ಬೆಂಗಳೂರು: ಕೊರೊನಾ ವಾರಿಯರ್ಸ್ಗೆ ಪುಷ್ಪಾಲಂಕಾರದ ಮೂಲಕ ವಿಧಾನಸೌಧದ ಮುಂಭಾಗ ಗೌರವ ಸಮರ್ಪಣೆ ಮಾಡಲಾಯಿತು. ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೋಟಗಾರಿಕೆ ಸಚಿವ ಡಾ. ನಾರಾಯಣಗೌಡ ಚಾಲನೆ ನೀಡಿ, ಗೌರವ ಸಮರ್ಪಿಸಿದರು.
ಕೊರೊನಾ ವಾರಿಯರ್ಸ್ಗೆ ಪುಷ್ಪಾಲಂಕಾರ ಮೂಲಕ ಗೌರವ ಸಮರ್ಪಣೆ - Flower show at Vidhana Soudha
ಕೊರೊನಾ ಯೋಧರಾಗಿ ಕಳೆದ ಮೂರು ತಿಂಗಳಿನಿಂದ ದುಡಿಯುತ್ತಿರುವ ವೈದ್ಯರು, ಪೊಲೀಸರು, ದಾದಿಯರಿಗೆ ಗೌರವ ಸಮರ್ಪಿಸಲಾಯಿತು.
ಪುಷ್ಪಾಲಂಕಾರದ ಮೂಲಕ ಕೊರೊನಾ ವಾರಿಯರ್ಸ್ಗೆ ಗೌರವ ಸಮರ್ಪಣೆ
ತೋಟಗಾರಿಕೆ ಇಲಾಖೆ ಸಹಭಾಗಿತ್ವದಲ್ಲಿ ಫ್ಲವರ್ ಕೌನ್ಸಿಲ್ ಆಫ್ ಇಂಡಿಯಾ ಕಾರ್ಯಕ್ರಮ ಆಯೋಜಿಸಿತ್ತು. 1.72 ಲಕ್ಷ ಹೂಗಳನ್ನ ಬಳಸಿ ಅಲಂಕಾರ ಮಾಡಲಾಗಿತ್ತು.
ಬೆಂಗಳೂರಿನ ವಿವಿಧೆಡೆ ಇಂದಿನಿಂದ ಮೂರು ದಿನಗಳ ಕಾಲ ಪುಷ್ಪಾಲಂಕಾರದ ಮೂಲಕ ಗೌರವ ಸಮರ್ಪಣೆ ಮಾಡಲಾಗುತ್ತಿದೆ. ಇಂದಿನ ಕಾರ್ಯಕ್ರಮದಲ್ಲಿ ಎಸಿಎಸ್ ವಂದಿತ ಶರ್ಮ, ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ, ತೋಟಗಾರಿಕೆ ಇಲಾಖೆ ನಿರ್ದೇಶಕ ವೆಂಕಟೇಶ್ ಮತ್ತಿತರರು ಪಾಲ್ಗೊಂಡಿದ್ದರು.