ಬೆಂಗಳೂರು: ಬಹುತೇಕ ಈ ವಾರದೊಳಗೆ ನೆರೆ ಪರಿಹಾರ ಹಣ ಬಿಡುಗಡೆ ಆಗಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ನೆರೆಪರಿಹಾರ ಹಣಕ್ಕೆ ಕೆಲ ಪ್ರಕ್ರಿಯೆಗಳು ಇವೆ. ನಮ್ಮ ಲೆಕ್ಕಕ್ಕೂ, ಅವರ ಲೆಕ್ಕಕ್ಕೂ ವ್ಯತ್ಯಾಸಗಳು ಇರಬಹುದು. ಅದು ನನಗೆ ಗೊತ್ತಿಲ್ಲ. ಆ ಸಂಬಂಧ ಸ್ಪಷ್ಟೀಕರಣ ಕೇಳುವುದು ಸಹಜ. ಕೇಂದ್ರದಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದ್ದು, ವಾರದೊಳಗೆ ಬಹುತೇಕ ಪರಿಹಾರ ಹಣ ಬಿಡುಗಡೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೆರೆ ಪರಿಹಾರದಲ್ಲಿ ಬೇರೆ ಬೇರೆ ಹಂತಗಳಿವೆ. ನೆರೆ ಪರಿಹಾರ ಸಂಬಂಧ ಗ್ರೌಂಡ್ನಲ್ಲಿ ಕೆಲಸ ನಿಲ್ಲಿಸಿಲ್ಲ. ನಾವು ಹಣ ಬಿಡುಗಡೆ ಮಾಡಿದ್ದೇವೆ. ಕೇಂದ್ರದಿಂದ ಹಣ ಬಂದರೆ ಪರಿಹಾರ ಕಾಮಗಾರಿ ಚುರುಕು ಪಡೆಯುತ್ತದೆ ಎಂದು ತಿಳಿಸಿದರು.