ಕರ್ನಾಟಕ

karnataka

ETV Bharat / state

ನೆರೆ ಸಂತ್ರಸ್ತರಿಗೆ ಸಾರ್ವಜನಿಕರಿಂದ ಸಹಾಯ ಕೋರಿದ ಸಂಸದೆ ಶೋಭಾ ಕರಂದ್ಲಾಜೆ

ಸಂಸದೆ ಶೋಭಾ ಕರಂದ್ಲಾಜೆ ಉತ್ತರ ಕರ್ನಾಟಕ ನೆರೆ ಸಂತ್ರಸ್ತರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದು, ಅವರಿಗೆ ಬಟ್ಟೆ, ಬೆಡ್​ಶೀಟ್​ ಹೀಗೆ ತುರ್ತು ಅಗತ್ಯ ವಸ್ತುಗಳನ್ನು ಅಂಗಡಿಗಳಿಂದ ಸಂಗ್ರಹಿಸಿದರು.

ಸಂಸದೆ ಶೋಭಾ ಕರಂದ್ಲಾಜೆ

By

Published : Aug 10, 2019, 4:54 PM IST

ಬೆಂಗಳೂರು:ಸರ್ಕಾರ ಊಟ, ಜಾಗದ ವ್ಯವಸ್ಥೆ ಮಾಡಿದೆ. ಆದರೆ, ನೆರೆ ಸಂತ್ರಸ್ತರು ತಮ್ಮೆಲ್ಲ ವಸ್ತುಗಳನ್ನು ಕಳೆದುಕೊಂಡಿದ್ದರಿಂದ ಬಟ್ಟೆ, ಕಂಬಳಿ, ಬೆಡ್​ಶೀಟ್​, ಪಾತ್ರೆಗಳು ಹಾಗೂ ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಲಾಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ನೆರೆ ಸಂತ್ರಸ್ತರ ಅಗತ್ಯ ವಸ್ತುಗಳಿಗಾಗಿ ಸಾರ್ವಜನಿಕರ ಮೊರೆ ಹೋದ ಸಂಸದೆ ಶೋಭಾ ಕರಂದ್ಲಾಜೆ

ನಗರದ ಚಿಕ್ಕಪೇಟೆ, ಮಾಮೂಲ್​ ಪೇಟೆ ಹಾಗೂ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿನ ಅಂಗಡಿಗಳಿಗೆಭೇಟಿ ನೀಡಿ, ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಸಹಾಯಹಸ್ತ ನೀಡುವಂತೆ ಮನವಿ ಮಾಡಿದರು.

ನಾಡಿನ ಜನರು ಈ ಹಿಂದೆ ಕೇರಳ, ಕೊಡಗಿನಲ್ಲಿ ಪ್ರವಾಹ ಸಂಭವಿಸಿದಾಗ ಇದೆ ರೀತಿ ಸಹಾಯ ಮಾಡಿದ್ದಾರೆ. ಇವುಗಳ ಜತೆಗೆ ಹಣ ನೀಡುವವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆಕ್​ ಅಥವಾ ಡಿಡಿ ಮೂಲಕ ನೀಡಬಹುದು ಎಂದರು.

ಪ್ರವಾಹ ತಗ್ಗಿದ ನಂತರ ಅವರ ಮನೆ ನಿರ್ಮಿಸಿ ಕೊಡುವ ಹಾಗೂ ಸ್ವಚ್ಛಗೊಳಿಸಿ ಅವರಿಗೆ ಪುನಃ ಬದುಕು ಕಟ್ಟಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ABOUT THE AUTHOR

...view details