ರಾಜ್ಯದಲ್ಲಿ ಪ್ರವಾಹ : ಪರಿಹಾರ ಕಾರ್ಯಾಚರಣೆಗೆ 100 ಕೋಟಿ ಬಿಡುಗಡೆ
ರಾಜ್ಯಾದಾದ್ಯಂತ ಎದುರಾಗಿರುವ ತೀವ್ರ ಪ್ರವಾಹದ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ 100 ಕೋಟಿ ರೂ ಅನುದಾನವನ್ನು ಬಿಡುಗಡೆಗೊಳಿಸಿ ಕಂದಾಯ ಇಲಾಖೆ ಉಪ ಕಾರ್ಯದರ್ಶಿ ಲಲಿತಾ ಹೆಚ್ ಹಂದಿಗೋಳ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಪ್ರವಾಹ : ಪರಿಹಾರ ಕಾರ್ಯಾಚರಣೆಗೆ 100 ಕೋಟಿ ಬಿಡುಗಡೆ
ಬೆಂಗಳೂರು: ರಾಜ್ಯಾದ್ಯಂತ ತೀವ್ರ ಪ್ರವಾಹ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಪರಿಹಾರ ಕಾಮಗಾರಿಗಳಿಗೆ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ 100 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ.
ಎಲ್ಲಿಗೆ ಎಷ್ಟು ಅನುದಾನ? : ಬೆಳಗಾವಿ - 25 ಕೋಟಿ ರೂ.
ಬಾಗಲಕೋಟೆ- 10 ಕೋಟಿ ರೂ.
ವಿಜಯಪುರ- 5 ಕೋಟಿ ರೂ.
ಯಾದಗಿರಿ- 5 ಕೋಟಿ ರೂ.
ಉತ್ತರ ಕನ್ನಡ- 10 ಕೋಟಿ ರೂ.
ದಕ್ಷಿಣ ಕನ್ನಡ- 5 ಕೋಟಿ ರೂ.
ಶಿವಮೊಗ್ಗ- 5 ಕೋಟಿ ರೂ.
ಉಡುಪಿ- 5 ಕೋಟಿ ರೂ.
ಕೊಡಗು- 5 ಕೋಟಿ ರೂ.
ಚಿಕ್ಕಮಗಳೂರು- 5 ಕೋಟಿ ರೂ.
ಹಾಸನ- 5 ಕೋಟಿ ರೂ.
ಧಾರವಾಡ - 5 ಕೋಟಿ ರೂ.
ಗದಗ- 5 ಕೋಟಿ ರೂ.
ಕಲಬುರಗಿ- 5 ಕೋಟಿ ರೂ.
ಹಣ ಬಳಕೆಗೆ ಷರತ್ತು:ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಹಣ ಬಳಿಕ ಮಾಡಬೇಕು. ಯಾವ ಉದ್ದೇಶಕ್ಕೆ ಹಣ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಹಣ ಬಳಕೆ ಮಾಡಬೇಕು. ಅನುದಾನ ವೆಚ್ಚ ಮಾಡಿದ್ದಕ್ಕೆ ಸಂಬಂಧಪಟ್ಟಂತೆ ಹಣ ಬಳಕೆ ಪ್ರಮಾಣಪತ್ರ ಸಲ್ಲಿಸಬೇಕು. ಹಣ ಬಳಕೆಯಲ್ಲಿ ಲೋಪವಾದರೆ ಅದಕ್ಕೆ ಆಯಾ ಜಿಲ್ಲಾಧಿಕಾರಿಗಳೇ ನೇರ ಹೊಣೆ ಎನ್ನುವ ಷರತ್ತುಗಳನ್ನು ವಿಧಿಸಿ ಹಣ ಬಿಡುಗಡೆ ಮಾಡಲಾಗಿದೆ.