಖುಷಿಪಡ್ತಿದ್ದಾರೆ.
ಈಟಿವಿ ಭಾರತ ಜೊತೆ ಸುಹಾಸ್ ಹಾಗೂ ಸತೀಶ್ ಮಾತನಾಡಿ, ಲಾಕೌಡೌನ್ ಹಿನ್ನೆಲೆ ನಾವು ಮನೆಯಲ್ಲಿಯೇ ಇದ್ದೇವೆ. ಸದ್ಯ ಮನೆಯ ಹೊರಗಡೆ ಹೋದರೆ ಕೊರೊನಾ ಸೋಂಕು ಹರಡೀತು ಎಂಬ ಭಯ ನಮ್ಮನ್ನು ಕಾಡುತ್ತದೆ. ಹೀಗಾಗಿ ಮನೆಯ ಮಹಡಿ ಮೇಲೆ ಸೋಷಿಯಲ್ ಡಿಸ್ಟೆನ್ಸ್ ಇಟ್ಟುಕೊಂಡು ಆಕಾಶದೆತ್ತರಕ್ಕೆ ಗಾಳಿಪಟ ಹಾರಾಡಿಸಿ ಎಂಜಾಯ್ ಮಾಡ್ತಿದ್ದೀವಿ. ನಾವು ಪಕ್ಷಿಗಳಿಗೆ ತೊಂದರೆ ಮಾಡಲ್ಲ, ಮಾಂಜಾ ದಾರದ ಬದಲು ಬಟ್ಟೆ ಹೊಲಿಯುವ ದಾರ ಉಪಯೋಗಿಸ್ತಿದ್ದೇವೆ. ಮನೆಯಲ್ಲೇ ಸಿಗುವ ಪೇಪರ್ ಕಡ್ಡಿ ಬಳಸಿ ಗಾಳಿಪಟ ತಯಾರಿಸುತ್ತಿದ್ದೇವೆ ಎಂದಿದ್ದಾರೆ.