- ಬಾಗಲಕೋಟೆ ಜಿಲ್ಲೆಯ ಮೂರು ನದಿಗಳ ಪ್ರವಾಹದಿಂದ ಮೂವರು ಮೃತ ಪಟ್ಟಿರುವುದು ವರದಿಯಾಗಿದೆ
- ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಪ್ರವಾಹದಿಂದ ತಲಾ ಒಂದೂಂದು ನದಿಗಳಲ್ಲಿ ಒಬ್ಬರಂತೆ ಪ್ರವಾಹದಲ್ಲಿ ಮೃತ ಪಟ್ಟಿದ್ದಾರೆ
- ಮುಧೋಳ ತಾಲೂಕಿನ ಮಾಚಕನೂರ ಗ್ರಾಮ ಜಲಾವೃತಗೊಂಡಿತ್ತು
- ಈ ವೇಳೆ ಮನೆಯಲ್ಲೇ ವಿಠ್ಠಲ ಯಮನಪ್ಪ ದೇವರಮನಿ (38) ಎಂಬ ವ್ಯಕ್ತಿ ಸಿಲುಕಿಕೊಂಡಿದ್ದ
- ಇಂದು ನೀರು ಕಡಿಮೆಯಾದ ಬಳಿಕ ಶವ ಹೊರ ಕಾಣಿಸಿಕೊಂಡಿದೆ
- ಮಾಚಕನೂರ ಗ್ರಾಮಕ್ಕೆ ಕಳೆದ ಆ. 8 ರಂದು ನೀರು ನುಗ್ಗಿದ್ದು, ಅಂದಿನಿಂದ ವಿಠ್ಠಲ ಕಾಣೆಯಾಗಿದ್ದ
- ಆತ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ ಎಂದೇ ಮನೆಯವರು ಭಾವಿಸಿದ್ದರು
- ನೀರು ಸರಿದ ಮೇಲೆ, ಮನೆಗೆ ಹೋದಾಗ ವಿಠ್ಠಲನ ಶವ ಕಂಡು ಗೋಳಾಡಿದ ಕುಟುಂಬದವರು
- ಕೃಷ್ಣಾ ನದಿ ಪ್ರವಾಹದಿಂದ ಜಲಾವೃತಗೊಂಡಿದ್ದ ಮುತ್ತೂರಿನ ಠಕ್ಕಪ್ಪ ಯರಗಾವಿ ಎಂಬ ವ್ಯಕ್ತಿ
- ಮನೆಯ ಸಾಮಗ್ರಿಗಳೊಂದಿಗೆ ಪರಿಹಾರ ಕೇಂದ್ರಕ್ಕೆ ತೆರಳುವ ವೇಳೆ ಹಾವು ಕಚ್ಚಿ ಅಸ್ವಸ್ತಗೊಂಡಿದ್ದ
- ಆತನನ್ನು ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಿಸಲಾಗಿತ್ತು
- ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ
- ಮಲಪ್ರಭಾ ನದಿ ಪ್ರವಾಹ ಕಂಡು ಮೃತಪಟ್ಟ ಬಾದಾಮಿ ತಾಲೂಕು ಕರ್ಲಕೊಪ್ಪ ಗ್ರಾಮದ ಭೀಮಪ್ಪ ನಿಂಗಪ್ಪ ಜಾಲಿಕಟ್ಟಿ
- ಪ್ರವಾಹದ ನೀರಿನಲ್ಲಿ ಸಿಲುಕಿದ್ದ ತನ್ನ ಆಡು ತರಲು ಹೋಗಿದ್ದ
- ಪ್ರವಾಹ ಕಂಡು ಹೃದಯಾಘಾತಕ್ಕೊಳಗಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದ
- ನೀರಿನಲ್ಲಿ ಕುಸಿದ ಬಿದ್ದ ವೇಳೆ ಕಲುಷಿತ ನೀರೂ ಕುಡಿದಿದ್ದರಿಂದ ಮೃತಪಟ್ಟಿದ್ದ
- ಮೂರು ಕುಟುಂಬಕ್ಕೂ ಪ್ರವಾಹ ಪರಿಹಾರ ನಿಧಿಯಿಂದ ತಲಾ 4 ಲಕ್ಷ, ಸಿಎಂ ಪರಿಹಾರ ನಿಧಿಯಿಂದ ತಲಾ1 ಲಕ್ಷ ಸೇರಿ ಒಟ್ಟು ತಲಾ 5 ಲಕ್ಷ ಪರಿಹಾರ ಘೋಷಣೆ
ಕಡಿಮೆಯಾದ ಮಳೆಯ ಅಬ್ಬರ: ಹಲವು ಜಿಲ್ಲೆಗಳಲ್ಲಿ ತಗ್ಗಿದ ಪ್ರವಾಹ; ವರುಣಾಘಾತಕ್ಕೆ ಒಟ್ಟು 40 ಮಂದಿ ಬಲಿ - ವರುಣನ ಮುನಿಸು
23:01 August 11
ಮೂವರನ್ನು ಬಲಿ ಪಡೆದ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿ ಪ್ರವಾಹ
22:47 August 11
ಮತ್ತೆ ತನ್ನ ಸಹಜ ಸ್ಥಿತಿಗೆ ಮರಳುತ್ತಿರುವ ಸಕಲೇಶಪುರ
- ಕಳೆದ ಒಂದು ವಾರದಿಂದ ಸುರಿದ ಮಹಾಮಳೆಗೆ ತತ್ತರಗೊಂಡಿದ್ದ ಸಕಲೇಶಪುರ ಮತ್ತೆ ತನ್ನ ಸಹಜ ಸ್ಥಿತಿಗೆ ಮರಳುತ್ತಿದೆ
- ಹೇಮಾವತಿ ಒಳಹರಿವು ಕೂಡಾ ಇಳಿಮುಖವಾಗಿದ್ದು, ತಾಲ್ಲೂಕಿನ ಜನತೆಗೆ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ
- ಬೇಲೂರು, ಆಲೂರು, ಸಕಲೇಶಪುರ ಭಾಗದಲ್ಲಿ ಒಳಹರಿವಿನ ಪ್ರಮಾಣ ತಗ್ಗಿದ್ದು, ಜಲಾಶಯಕ್ಕೆ ಇವತ್ತು 70 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬಂದಿದೆ.
- ಸಕಲೇಶಪುರದ ಆಜಾದ್ ಬಡಾವಣೆ, ಸಂತವೇರಿ ಗ್ಯಾರೇಜ್ ಲೈನ್, ಹೌಸಿಂಗ್ ಬೋರ್ಡ್ ಜಲಾವೃತಗೊಂಡಿದ್ದು, ಮಳೆ ತಗ್ಗಿದ್ದರಿಂದ ಮೋಟರ್ ಮೂಲಕ ನೀರನ್ನು ಎತ್ತಿ ಹೊರಬಿಡಲಾಗುತ್ತಿದೆ
- ಕಳೆದ ವರ್ಷ ವಾಡಿಕೆಗಿಂತ ಮೂರು ಪಟ್ಟು ಹೆಚ್ಚು ಮಳೆಯಾಗಿದ್ದರೆ, ಈ ಬಾರಿ ಹತ್ತು ಪಟ್ಟು ಹೆಚ್ಚು ಮಳೆಯಾಗಿದೆ
- ಮಹಾಮಳೆಗೆ ಜಿಲ್ಲೆಯಾದ್ಯಂತ 430 ಕ್ಕೂ ಅಧಿಕ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಡಿತ
21:40 August 11
ಮೂರು ದಿನಗಳಿಂದ ಪ್ರವಾಹದಲ್ಲಿ ಸಿಲುಕಿದ್ದ ತಾಯಿ- ಮಗಳ ರಕ್ಷಿಸಿದ ಸಾಹಸಿ ಯುವಕರು
- ಕಳೆದ ಮೂರು ದಿನಗಳಿಂದ ಪ್ರವಾಹದಲ್ಲಿ ಸಿಲುಕಿದ್ದ ವೃದ್ದ ತಾಯಿ ಹಾಗೂ ಮಗಳ ರಕ್ಷಣೆ
- ತಾಯಿ- ಮಗಳ ರಕ್ಷಿಸಿ ಸಾಹಸ ಮೆರೆದ ಯುವಕರು
- ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಹಡಗಲಿ ಗ್ರಾಮದಲ್ಲಿ ಘಟನೆ
- ಮೂರು ದಿನಗಳಿಂದ ಮಲಪ್ರಭ ಹಾಗೂ ಬೆಣ್ಣೆಹಳ್ಳದ ಪ್ರವಾಹಕ್ಕೆ ತುತ್ತಾಗಿದ್ದ ಹೊಳೆ ಹಡಗಲಿ ಗ್ರಾಮ
- ಹಲವು ವರ್ಷಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ವೃದ್ಧೆ ಕಲ್ಲಮ್ಮ
- ತಾಯಿಯ ಆರೈಕೆಗಾಗಿ ಅಲ್ಲಿಯೇ ಉಳಿದಿದ್ದ ಮಗಳು ಜಯಶ್ರೀ
- ಎದ್ದು ಬರಲಾಗದ ಸ್ಥಿತಿಯಲ್ಲಿದ್ದ ಕಲ್ಲಮ್ಮರ ರಕ್ಷಣೆ
- ಅನ್ನ ನೀರಿಲ್ಲದೆ, ವಿದ್ಯುತ್ ಸಂಪರ್ಕವೂ ಇಲ್ಲದೇ ಕತ್ತಲಲ್ಲೇ ಜೀವ ಹಿಡಿದು ಬದುಕಿದ್ದ ಜೀವಗಳು
- ಇಂದು ಹೊಳೆ ಹಡಗಲಿ ಗ್ರಾಮದ ಕೆಲ ಯುವಕರು ತಮ್ಮ ಮನೆಗಳ ಪರಿಸ್ಥಿತಿ ನೋಡೋಕೆ ಎದೆಯೆತ್ತರ ನಿಂತಿದ್ದ ನೀರಲ್ಲಿ ಈಜಿ ಹೋಗಿದ್ದರು
- ಈ ವೇಳೆ ಯುವಕರ ಧ್ವನಿ ಕೇಳಿದ ಜಯಶ್ರೀ ಕಣ್ಣೀರಿಡುತ್ತಾ ಸಹಾಯಕ್ಕಾಗಿ ಅಂಗಲಾಚಿದ್ದರು
- ಆಗ ಅಲ್ಲಿಯೇ ಇದ್ದ ಮೇಲ್ಚಾವಣಿಗೆ ಉಪಯೋಗಿಸಿ, ತಗಡಿನ ಮೇಲೆ ವೃದ್ಧೆಯನ್ನು ಮಲಗಿಸಿ ಸುಮಾರು ಒಂದೂವರೆ ಕಿ.ಮೀ ನೀರಲ್ಲಿ ಕರೆದುಕೊಂಡು ಬಂದ ಯುವಕರು
- ಬಳಿಕ ನಾಲ್ಕು ಕಿ.ಮೀ ದೂರದಲ್ಲಿರೋ ಆಸರೆ ಗ್ರಾಮಕ್ಕೆ ಸೇರಿಸಿದ್ದಾರೆ
- ಮಂಜು ದೊಡ್ಡಮನಿ, ಮೈಲಾರ ಮಡಿವಾಳರ, ಶೇಖಪ್ಪ ತಾಳಿ ಹಾಗೂ ಅರುಣ್ ಚಲವಾದಿ - ಸಹಾಯ ಮಾಡಿದ ಯುವಕರು
- ಯುವಕರ ಸಾಹಸವೀಗ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ
21:19 August 11
ಕಡಿಮೆಯಾದ ಮಳೆಯ ಅಬ್ಬರ: ಹಲವು ಜಿಲ್ಲೆಗಳಲ್ಲಿ ತಗ್ಗಿದ ಪ್ರವಾಹ; ವರುಣಾಘಾತಕ್ಕೆ ಒಟ್ಟು 40 ಮಂದಿ ಬಲಿ
- ರಾಜ್ಯದಲ್ಲಿ ಉಂಟಾಗಿರುವ ಭೀಕರ ಪ್ರವಾಹಕ್ಕೆ ಈವರೆಗೆ ಒಟ್ಟು 40 ಮಂದಿ ಸಾವಿಗೀಡಾಗಿದ್ದು, 14 ಮಂದಿ ನಾಪತ್ತೆಯಾಗಿದ್ದಾರೆ
- ಬೆಳಗಾವಿಯಲ್ಲಿ ಈವರೆಗೆ 12 ಮಂದಿ ಸಾವಿಗೀಡಾಗಿದ್ದರೆ, ಕೊಡಗಿನಲ್ಲಿ ಒಟ್ಟು 7 ಮಂದಿ ಸಾವು ವರದಿ
- ಉತ್ತರ ಕನ್ನಡದಲ್ಲಿ 4, ಶಿವಮೊಗ್ಗ 3, ಧಾರವಾಡ 3, ದ.ಕನ್ನಡ, ಉಡುಪಿ, ಚಿಕ್ಕಮಗಳೂರು, ಮೈಸೂರಿನಲ್ಲಿ ತಲಾ 2 ಮಂದಿ ಮಳೆ ಅಬ್ಬರಕ್ಕೆ ಬಲಿ
- ಆದರೆ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ನೆರೆ ಪೀಡಿತರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ
ಅಣೆಕಟ್ಟುಗಳ ನೀರಿನ ಒಳ-ಹೊರ ಹರಿವು:
- ಆಲಮಟ್ಟಿ ಅಣೆಕಟ್ಟಿನಿಂದ ಸಂಜೆ ವೇಳೆಗೆ ಸುಮಾರು 6.16 ಲಕ್ಷ ಕ್ಯುಸೆಕ್ಸ್ ಒಳಹರಿವು ಇದ್ದರೆ, ಹೊರ ಹರಿವು ಪ್ರಮಾಣ 5.4 ಲಕ್ಷ ಕ್ಯುಸೆಕ್ಸ್ ಇದೆ
- ನಾರಾಯಣಪುರ ಅಣೆಕಟ್ಟಿಗೆ ಸಂಜೆ ವೇಳೆಗೆ ಸುಮಾರು 6 ಲಕ್ಷ ಕ್ಯುಸೆಕ್ಸ್ ಒಳಹರಿವು ಇದ್ದರೆ, 6.11 ಲಕ್ಷ ಕ್ಯುಸೆಕ್ಸ್ ಹೊರ ಹರಿವು ಇದೆ
ಪರಿಹಾರ ಕಾರ್ಯ ಹಾಗೂ ಹಾನಿಗಳ ವಿವರ:
- ಒಟ್ಟು ಸಾವು- 40
- ನಾಪತ್ತೆ -14
- ಜಾನುವಾರುಗಳ ಸಾವು- 525
- ಪ್ರವಾಹ ಪೀಡಿತರ ರಕ್ಷಣೆ- 5,81,702
- ಜಾನುವಾರುಗಳ ರಕ್ಷಣೆ- 50,595
- ಒಟ್ಟು ಗಂಜಿ ಕೇಂದ್ರ- 1168
- ಗಂಜಿ ಕೇಂದ್ರದಲ್ಲಿನ ಸಂತ್ರಸ್ತರು- 3,27,354
- ಬೆಳೆ ನಷ್ಟ ಪ್ರಮಾಣ- 4.20 ಲಕ್ಷ ಹೆಕ್ಟೇರ್
- ಹಾನಿಯಾದ ಮನೆಗಳು -28,325
21:08 August 11
ಹಾವೇರಿ: ಮೋಜಿಗಾಗಿ ತುಂಬಿ ಹರಿಯುವ ವರದಾ ನದಿಗೆ ಹಾರಿ ಹುಚ್ಚು ಸಾಹಸಕ್ಕೆ ಕೈ ಹಾಕುತ್ತಿರುವ ಯುವಕರು
- ಹಾವೇರಿ ಜಿಲ್ಲೆಯಲ್ಲಿ ವರುಣನ ಆರ್ಭಟ ತಗ್ಗಿದರೂ ನಿಲ್ಲದ ನದಿಗಳ ಪ್ರವಾಹ
- ನೀರಿನಿಂದ ತಪ್ಪಿಸಿಕೊಳ್ಳಲು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ಜನರು
- ಇನ್ನೊಂದೆಡೆ ಮೋಜಿಗಾಗಿ ತುಂಬಿ ಹರಿಯುವ ವರದಾ ನದಿಗೆ ಹಾರಿ ಹುಚ್ಚು ಸಾಹಸಕ್ಕೆ ಕೈ ಹಾಕುತ್ತಿರುವ ಯುವಕರು
- ನೀರಿಗೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದರೂ ಹುಂಬತನ ಪ್ರದರ್ಶಿಸುತ್ತಿರುವ ಯುವಕರು
- ನಿಮ್ಮ ಧೈರ್ಯವನ್ನ ಸಂತ್ರಸ್ತರ ರಕ್ಷಣೆಗೆ ಉಪಯೋಗಿಸಿ
- ಜೀವರಕ್ಷಕ ಉಡುಗೆ ತೊಟ್ಟು ಸಂತ್ರಸ್ತರ ರಕ್ಷಣೆಗೆ ಮುಂದಾಗುವಂತೆ ಮಾನವ ರಕ್ಷಣಾ ಘಟಕ ಆಗ್ರಹ
20:54 August 11
ಮಂಗಳೂರು: ಪಾರ್ಶ್ವವಾಯು ಪೀಡಿತ ವ್ಯಕ್ತಿಯನ್ನು 5 ಕಿ.ಮೀ. ವರೆಗೆ ಹೊತ್ತು ತಂದ ಪೊಲೀಸ್ ಸಿಬ್ಬಂದಿ
- ಬೆಳ್ತಂಗಡಿ ತಾಲೂಕಿನಲ್ಲಿ ನಿನ್ನೆ ತೀವ್ರ ಪ್ರವಾಹದಲ್ಲಿ ಸಿಲಿಕಿದ್ದವರ ರಕ್ಷಣೆ
- ಪ್ರವಾಹದಿಂದ ಹಲವಾರು ಮನೆಗಳಿಗೆ ಸಂಪರ್ಕ ಕಡಿತ
- ಮನೆಯಲ್ಲಿ ಸಿಲುಕಿಕೊಂಡಿರುವವರನ್ನು ರಕ್ಷಿಸಿದ ರಕ್ಷಣಾ ಸಿಬ್ಬಂದಿ
- ಮಿತ್ತಬಾಗಿಲು ಗ್ರಾಮದಲ್ಲಿ ಪಾರ್ಶ್ವವಾಯು ಪೀಡಿತ ವ್ಯಕ್ತಿಯೊಬ್ಬರನ್ನು ಸುಮಾರು 5 ಕಿ.ಮೀ. ವರೆಗೆ ಹೊತ್ತು ತಂದ ಪೊಲೀಸ್
- ಹರಸಾಹಸ ಪಟ್ಟು ಪೊಲೀಸ್ ಹಾಗೂ ಎನ್ಡಿಆರ್ಎಫ್ ಸಿಬ್ಬಂದಿಯಿಂದ ಜನರ ರಕ್ಷಣೆ
20:42 August 11
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಹೊರನಾಡು ಭಾಗಗಳಿಗಿಲ್ಲ ಸಾರಿಗೆ ಸೇವೆ
ರಸ್ತೆ ಸಂಚಾರದಲ್ಲಿ ವ್ಯತ್ಯಯ ಮತ್ತು ನದಿ ತುಂಬಿ ಹರಿಯುತ್ತಿರುವುದರಿಂದ ಸಾರಿಗೆ ಸೇವೆ ಸಂಪೂರ್ಣ ಬಂದ್
ಕಣ್ಣನೂರು, ಕಾಸರಗೋಡು, ತಲಿಚೇರಿ, ತೀರ್ಥಹಳ್ಳಿ, ಕೊಲ್ಲಾಪುರ, ಹೊರನಾಡು, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಭಾಗಗಳಲ್ಲಿ ಬಸ್ ಸೇವೆ ಸ್ಥಗಿತ
ಇತ್ತ ಕೊಯಿಕ್ಕಾಡ್, ಮಂಗಳೂರು, ಕುಂದಾಪುರ ಭಾಗಗಳಲ್ಲಿ ಎಂದಿನಂತೆ ಬಸ್ ಸಂಚಾರ ಮುಂದುವರೆದಿದೆ
20:40 August 11
ಇನ್ನೂ 5 ದಿನಗಳ ಕಾಲ ಬಿಡದೇ ಕಾಡಲಿದ್ದಾನೆ ವರುಣ: ಹವಾಮಾನ ಇಲಾಖೆ
- ಪ್ರವಾಹ ಭೀತಿ, ಗುಡ್ಡ ಕುಸಿತದ ಆತಂಕದಲ್ಲಿರುವ ಜನರಿಗೆ ಇನ್ನು 5 ದಿನಗಳ ಕಾಲ ವರುಣ ಮತ್ತೆ ತನ್ನ ಅಬ್ಬರ ತೋರಲಿದ್ದಾನೆ
- ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಕೊಡುಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ
- ಬೆಳಗಾವಿ, ಧಾರವಾಡ, ಹಾವೇರಿ ಭಾಗಗಳಲ್ಲಿ ಹೆಚ್ಚು ಮಳೆಯಾಗುವ ಮುನ್ನೆಚ್ಚರಿಕೆ
- ಸುರಕ್ಷಿತ ಪ್ರದೇಶದಲ್ಲಿ ಇರುವಂತೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
20:27 August 11
ರಂಗನತಿಟ್ಟಿನ ಬೋಟಿಂಗ್ ಪಾಯಿಂಟ್, ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಮುಳುಗಡೆ
- ಕೆ.ಆರ್.ಎಸ್‌ನಿಂದ ಗಂಟೆ ಗಂಟೆಗೂ ಹೊರ ಹರಿವಿನ ಪ್ರಮಾಣ ಹೆಚ್ಚಳ
- ಅಣೆಕಟ್ಟೆಯಿಂದ ನದಿಗೆ 1.60 ಲಕ್ಷ ಕ್ಯೂಸೆಕ್ ನೀರು ಹರಿವು
- ಇದರಿಂದ ಪ್ರಸಿದ್ದ ಪ್ರವಾಸಿತಾಣ, ಪಕ್ಷಿಪ್ರಿಯರ ಹಾಟ್ ಸ್ಪಾಟ್ ರಂಗನತಿಟ್ಟಿನ ಬೋಟಿಂಗ್ ಪಾಯಿಂಟ್ ಮುಳುಗಡೆ
- ಅಪಾಯದ ಅಂಚಿನಲ್ಲಿ ಇತಿಹಾಸ ಪ್ರಸಿದ್ಧ ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ
20:14 August 11
ಉತ್ತರ ಕರ್ನಾಟಕದ ಪ್ರವಾಹಕ್ಕೆ ಮರುಗಿದ ಈ ಗ್ರಾಮ: ಚಪಾತಿ ತಯಾರಿಸಿ ಸಂತ್ರಸ್ತರಿಗೆ ತಲುಪಿಸಲು ಮುಂದಾದ ಗ್ರಾಮಸ್ಥರು
- ವರುಣನ ಅಬ್ಬರಕ್ಕೆ ತತ್ತರಿಸುತ್ತಿರುವ ಉತ್ತರ ಕರ್ನಾಟಕಕ್ಕೆ ಸಹಾಯಹಸ್ತ ಚಾಚಲು ಮುಂದಾದ ಚಾಮರಾಜನಗರದ ಗ್ರಾಮ
- ಇಡೀ ಗ್ರಾಮವೇ ಮುಂದಾಗಿ ಚಪಾತಿ ತಯಾರಿಕೆಯಲ್ಲಿ ತೊಡಗಿಸಿಕೊಂಡ ಯಳಂದೂರು ತಾಲೂಕಿನ ಡಿ.ಕಂದಹಳ್ಳಿ ಗ್ರಾಮಸ್ಥರು
- ಊರಿನ ಮಹಿಳೆಯರೆಲ್ಲಾ ಸೇರಿ 4 ಕ್ವಿಂಟಾಲ್ ಗೋಧಿ ಹಿಟ್ಟಿನಲ್ಲಿ ಚಪಾತಿ ತಯಾರಿಸುತ್ತಿದ್ದಾರೆ
- ಸುಮಾರು 15 ಸಾವಿರಕ್ಕೂ ಹೆಚ್ಚು ಚಪಾತಿಗಳನ್ನು ತಯಾರಿಸಿ ನೆರೆ ಸಂತ್ರಸ್ತರಿಗೆ ತಲುಪಿಸುವ ಗುರಿ ಹೊಂದಿರುವ ಗ್ರಾಮಸ್ಥರು
- ಇದಕ್ಕಾಗಿ ಗ್ರಾಮದಲ್ಲಿ ಚಂದಾ ವಸೂಲಿ
- ಗ್ರಾಮಸ್ಥರ ಕಾರ್ಯಕ್ಕೆ ಗ್ರಾಮದ ಶಿಕ್ಷಕರು, ಸರ್ಕಾರಿ ನೌಕರರು ಸಾಥ್
19:49 August 11
ನಾಳೆ ರಾಜ್ಯದ ಕರಾವಳಿ ನೆರೆ ಹಾನಿ ಪ್ರದೇಶಗಳ ವೀಕ್ಷಣೆ ಮಾಡಲಿರುವ ಸಿಎಂ ಯಡಿಯೂರಪ್ಪ
- ನಾಳೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಯಡಿಯೂರಪ್ಪ ಭೇಟಿ
- ಇಂದೇ ಕರಾವಳಿ ಕರ್ನಾಟಕದ ನೆರೆ ಹಾನಿ ಪ್ರದೇಶಗಳಿಗೆ ಭೇಟಿ ನಿಗದಿಯಾಗಿತ್ತು
- ಅಮಿತ್ ಶಾ ವೈಮಾನಿಕ ಸಮೀಕ್ಷೆ ಹಿನ್ನೆಲೆ ಭೇಟಿಯನ್ನು ರದ್ದುಗೊಳಿಸಿದ್ದರು
- ಇದೀಗ ನಾಳೆ ಕರಾವಳಿ ಭಾಗಗಳಿಗೆ ಭೇಟಿ ನೀಡಿ ನೆರೆ ಹಾನಿ ಪ್ರದೇಶಗಳ ವೀಕ್ಷಣೆ ಮಾಡಲಿದ್ದಾರೆ
- ಮೊದಲಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿಗೆ ಭೇಟಿ
- ಬಳಿಕ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ನೆರೆ ಹಾನಿ ವೀಕ್ಷಣೆ
- ಮಂಗಳವಾರ ಕಾರವಾರದಿಂದ ಹೊರಟು ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಗಳ ಮಳೆಹಾನಿ ಕುರಿತು ಪರಿಶೀಲನೆ ನಡೆಸಿ ಬೆಂಗಳೂರಿಗೆ ಸಿಎಂ ವಾಪಸಾಗಲಿದ್ದಾರೆ
19:42 August 11
ಕೊಡಗು: ನೆರವಿಗೆ ಹೋಗಿ ಅಪಾಯದಲ್ಲಿ ಸಿಲುಕಿದ ಶಾಸಕ ಬೋಪಯ್ಯ, ಜಿ ಪಂ ಸದಸ್ಯ
- ಕಣ್ಮರೆಯಾದವರನ್ನು ಹುಡುಕಲು ತೆರಳಿದ್ದ ಶಾಸಕ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಅಪಾಯದಲ್ಲಿ
- ವಿರಾಜಪೇಟೆಯ ತೋರಾದಲ್ಲಿ ಸಿಲುಕಿರೋ ಶಾಸಕ ಬೋಪಯ್ಯ ಹಾಗೂ ಜಿ ಪಂ ಸದಸ್ಯ ಹರೀಶ್
- ವಾಪಾಸ್ಸು ಬರಲಾಗದೆ, ಸಂಪರ್ಕಕ್ಕೂ ಸಿಗದೇ ಕುರ್ಮಾದಲ್ಲಿರೋ ಬೋಪಯ್ಯ
- 8ಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದ ಸ್ಥಳಕ್ಕೆ ತೆರಳಿದ್ದ ಮಾಜಿ ಸ್ಪೀಕರ್, ಹಾಲಿ ಶಾಸಕ ಬೋಪಯ್ಯ
19:34 August 11
ಹೀಗಿದೆ ಕೆಆರ್ಎಸ್ನ ಇಂದಿನ ನೀರಿನ ಮಟ್ಟ
- ಕೆಆರ್‌ಎಸ್ ನೀರಿನ ಮಟ್ಟ-121.00 ಅಡಿ
- ಒಳಹರಿವು-2,07,852 ಕ್ಯೂಸೆಕ್
- ಹೊರಹರಿವು-1,53,759 ಕ್ಯೂಸೆಕ್
- ಒಟ್ಟು ಸಂಗ್ರಹ- 44.327 ಟಿಎಂಸಿ
19:26 August 11
ಕೊಡಗಿನ ನಿರಾಶ್ರಿತರಿಗೆ ಒದಗಿಸುವಷ್ಟು ಪರಿಹಾರ ಸಂಗ್ರಹವಾಗಿದೆ: ಡಿಸಿ
- ಕೊಡಗಿನ ಪ್ರಾಕೃತಿಕ ವಿಕೋಪಕ್ಕೆ ಸ್ಪಂದಿಸಿದ ಎಲ್ಲರಿಗೂ ಧನ್ಯವಾದ
- ಕೊಡಗಿನ ನಿರಾಶ್ರಿತರಿಗೆ ಒದಗಿಸುವಷ್ಟು ಪರಿಹಾರ ಸಂಗ್ರಹವಾಗಿದೆ
- ಸದ್ಯ ಸಾಮಾಗ್ರಿ ಸಂಗ್ರಹಾಣಾಲಯ ಮುಚ್ಚಲಾಗಿದೆ
- ಕೊಡಗಿಗೆ ಸಾಮಾಗ್ರಿಗಳ ಅಗತ್ಯವಿಲ್ಲ ಎಂದು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಡಿಸಿ ಅನೀಸ್ ಕಣ್ಮನಿ ಜಾಯ್
19:20 August 11
ಚಿಕ್ಕಮಗಳೂರು: ಜೀವ ಕೈಯಲ್ಲಿ ಹಿಡಿತು ಗುಡ್ಡದ ಮೇಲೆ ಕುಳಿತಿದ್ದ ಸಂತ್ರಸ್ತರನ್ನು ರಕ್ಷಿಸಿದ ಯೋಧರು
- ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹಾಗೂ ಎನ್ ಪುರ ತಾಲೂಕಿಗೆ ಸಂತ್ರಸ್ತರ ರಕ್ಷಣೆಗೆ ನಿನ್ನೆ ಬಂದಿದ್ದ 40 ಯೋಧರು
- ಯೋಧರಿಂದ ಕೊಟ್ಟಿಗೆಹಾರದ ಬಳಿ ಇರುವ ಆಲೇಖಾನ್ ಹೊರಟ್ಟಿ ಗ್ರಾಮದಲ್ಲಿ ಸುಮಾರು 75 ಜನರ ರಕ್ಷಣೆ
- ನಾಲ್ಕು ದಿನಗಳಿಂದ ಸಂಪರ್ಕ ಕಳೆದುಕೊಂಡಿದ್ದ ಗ್ರಾಮ
- ಕಣ್ಣೆದುರೇ ಜಾನುವಾರುಗಳು ಕೊಚ್ಚಿ ಹೋಗಿದನ್ನು ನೋಡಿ ಭಯಭೀತರಾಗಿದ್ದ ಗ್ರಾಮಸ್ಥರು
- ನಮ್ಮ ಜೀವನವೇ ಮುಗಿಯಿತು ಎಂದುಕೊಂಡವರನ್ನ ರಕ್ಷಿಸಿದ ಯೋಧರು
- ಗುಡ್ಡಗಾಡು ಪ್ರದೇಶದಲ್ಲಿ ಹಗ್ಗ ಕಟ್ಟಿ ಜನರನ್ನು ಹೆಗಲ ಮೇಲೆ ಹೊತ್ತು ಕೊಟ್ಟಿಗೆಹಾರಕ್ಕೆ ಕರೆದು ಕೊಂಡು ಬಂದ ಯೋಧರು
- ಜೀವ ಕೈಯಲ್ಲಿ ಹಿಡಿತು ಗುಡ್ಡದ ಮೇಲೆ ಕುಳಿತಿದ್ದ ನಮಗೆ ಯೋಧರು ಮರುಜೀವ ನೀಡಿದ್ದಾರೆ ಎಂದ ಸಂತ್ರಸ್ತರು
19:07 August 11
ರಾಜ್ಯ ಸರ್ಕಾರದ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡುತ್ತೇವೆ: ಪ್ರಹ್ಲಾದ್ ಜೋಶಿ
- ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ
- ಕೇಂದ್ರ ಸರ್ಕಾರ ಪ್ರವಾಹ ಪೀಡಿತರ ರಕ್ಷಣೆಗೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡುತ್ತಿದೆ
- ರಾಜ್ಯ ಸರ್ಕಾರ ಕೇಳಿದಷ್ಟು ರಕ್ಷಣಾ ತಂಡಗಳನ್ನು ಈಗಾಗಲೇ ಕಳುಹಿಸಲಾಗಿದೆ
- ಸುಮಾರು 10 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಅಂತಾ ಅಂದಾಜಿಸಲಾಗಿದೆ
- ಆರಂಭಿಕ ಕಂತಲ್ಲಿ ಮೂರು ಸಾವಿರ ಕೋಟಿ ರೂಪಾಯಿ ಕೊಡುವಂತೆ ಸಿಎಂ ಮನವಿ ಮಾಡಿದ್ದಾರೆ
- ದೆಹಲಿಗೆ ತೆರಳಿದ ನಂತರ ಈ ಬಗ್ಗೆ ಕೇಂದ್ರದ ಗಮನ ಸೆಳೆಯಲಾಗುವುದು
- ನಷ್ಟದ ಅಂದಾಜನ್ನು ರಾಜ್ಯದ ಅಧಿಕಾರಿಗಳು ಮಾಡುತ್ತಾರೆ
- ಪ್ರವಾಹ ಕಡಿಮೆಯಾದಂತೆ ನಷ್ಟದ ಅಂದಾಜಿನ ಬಗ್ಗೆ ಸ್ಪಷ್ಟತೆ ಸಿಗುತ್ತೆ
- ರಾಜ್ಯ ಸರ್ಕಾರದ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡುತ್ತೇವೆ ಎಂದ ಜೋಶಿ
18:12 August 11
ಕೇಂದ್ರ ಸರ್ಕಾರದ ಮೇಲೆ ವಿಶ್ವಾಸವಿದೆ, ರಾಜ್ಯಕ್ಕೆ ಹೆಚ್ಚಿನ ನೆರವು ಸಿಗಲಿದೆ: ಸಿಎಂ
- ಆ.16 ಕ್ಕೆ ದೆಹಲಿಗೆ ಹೋಗಿ ಪ್ರಧಾನ ಮಂತ್ರಿ, ಗೃಹ ಸಚಿವ, ಹಣಕಾಸು ಸಚಿವರನ್ನ ಭೇಟಿ ಮಾಡುತ್ತೇನೆ
- ಕೇಂದ್ರ ಸರ್ಕಾರದ ಮೇಲೆ ವಿಶ್ವಾಸವಿದೆ
- ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಅಮಿತ್ ಶಾ ಅವರೇ ಬಂದು ಪ್ರತ್ಯಕ್ಷವಾಗಿ ಪ್ರವಾಹ ಪರಿಸ್ಥಿತಿ ನೋಡಿ ಹೋಗಿದ್ದಾರೆ
- ವಾಸ್ತವ ಪರಿಸ್ಥಿತಿ ಅವರಿಗೆ ಅರ್ಥ ಆಗಿದೆ, ನಮಗೆ ಹೆಚ್ಚಿನ ನೆರವನ್ನ ಕೊಡುತ್ತಾರೆಂಬ ವಿಶ್ವಾಸವಿದೆ ಎಂದ ಸಿಎಂ ಬಿಎಸ್ವೈ
- ಶಾ ಜೊತೆ ಪ್ರವಾಹ ಸಮೀಕ್ಷೆ ಬಳಿಕ ಸಿಎಂ ಬಿ ಎಸ್ ಯಡಿಯೂರಪ್ಪ ಮಾಧ್ಯಮಗೋಷ್ಠಿಯಲ್ಲಿ ಹೇಳಿಕೆ
18:06 August 11
ಪ್ರವಾಹ ಸಮೀಕ್ಷೆ ಬಳಿಕ ಬೆಳಗಾವಿಯಲ್ಲಿ ಸಿಎಂ ಬಿಎಸ್ವೈ ಮಾಧ್ಯಮಗೋಷ್ಠಿ
- ಶಾ ಜೊತೆ ಪ್ರವಾಹ ಸಮೀಕ್ಷೆ ಬಳಿಕ ಸಿಎಂ ಬಿ ಎಸ್ ಯಡಿಯೂರಪ್ಪ ಮಾಧ್ಯಮಗೋಷ್ಠಿ
- ಯಾರ ಮನೆಗಳು ಹಾಳಾಗಿದೆ ಅವರಿಗೆ ಮನೆ ಕಟ್ಟಿಕೊಡಲಾಗುತ್ತದೆ
- ಯಾರು ತಮ್ಮ ಹಳ್ಳಿಗಳಿಗೆ ಹೋಗಲು ಆಗುವುದಿಲ್ಲ ಅವರಿಗೆ ಎತ್ತರದ ಪ್ರದೇಶಗಳಲ್ಲಿ ಜಮೀನು ಕೊಡಿಸಿ, ಪುನರ್ವಸತಿ ಕೇಂದ್ರ ಸ್ಥಾಪಿಸುವುದು
- 2009ರಲ್ಲಿ ಪ್ರವಾಹವಾದಾಗ ಹೇಗೆ ಸುಮಾರು 250-300 ಹಳ್ಳಿಗಳ ಅಭಿವೃದ್ಧಿ ಪಡಿಸಿ ಬಡವರಿಗೆ ಬದುಕಲು ಅನುಕೂಲ ಮಾಡಿಕೊಡಲಾಗಿತ್ತು
- ಅದೇ ರೀತಿ ಈ ಬಾರಿಯೂ ಮಾಡಲು ಇಚ್ಛಿಸಿದ್ದೇನೆ
- ಸರ್ಕಾರಿ ನೌಕರರ ಸಂಘ ಅವರ ಒಂದು ದಿನದ ಸಂಬಳ ನೀಡಿ, ಸುಮಾರು 200 ಕೋಟಿ ರೂಪಾಯಿಗಳನ್ನ ಪ್ರವಾಹಪೀಡಿತ ಪ್ರದೇಶಗಳಿಗೆ ನೀಡುವುದಾಗಿ ಹೇಳಿದೆ
- ಇದೇ ರೀತಿ ಉಳಿದಂತ ಕೈಗಾರಿಕೋದ್ಯಮದವರು ಸಹಾಯ ಮಾಡುವಂತೆ ಮನವಿ ಮಾಡುತ್ತೇನೆ
- ಜಾನುವಾರುಗಳಿಗೆ ಮೇವಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುವುದು
- ನಾಳೆಯಿಂದ ಆರು ಜಿಲ್ಲೆಗಳಿಗೆ ಪ್ರವಾಸ ಮಾಡಲಿದ್ದೇನೆ ಎಂದ ಬಿಎಸ್ವೈ
17:44 August 11
ವೈಮಾನಿಕ ಸಮೀಕ್ಷೆ ಮುಗಿಸಿ ದೆಹಲಿಗೆ ತೆರಳಿದ ಅಮಿತ್ ಶಾ
- ವೈಮಾನಿಕ ಸಮೀಕ್ಷೆ ಮುಗಿಸಿ ದೆಹಲಿಗೆ ತೆರಳಿದ ಅಮಿತ್ ಶಾ
- ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಸಭೆ ಬಳಿಕೆ ದೆಹಲಿಯತ್ತ ಮುಖ ಮಾಡಿದ ಶಾ
- ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದ ಶಾ
- ಸಿಎಂ ಯಡಿಯೂರಪ್ಪ ಜತೆಗೆ ಚಿಕ್ಕೋಡಿ, ಬಾಗಲಕೋಟೆಯಲ್ಲಿ ಪ್ರವಾಹ ಪೀಡಿತ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದ ಶಾ
- ಶಾ ರನ್ನು ಬೀಳ್ಕೋಟ್ಟ ರಾಜ್ಯದ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು
17:42 August 11
ಬೆಳಗಾವಿ: ಕೇಂದ್ರ ಗೃಹ ಸಚಿವರ ನೇತೃತ್ವದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ
ಸಿಎಂ ಜತೆ ವೈಮಾನಿಕ ಸಮೀಕ್ಷೆ ಬಳಿಕ ಸರ್ಕಾರದ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಶಾ
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಡೆದ ಸಭೆ
ಸಭೆಯಲ್ಲಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸುರೇಶ ಅಂಗಡಿ ಸೇರಿದಂತೆ ಜಿಲ್ಲೆಯ ಶಾಸಕರು ಭಾಗಿ
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಸಹ ಭಾಗಿ
ನೆರೆ, ಮುಳುಗಡೆ ಪ್ರದೇಶ, ಜೀವಹಾನಿ, ನಷ್ಟದ ಬಗ್ಗೆ ಮಾಹಿತಿ ಪಡೆದ ಅಮಿತ್ ಶಾ
17:38 August 11
ಬಾಗಲಕೋಟೆ: ಕೂಡಲಸಂಗಮ ಸಂಪೂರ್ಣ ಜಲಾವೃತ
- ಮಹಾರಾಷ್ಟ್ರ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆ
- ಬಸವಣ್ಣನವರ ನಾಡು, ಐಕ್ಯ ಸ್ಥಳ ಹಾಗೂ ಧಾರ್ಮಿಕ ಕ್ಷೇತ್ರ ಆಗಿರುವ ಕೂಡಲಸಂಗಮಕ್ಕೆ ನುಗ್ಗಿದ ನೀರು
- ಸಂಗಮನಾಥ ದೇವಾಲಯ ಸಂಪೂರ್ಣ ಜಲಾವೃತ
- ರಸ್ತೆ ಬಳಿ ಇದ್ದ ನೂರಾರು ಅಂಗಡಿ ಮುಗ್ಗಟ್ಟುಗಳು ಮುಳುಗಡೆ
- ಅಂಗಡಿಯಲ್ಲಿದ್ದ ಸಾಮಗ್ರಿಗಳು ನೀರಿನಲ್ಲಿ ಹರಿದು ಹೋಗಿ ಲಕ್ಷಾಂತರ ರೂಪಾಯಿ ನಷ್ಟ
- ಶ್ರಾವಣ ಮಾಸದ ನಿಮಿತ್ತ ಸಂಗಮನಾಥನ ದರ್ಶನಕ್ಕೆ ಬಂದು, ನಿರಾಶೆಯಿಂದ ವಾಪಾಸ್ಸು ತೆರಳುತ್ತಿರುವ ಭಕ್ತರು
17:25 August 11
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನೆರೆ ಪರಿಹಾರ ಸಾಮಗ್ರಿ ಸಂಗ್ರಹಣೆಗೆ ಕೇಂದ್ರ ಸ್ಥಾಪನೆ
- ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ನೆರವಿಗಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪರಿಹಾರ ಸಾಮಗ್ರಿಗಳ ಸಂಗ್ರಹಣೆಗೆ ಕೇಂದ್ರ ಸ್ಥಾಪನೆ
- ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ್ ಕುಮಾರ್ ಥಾಕ್ರೆ ಮಾಹಿತಿ
- ದಾನಿಗಳು ಹಾಲಿನ ಪುಡಿ, ಬಿಸ್ಕತ್, ಸಾಮಾನ್ಯ ಔಷಧಿಗಳು, ಸ್ಟಾನಿಟರಿ ಪ್ಯಾಡ್, ಡೆಟಾಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ನೀಡಬಹುದು
ದಾನಿಗಳು ಈ ಕೆಳಕಂಡ ವಿಮಾನ ನಿಲ್ದಾಣದ ಸಿಬ್ಬಂದಿಗಳನ್ನು ಸಂಪರ್ಕಿಸಿ ವಸ್ತುಗಳನ್ನು ತಲುಪಿಸಬಹುದು:
- ರಾಜಕುಮಾರ್ ಪತ್ತಾರ್-9916696765
- ಕುಮಾರ್ ಸೇನ್- 9886086088
- ಬಸವರಾಜ ಕೊಟಗಿ- 9164834872
- ಶರಣ್ಯ -6364562503
- ಶ್ರೀಪಾದ ಕುಲಕರ್ಣಿ-9448828807
- ಮಹಮದ್ ಅಮೀರ್-9496328858
- ಅರುಣ್ -9633398269
17:25 August 11
- ಕೃಷ್ಣ ನದಿ ತೀರದ ಹಳ್ಳಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವ ಕಾರಣ ತೆಪ್ಪ ಬಳಕೆ ಮಾಡದಂತೆ ಎಚ್ಚರಿಕೆ ನೀಡಲಾಗಿತ್ತು
- ಜಿಲ್ಲಾಡಳಿತ, ಪೊಲೀಸ್ ಇಲಾಖೆ ಡಂಗೂರ ಸಾರಿ ಎಚ್ಚರಿಕೆ ನೀಡಿದರೂ ಅಪಾಯ ಲೆಕ್ಕಿಸದೇ ತೆಪ್ಪ ಬಳಸುತ್ತಿರುವ ಡಿ.ರಾಂಪೂರ ಗ್ರಾಮಸ್ಥರು
- ಹೊಲಗದ್ದೆಗಳಿಗೆ ನೀರು ನುಗ್ಗಿದ ಹಿನ್ನೆಲೆ ಮೋಟರ್, ಪಂಪ್ಸೆಟ್ ಹಾಗೂ ಇತರೆ ಕೃಷಿ ವಸ್ತುಗಳನ್ನು ತರುವ ಸಲುವಾಗಿ ತೆಪ್ಪದ ಮೊರೆ ಹೋದ ರೈತರು
17:19 August 11
ಅಪಾಯವನ್ನು ಲೆಕ್ಕಿಸದೇ ತೆಪ್ಪೆ ಬಳಸುತ್ತಿರುವ ಡಿ.ರಾಂಪೂರ ಗ್ರಾಮಸ್ಥರು
- ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ರಣಭೀಕರ ಮಳೆ
- ಕುಶಾಲನಗರದ ಶೈಲಜಾ ಬಡಾವಣೆಯಲ್ಲಿ ಪ್ರವಾಹ ನೀರಿನಲ್ಲಿ ಹರಿದು ಬಂದ ನಾಗರ ಹಾವು
- ಹೆಡೆಬಿಚ್ಚಿ ನಿಂತ ಸರ್ಪ ಕಂಡು ಬೆಚ್ಚಿ ನಿಂತ ಜನರು
17:11 August 11
ಕೊಡಗು: ಪ್ರವಾಹ ನೀರಿನಲ್ಲಿ ಹರಿದು ಬಂದು ಹೆಡೆಬಿಚ್ಚಿ ನಿಂತ ಸರ್ಪ
- ತುಂಗಭದ್ರಾ ಜಲಾಶಯಕ್ಕೆ ನೀರಿನ ಒಳಹರವಿನ ಪ್ರಮಾಣ ಹೆಚ್ಚಳ
- ರಾಯಚೂರು ಜಿಲ್ಲೆಯ ಎಡಭಾಗದಲ್ಲಿ ಬರುವ ಸಿಂಧನೂರು, ಮಾನವಿ ಹಾಗೂ ರಾಯಚೂರು ತಾಲೂಕಿನ 30 ಗ್ರಾಮಗಳಿಗೆ ಪ್ರವಾಹ ಭೀತಿ
- ಹೀಗಾಗಿ ಮುಂಜಾಗೃತ ಕ್ರಮವಾಗಿ ನದಿಗೆ ತೆರಳದಂತೆ ಎಚ್ಚರಿಕೆ ನೀಡಿದ ಜಿಲ್ಲಾಡಳಿತ
- ನದಿ ಪಾತ್ರದ ಜನರಿಗೆ ಡಂಗೋರ ಸಾರುವ ಮೂಲಕ ಎಚ್ಚರಿಕೆ ಸಂದೇಶ ರವಾನೆ
- ಜಿಲ್ಲೆಯ ಬಲಭಾಗದಲ್ಲಿ ಉಕ್ಕಿ ಹರಿಯುತ್ತಿರುವ ಕೃಷ್ಣ ನದಿಯಿಂದ ದೇವದುರ್ಗ, ಲಿಂಗಸೂಗೂರು, ರಾಯಚೂರು ತಾಲೂಕುಗಳಿಗೆ ಪ್ರವಾಹ ಸಂಕಷ್ಟ
16:59 August 11
ರಾಯಚೂರು: ತುಂಗಾ ತೀರದಲ್ಲಿ ಪ್ರವಾಹ ಭೀತಿ
- ನಾರಾಯಣಪುರ ಜಲಾಶಯದಿಂದ 6.30 ಲಕ್ಷ ಕ್ಯೂಸೆಕ್ ಹಾಗೂ ಭೀಮಾ ನದಿಯಿಂದ 2.85 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ
- ಒಟ್ಟು 9.15 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಪರಿಣಾಮ ಅತಂತ್ರ ಪರಿಸ್ಥಿತಿಯಲ್ಲಿ ರಾಯಚೂರು ತಾಲೂಕಿನ ನಡುಗಡ್ಡೆ ಗ್ರಾಮಸ್ಥರು
- ಡಿ.ರಾಂಪೂರ ಗ್ರಾಮ ನೀರಿನಿಂದ ತುಂಬಿದ್ದು, ಪಕ್ಕದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್
- ಆತ್ಕೂರು,ಸರಜಾಪುರ,ಬುರ್ದಿಪಾಡ ಗ್ರಾಮಕ್ಕೆ ತೆರಳುವ ರಸ್ತೆ ಬಂದ್
- ಕುರ್ವಕುರ್ದಾ ಗ್ರಾಮದಲ್ಲಿ ನೆರೆಯಲ್ಲಿ ಸಿಲುಕಿರುವ 400 ಜನರು
- ನೆರೆಯಲ್ಲಿ ಸಿಲುಕಿರುವ ಗರ್ಭಿಣಿಯರು, ಮಕ್ಕಳು, ವೃದ್ಧರು
- ನಿನ್ನೆ ಕೆಲವರು ತೆಪ್ಪೆದ ಮೂಲಕ ಡಿ.ರಾಂಪುರ ಗ್ರಾಮಕ್ಕೆ ಬಂದಿದ್ದಾರೆ
- ಈಗ ನೀರು ಹೆಚ್ಚಾದ ಪರಿಣಾಮ ತೆಪ್ಪವೂ ಅಲ್ಲಿಗೆ ಹೋಗದ ಪರಿಸ್ಥಿತಿ
- ಅವರನ್ನು ರಕ್ಷಿಸಲು ಹೆಲಿಕಾಪ್ಟರ್ ಬರಬೇಕಾಗಿದೆ
- 2009ರಲ್ಲಿ ಉಂಟಾದ ಪ್ರವಾಹ ಮರುಕಳಿಸುವ ಭೀತಿಯಲ್ಲಿ ಜನರು
16:52 August 11
2009ರಲ್ಲಿ ಉಂಟಾದ ಪ್ರವಾಹ ಮರುಕಳಿಸುವ ಭೀತಿಯಲ್ಲಿ ರಾಯಚೂರು ಜನರು
- ತುಂಗಾಭದ್ರಾ ನದಿ ಪ್ರವಾಹದಿಂದ ಮುಳುಗಡೆಯಾದ ಹೊನ್ನಾಳಿಯ ಹತ್ತಾರು ಹಳ್ಳಿಗಳು
- ಪ್ರತಿ ಬಾರಿ ನಮ್ಮ ಮನೆಗಳಿಗೆ ನೀರು ನುಗ್ಗಿದಾಗ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದು ಬೇರೆಡೆ ಸ್ಥಳಾಂತರಿಸಿ ಮನೆ ಕಟ್ಟಿಸಿಕೊಡ್ತೀವಿ ಅಂತಾರೆ
- ಆದರೆ 10 ವರ್ಷಗಳಿಂದಲೂ ಭರವಸೆ ಮಾತ್ರವೇ ಹೊರತು ಮನೆ ನಿರ್ಮಿಸಿ ಕೊಟ್ಟಿಲ್ಲ ಎನ್ನುತ್ತಿರುವ ಸಂತ್ರಸ್ಥರು
16:38 August 11
ನಮ್ಮ ಕಷ್ಟ ಕೇಳಿ ಹೋದವರು ಮತ್ತೆ ಬರೋದಿಲ್ಲ: ಅಳಲು ತೋಡಿಕೊಂಡ ಹೊನ್ನಾಳಿ ನೆರೆ ಸಂತ್ರಸ್ಥರು
- ನಡುಗಡ್ಡೆಯಲ್ಲಿ ಸಿಲುಕಿದ್ದ ಅಧಿಕಾರಿಗಳನ್ನು ರಕ್ಷಣೆ ಮಾಡಿದ ಎನ್ಡಿಆರ್ಎಫ್ ತಂಡ
- ಲಿಂಗಸೂಗೂರು ತಾಲೂಕಿನ ಜಲದುರ್ಗ, ಶೀಲಹಳ್ಳಿ, ಯರಗೋಡಿ ಸೇತುವೆ ಮುಳುಗಡೆಯಿಂದ ನೆರೆಯಲ್ಲಿ ಸಿಲುಕಿದ್ದ ಅಧಿಕಾರಿಗಳು
- ತಹಸೀಲ್ದಾರ್, ಸಿಪಿಐ, ಪಿಎಸ್ಐ, ತಾ.ಪಂ. ಇಒ ಸೇರಿದಂತೆ 5 ಅಧಿಕಾರಿಗಳ ರಕ್ಷಣೆ
- ಗೋನವ್ಲಾಟ್ ಗ್ರಾಮದ ಮೂಲಕ ಬೋಟ್ನಿಂದ ಕಡದರಗಡ್ಡಿ ಗ್ರಾಮಕ್ಕೆ ತೆರಳಿ ಸುರಕ್ಷಿತವಾಗಿ ವಾಪಸ್ ಕರೆತಂದ ಎನ್ಡಿಆರ್ಎಫ್ ತಂಡ
16:28 August 11
ರಾಯಚೂರು: ನಡುಗಡ್ಡೆಯಲ್ಲಿ ಸಿಲುಕಿದ್ದ ಅಧಿಕಾರಿಗಳ ರಕ್ಷಣೆ
- ಪುನರ್ವಸತಿ ಕೇಂದ್ರದಲ್ಲಿರುವ ನಂಜನಗೂಡಿನ ಸಾವಿರಾರು ಜನರು
- ಕಬಿನಿ ನದಿಯ ಪ್ರವಾಹ ಸಂತ್ರಸ್ತರನ್ನು ಪುನರ್ವಸತಿ ಕೇಂದ್ರದಲ್ಲಿ ಭೇಟಿ ಮಾಡಿದ ಮೈಸೂರು ಡಿಸಿ ಅಭಿರಾಮ್ ಜಿ. ಶಂಕರ್
- ಸಂತ್ರಸ್ತರ ಜೊತೆ ಕುಳಿತು ಊಟ ಮಾಡಿ, ಸಮಸ್ಯೆ ಆಲಿಸಿದ ಡಿಸಿ
- ಆಸ್ತಿ-ಪಾಸ್ತಿ ದಾಖಲೆಗಳನ್ನು ಸರಿಪಡಿಸಿ ಪರಿಹಾರ ಕೊಡಿಸುವ ಭರವಸೆ ನೀಡಿ ಸಾಂತ್ವಾನ
16:21 August 11
ಪ್ರವಾಹ ಸಂತ್ರಸ್ತರ ಜೊತೆಯಲ್ಲೇ ಕುಳಿತು ಊಟ ಮಾಡಿ, ಸಮಸ್ಯೆ ಆಲಿಸಿದ ಮೈಸೂರು ಡಿಸಿ
- ಕೃಷ್ಣ ನದಿ ತೀರದ ಹಳ್ಳಿಗಳಲ್ಲಿರುವ ಜನರು ನದಿಯನ್ನು ದಾಟಲು ತೆಪ್ಪ-ಹರಿಗೋಳುಗಳನ್ನು ಬಳಸುವುದು ಅಪಾಯಕಾರಿ
- ನೀರಿನ ಸೆಳವು ಹೆಚ್ಚಾಗಿರುವುದರಿಂದ ಅಪಘಾತಗಳು ಸಂಭವಿಸಬಹುದು
- ಎಚ್ಚರಿಕೆ ನೀಡುತ್ತಿರುವ ಪೊಲೀಸರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು
- ಇದಕ್ಕೂ ಮೀರಿ ತೆಪ್ಪಗಳಲ್ಲಿ ನದಿ ದಾಟಲು ಪ್ರಯತ್ನಿಸಿದಲ್ಲಿ ಅಂತಹವರ ವಿರುದ್ಧ ಕ್ರಮ
- ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ಪ್ರಾಣಕ್ಕೆ ತೊಂದರೆಯಾಗುವ ಸಂದರ್ಭವಿದ್ದಲ್ಲಿ ಮಾತ್ರ NDRF ದೋಣಿಗಳನ್ನು ಬಳಸಲಾಗುವುದೆಂದ ಅಧಿಕಾರಿಗಳು
16:10 August 11
ಶಿವಮೊಗ್ಗದಲ್ಲಿ ಆರ್ಭಟ ನಿಲ್ಲಿಸಿದ ವರುಣ
- ರಾಯಚೂರು ತಾಲೂಕಿನ ನಡುಗಡ್ಡೆ ಗ್ರಾಮಗಳಲ್ಲಿ ನೀರಿನ ಪ್ರವಾಹ ಹೆಚ್ಚಳ
- ಮುಳುಗಡೆ ಭೀತಿಯಲ್ಲಿ ಡಿ.ರಾಂಪೂರು ಗ್ರಾಮ
- ಕುರ್ವಕಲಾ ,ಕುರ್ವಕುರ್ದ ಗ್ರಾಮದಲ್ಲಿ ನೆರೆಯಲ್ಲಿ ಸಿಲುಕಿರುವ 400 ಜನರು
- ಅವರ ಪರಿಸ್ಥಿತಿ ಅರಿಯುವ ಪ್ರಯತ್ನದಲ್ಲಿ ಜಿಲ್ಲಾಡಳಿತ
16:04 August 11
ರಾಯಚೂರು: ನದಿ ದಾಟಲು ತೆಪ್ಪ-ಹರಿಗೋಳುಗಳನ್ನು ಬಳಸುವುದು ಅಪಾಯಕಾರಿ
- ರಾಯಚೂರು ತಾಲೂಕಿನ ನಡುಗಡ್ಡೆ ಗ್ರಾಮಗಳಲ್ಲಿ ನೀರಿನ ಪ್ರವಾಹ ಹೆಚ್ಚಳ
- ಮುಳುಗಡೆ ಭೀತಿಯಲ್ಲಿ ಡಿ.ರಾಂಪೂರು ಗ್ರಾಮ
- ಕುರ್ವಕಲಾ ,ಕುರ್ವಕುರ್ದ ಗ್ರಾಮದಲ್ಲಿ ನೆರೆಯಲ್ಲಿ ಸಿಲುಕಿರುವ 400 ಜನರು
- ಅವರ ಪರಿಸ್ಥಿತಿ ಅರಿಯುವ ಪ್ರಯತ್ನದಲ್ಲಿ ಜಿಲ್ಲಾಡಳಿತ
15:23 August 11
ರಾಯಚೂರಿನ ನಡುಗಡ್ಡೆ ಗ್ರಾಮಗಳಲ್ಲಿ ಪ್ರವಾಹ ಹೆಚ್ಚಳ
-
ಪಕ್ಷದ ಮಾಜಿ ಸಂಸದರು, ಮಾಜಿ ಶಾಸಕರು ಹಾಗೂ ಮಾಜಿ ಸಚಿವರಿಂದ ಕೈಲಾದ ಸಹಾಯ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಸಂಗ್ರಹವಾದ ಮೊತ್ತವನ್ನು ಕಾಂಗ್ರೆಸ್ ನಾಯಕರು ಸಿಎಂ ಪರಿಹಾರ ನಿಧಿಗೆ ಸಲ್ಲಿಕೆ ಮಾಡಿದ್ದಾರೆ.
-
ಕೆಆರ್‌ಎಸ್ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ, ನದಿಗೆ ನೀರು ಹರಿಸಲಾಗುತ್ತಿದ್ದು ಪ್ರಸಿದ್ಧ ಪ್ರವಾಸಿ ತಾಣಗಳು ಮುಳುಗಡೆಯಾಗಿವೆ.
-
ತಲಕಾವೇರಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ವ್ಯಾಪಕವಾಗಿ ಮಳೆಯಾದ ಹಿನ್ನೆಲೆಯಲ್ಲಿ ಜೀವನದಿ ಕಾವೇರಿ ಉಕ್ಕಿ ಹರಿಯುತ್ತಿದ್ದಾಳೆ. ಹೀಗಾಗಿ ಕಾವೇರಿ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಕೆಆರ್‌ಎಸ್ ಜಲಾಶಯದಿಂದ ನದಿಗೆ 1.60 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ.
15:19 August 11
ವೈಮಾನಿಕ ಸಮೀಕ್ಷೆ ನಡೆಸುತ್ತಿರುವ ಅಮಿತ್ ಶಾ
- ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲಿ ಕ್ರಸ್ಟ್ಗೇಟ್ ಕೆಟ್ಟು ಹೋದ ಹಿನ್ನೆಲೆ ಅಪಾಯಕಾರಿ ರೀತಿಯಲ್ಲಿ ಕಾರ್ಮಿಕನೊಬ್ಬನನ್ನು ಕೆಳಗಿಸಿಳಿಸಿ ಅಧಿಕಾರಿಗಳು ರಿಪೇರಿ ಮಾಡಿಸಿದ್ದಾರೆ.
ಕೆ.ಆರ್.ಎಸ್. ನ 34 ಗೇಟ್ಗಳಿಂದ 1 ಲಕ್ಷ ಕ್ಯೂಸೆಕ್ಗೂ ಅಧಿಕ ನೀರನ್ನು ಕಾವೇರಿ ನದಿಗೆ ಬಿಡಲಾಗಿದೆ. ಜೊತೆಗೆ ಕಬಿನಿ ಜಲಾಶಯದಿಂದ ಕಪಿಲಾ ನದಿಗೆ 1 ಲಕ್ಷದ 20 ಸಾವಿರ ಕ್ಯೂಸೆಕ್ ನೀರನ್ನು ಸಹ ರಿಲೀಸ್ ಡಿರುವುದರಿಂದ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ, ಸೇತುವೆಗಳು ಮುಳುಗಿವೆ.
ಶನಿವಾರ ಕೆ.ಆರ್.ಎಸ್. ನ 34 ಗೇಟ್ಗಳಿಂದ 1 ಲಕ್ಷ ಕ್ಯೂಸೆಕ್ಗೂ ಅಧಿಕ ನೀರನ್ನು ಕಾವೇರಿ ನದಿಗೆ ಬಿಡಲಾಗಿದ್ದು. ಈ ಕಡೆ ಕಬಿನಿ ಜಲಾಶಯದಿಂದ ಕಪಿಲಾ ನದಿಗೆ 1 ಲಕ್ಷದ 20 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ. ಹೀಗಾಗಿ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ತಲಕಾಡು ಹಾಗೂ ಟಿ. ನರಸೀಪುರ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ಹೆಮ್ಮಿಗೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಜನರು ಹಾಗೂ ವಾಹನಗಳಿಗೆ ಬದಲಿ ಮಾರ್ಗ ಕಲ್ಪಿಸಲಾಗಿದೆ.
15:15 August 11

14:15 August 11

14:01 August 11
-
ಶಿರಸಿಯ ಯಲ್ಲಾಪುರದ ಬಾಳೆಹದ್ದು ಕ್ರಾಸ್ ಬಳಿ ಕಾರು ಮತ್ತು ಪಿಕಪ್ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.ಎಬಿವಿಪಿ ಖಂಡರಾಗಿದ್ದ ರವಿಕುಮಾರ್ ತಂಡ ಯಲ್ಲಾಪುರದ ಕಿರವತ್ತಿ ನಿರಾಶ್ರಿತ ಕೇಂದ್ರಕ್ಕೆ ಪರಿಹಾರ ಸಾಮಗ್ರಿ ನೀಡಿ ವಾಪಸ್ ಹೋಗುವಾಗ ಘಟನೆ ಸಂಭವಿಸಿದೆ.
13:50 August 11
-
ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಭಾರಿ ನಷ್ಟ ಉಂಟಾಗಿದ್ದು, ಕೇಂದ್ರ ಸರ್ಕಾರ ಪರಿಹಾರ ಧನ ಬಿಡುಗಡೆ ಮಾಡಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
-
ಕೂಡಲೇ ಪ್ರಧಾನಿ ನರೇಂದ್ರ ಮೋದಿ ನಾಳೆ ರಾಜ್ಯಕ್ಕೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಬೇಕು. ರಾಜ್ಯ ಸರ್ಕಾರ ಆಗಿರುವ ಹಾನಿಯ ವರದಿ ಸಲ್ಲಿಸಬೇಕು. ಇದರಿಂದ ಪ್ರಧಾನಿಯೇ ಕೂಡಲೆ ತುರ್ತು ಆದ್ಯತೆ ಮೇರೆಗೆ ₹5 ಸಾವಿರ ಕೋಟಿ ಬಿಡುಗಡೆ ಮಾಡಬೇಕು. ಇದನ್ನ ರಾಷ್ಟ್ರೀಯ ವಿಪತ್ತು ಅಂತಾ ಘೋಷಿಸಬೇಕು. ತಾರತಮ್ಯ ಮಾಡಬಾರದು. ವಿಳಂಬ ಆಗಬಾರದು ಎಂದು ಆಗ್ರಹಿಸಿದರು
13:48 August 11
-
ಬಳ್ಳಾರಿ ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯದಿಂದ ನದಿಗೆ ಅಂದಾಜು 1.25 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಪರಿಣಾಮ ಕಂಪ್ಲಿ ಕೋಟೆ ಬಳಿಯ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ.
13:38 August 11
ಪಿಎಂ ವೈಮಾನಿಕ ಸಮೀಕ್ಷೆ ನಡೆಸಲಿ: ಮಾಜಿ ಸಿಎಂ ಸಿದ್ದು
-
ಶಿವಮೊಗ್ಗದಲ್ಲಿ ಕಳೆದ ಐದು ದಿನಗಳಿಂದ ಸುರಿಯುತ್ತಿದ್ದ ಭಾರಿ ಮಳೆಗೆ ಇಲ್ಲಿನ ವಿದ್ಯಾನಗರದ ಮಾತಗಮ್ಮಾ ನಿವಾಸಿ ಮಂಜುನಾಥ್ ಎಂಬುವರ ಮನೆ ಮಾಲೀನ ಕಣ್ಮುಂದೆದೆಯೇ ಧರೆಗುರುಳಿದೆ. ಮನೆಯಲ್ಲಿ ನಾಲ್ಕು ಜನ ವಾಸವಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮನೆಯಲ್ಲಿದ್ದ ಪೀಠೋಪಕರಣಗಳಿಗೆ ಹಾನಿಯಾಗಿದೆ. ಹೀಗಾಗಿ ಮಂಜುನಾಥ್ ಕುಟುಂಬ ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
13:38 August 11
-
ಧಾರವಾಡ ತಾಲೂಕಿನ ಕಲ್ಲಾಪುರದ ಹಳ್ಳದಲ್ಲಿ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ರೈತ ಶವವಾಗಿ ಪತ್ತೆಯಾಗಿದ್ದಾನೆ. ಕಲ್ಲಾಪುರ ಗ್ರಾಮದ ಬಸಪ್ಪ ಪಾಟೀಲ (54) ಹಳ್ಳದ ಪ್ರವಾಹಕ್ಕೆ ನಾಪತ್ತೆಯಾಗಿದ್ದ ರೈತ. ಈತ ಪ್ರವಾಹಕ್ಕೆ ಸಿಲುಕಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ. ಹೊಲದಿಂದ ಹಿಂದಿರುಗಿ ಬರುವಾಗ ಕಲ್ಲಾಪುರ-ವೀರಾಪುರ ಮಧ್ಯದ ಹಳ್ಳದಲ್ಲಿ ಪ್ರವಾಹ ಬಂದಿದ್ದರಿಂದ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಸದ್ಯ ರೈತನ ಮೃತದೇಹ ಪತ್ತೆಯಾಗಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರೈತನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
13:37 August 11
-
ಕೊಳ್ಳೇಗಾಲ ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕೆಲವು ಗ್ರಾಮಗಳ ಗ್ರಾಮಸ್ಥರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
-
ನಾಡಿದ ಜೀವನದಿ ಕಾವೇರಿ ಮೈದುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹರಳೆ ಮತ್ತು ದಾಸನಪುರ ಗ್ರಾಮಗಳು ಜಲಾವೃತ ಹಂತ ತಲುಪಿವೆ.
13:36 August 11
ಕೊಚ್ಚಿ ಹೋಗಿದ್ದ ರೈತ ಶವವಾಗಿ ಪತ್ತೆ
- ಮಳೆಯ ಅಬ್ಬರಕ್ಕೆ ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಮುಂದುವರೆದಿದೆ. ನಾರಾಯಣಪುರ ಜಲಾಶಯ ಮತ್ತು ಭೀಮಾ ನದಿಯಿಂದ ಲಕ್ಷಾಂತರ ಕ್ಯೂಸೆಕ್ ನೀರು ಹರಿದು ಬಿಟ್ಟ ಪರಿಣಾಮ ಕುರವಕುಲ ನಡುಗಡ್ಡೆ ಪ್ರದೇಶಕ್ಕೆ ನೀರು ನುಗ್ಗುತ್ತಿದೆ. ನಡುಗಡ್ಡೆಯಲ್ಲಿ ವಾಸಿಸುವ ನೂರಾರು ಕುಟುಂಬಗಳ 500ಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿದ್ದಾರೆ.
-
ನಾರಾಯಣಪುರ ಜಲಾಶಯದಿಂದ 6.30 ಲಕ್ಷ ಕ್ಯೂಸೆಕ್ ಹಾಗೂ ಭೀಮಾ ನದಿಯಿಂದ 2.85 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟ ಪರಿಣಾಮ ತಾಲೂಕಿನ ಸಂಗಮವಾಗಿ ಭೀಮಾ ಮತ್ತು ಕೃಷ್ಣ ನದಿಯಲ್ಲಿ 9.15 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದೆ. ಇದರಿಂದ ಕುರವಕುಲ ನಡುಗಡ್ಡೆ ಪ್ರದೇಶಕ್ಕೆ ನೀರು ನುಗ್ಗುತ್ತಿದ್ದು, ನಡುಗಡ್ಡೆಯಲ್ಲಿ ವಾಸಿಸುವ ನೂರಾರು ಕುಟುಂಬದ 500ಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ನಡುಗಡ್ಡೆ ಪ್ರದೇಶದಲ್ಲಿನ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿ ಉಂಟಾಗಿದ್ದು, ಇದೀಗ ಮನೆಗಳಿಗೆ ನೀರು ನುಗ್ಗುವ ಆತಂಕ ಶುರುವಾಗಿದೆ.
13:34 August 11
ಚಾಮರಾಜನಗರದಲ್ಲೂ ಜಲಾವೃತ ಭೀತಿ
-
ಸರ್ಕಾರದಿಂದ ನೆರವು ಸಿಗದಿದ್ದರೂ ಆಸ್ತಿ ಮಾರಿ ನಿಮಗೆ ಸಹಾಯ ಮಾಡುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ನೆರೆ ಸಂತ್ರಸ್ತರಿಗೆ ಅಭಯ ನೀಡಿದ್ದಾರೆ.
-
ಬೆಳಗಾವಿಯಲ್ಲಿ ಭೀಕರ ಪ್ರವಾಹದಿಂದ ತತ್ತರಿಸಿರುವ ಜನತೆಗೆ ಸದ್ಯಕ್ಕೆ ಬೇಕಿರುವುದು ಸಾಂತ್ವನ. ಮನೆ-ಮಠ ಕಳೆದುಕೊಂಡು ಸಂಕಷ್ಟಕ್ಕೀಡಾದ ಜನರಿಗೆ ನನ್ನ ಆಸ್ತಿ ಮಾರಿಯಾದ್ರೂ ನಿಮ್ಮ ಬದುಕು ರೂಪಿಸಿಕೊಡುತ್ತೇನೆ ಎಂದು ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತ್ರಸ್ತರಿಗೆ ಧೈರ್ಯ ಹೇಳಿದ್ದಾರೆ.
13:33 August 11
-
ಮೈಸೂರಿನ ಮಳೆ ಹಾನಿ ಪ್ರದೇಶಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ರಾಜ್ಯದ ನೆರೆ ನಿರ್ವಹಣೆ ಬಿಎಸ್ವೈ ಸರ್ಕಾರಕ್ಕೆ ದೊಡ್ಡ ಸವಾಲು. ನೆರೆ ನಿರ್ವಹಣೆ ಮಾಡುವ ವಿಚಾರದಲ್ಲಿ ಸರ್ಕಾರಕ್ಕೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ತಿಳಿಸಿದ್ದಾರೆ.
-
ಬೆಳಗಾವಿಯ ಕೃಷ್ಣಾನದಿ ಪ್ರವಾಹದಲ್ಲಿ 250 ಕ್ಕೂ ಅಧಿಕ ಜನ ಸಿಲುಕಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಾರಿಶ್ವಾಡದಲ್ಲಿ ಜನರು ಸಿಲುಕಿದ್ದು, ಎನ್ ಡಿಆರ್ಎಫ್ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.
13:28 August 11
ಸಂತ್ರಸ್ತರಿಗೆ ಅಭಯ
- ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿದ್ದಾರೆ.
13:10 August 11
ಮೈಸೂರಿನ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಮಾಜಿ ಸಿಎಂ
- ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೇಮಾವತಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತ ದೇಹ ಪತ್ತೆಯಾಗಿದೆ. ನಾಲ್ಕು ದಿನದ ಬಳಿಕ ಮೃತದೇಹ ಪತ್ತೆಯಾಗಿದೆ.
- ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಂಗಳ ಗ್ರಾಮ ಸಮೀಪದ ನದಿ ನೀರಿನಲ್ಲಿ ಮುಳುಗಿ ವೃದ್ಧನೋರ್ವ ಮೃತಪಟ್ಟಿದ್ದಾನೆ. ನಾರಾಯಣಪ್ಪ ಬಡಿಗೇರ ಮೃತಪಟ್ಟವ.
13:06 August 11
- ರಾಯಚೂರಿನ ಗೂಗಲ್ ಗ್ರಾಮದ ನಡುಗಡ್ಡೆಯಲ್ಲಿ ಸಿಲುಕಿದ್ದ ಮೂವರನ್ನು ರಕ್ಷಣೆ ಮಾಡಲಾಗಿದೆ.
- ಎನ್ಡಿಆರ್ಎಫ್ ತಂಡ ರಕ್ಷಣೆ ಮಾಡಿ ಗಂಜಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.
13:04 August 11
- ಕೊಡಗಿನಲ್ಲಿ ನೆರೆಸಂತ್ರಸ್ತರು ಮೂಲ ಸೌಕರ್ಯವಿಲ್ಲದೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
- ಸಿಂಗಟಾಲೂರಲ್ಲಿನ ನಡುಗಡ್ಡೆಯಲ್ಲಿ ಸಿಲುಕಿದ್ದ 10 ಜನರನ್ನು ರಕ್ಷಣೆ ಮಾಡಲಾಗಿದೆ. ಗದಗದ ತುಂಗಭದ್ರಾ ನದಿಯ ಪ್ರವಾಹಕ್ಕೆ ಇವರು ಸಿಲುಕಿದ್ದರು.
- ಬೆಳಗಾವಿಯ ರಾಮದುರ್ಗದಲ್ಲಿ 200 ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ. ಜನರ ಜೀವನ ಅಸ್ತವ್ಯಸ್ತಗೊಂಡಿದ್ದು,ಶೀಘ್ರವಾಗಿ ನಮಗೆ ಕಟ್ಟಿಸಿಕೊಡಿ ಎಂದು ಜನಪ್ರತಿನಿಧಿಗಳ ಎದುರು ನೋವು ತೋಡಿಕೊಂಡಿದ್ದಾರೆ.
- ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕರ ಮಳೆಗೆ ಮಲೆನಾಡಿನ ಜನರು ನಲುಗಿ ಹೋಗಿದ್ದಾರೆ. ಎಲ್ಲವನ್ನೂ ಕಳೆದುಕೊಂಡ ಸ್ಥಿತಿಯಲ್ಲಿ ಮೂಡಿಗೆರೆ ತಾಲೂಕಿನ ಹತ್ತಾರೂ ಹಳ್ಳಿಗಳ ಜನರಿದ್ದಾರೆ. ಸೂರಿಲ್ಲದೇ ನಿರಾಶ್ರಿತರು ಪರದಾಟ ನಡೆಸುತ್ತಿದ್ದಾರೆ.
- ತಲಕಾವೇರಿ ಸೇರಿದಂತೆ ಸುತ್ತಮುತ್ತ ವ್ಯಾಪಕವಾಗಿ ಮಳೆ ಹಿನ್ನೆಲೆ ಜೀವ ನದಿ ಕಾವೇರಿ ಉಕ್ಕಿ ಹರಿಯುತ್ತಿದೆ. ಕಾವೇರಿಗೆ ಒಳ ಹರಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ಕೆಆರ್‌ಎಸ್ ಜಲಾಶಯದಿಂದ ನದಿಗೆ 1.60 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ
- ಭಾರೀ ಮಳೆಗೆ ಮಹಾರಾಷ್ಟ್ರದ ಅಂಬೋಲಿ ಫಾಲ್ಸ್ ಬಳಿ ರಸ್ತೆ ಕುಸಿದಿದೆ. ಅಂಬೋಲಿಯಿಂದ ಗೋವಾಗೆ ಹೋಗುವ ಸಂಪರ್ಕ ಈಗ ಕಡಿತಗೊಂಡಿದ್ದು, ರಸ್ತೆ ಮೇಲೆ ಮಣ್ಣು ಕಲ್ಲುಗಳು ಭಾರಿ ಪ್ರಮಾಣದಲ್ಲಿ ಬಿದ್ದಿದೆ.
13:01 August 11
- ಯಾದಗಿರಿಯ ಗೆದ್ದಲಮರಿ ಗ್ರಾಮದ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ಕುಟುಂಬದ ರಕ್ಷಣೆ ಕಾರ್ಯ ನಡೆದಿದೆ. ಹೆಲಿಕಾಪ್ಟರ್ ಮುಖಾಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ.
- ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಗುಡ್ಡ ಕುಸಿಯುತ್ತಿದೆ. ಈ ಕಾರಣದಿಂದ ಇಲ್ಲಿನ ಕಾಫಿ ತೋಟ ನಾಶವಾಗಿವೆ.
- ಕಾಫಿ, ಅಡಿಕೆ, ಬಾಳೆ ನಾಶವಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.
- ಕಾರವಾರದಲ್ಲಿ ಮಳೆಯ ಅಬ್ಬರ ಕಡೆಮೆ ಆಗಿದ್ದು, ನಿರಾಶ್ರಿತ ಕೇಂದ್ರಗಳಲ್ಲಿ ಜನರು ಆಶ್ರಯ ಪಡೆಯುತ್ತಿದ್ದಾರೆ.
11:30 August 11
- ಮೊನ್ನೆ ಬಾಗಲಕೋಟೆಯಲ್ಲಿ ನಾಪತ್ತೆಯಾಗಿದ್ದ ಯುವಕ ಮೃತಪಟ್ಟಿದ್ದಾನೆ. ಇಂದು ಆತನ ಶವ ಪತ್ತೆಯಾಗಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
11:24 August 11
-
ಶನಿವಾರ ಬೆಳಗ್ಗೆ 11.6 ಮೀಟರ್ ದಾಖಲೆ ಏರಿಕೆಯಲ್ಲಿ ಹರಿಯುತ್ತಿದ್ದ ನೇತ್ರಾವತಿ ನದಿಯು ಬಳಿಕ 10.7ಮೀ.ನಲ್ಲಿ ಹರಿಯುತ್ತಿದೆ. ನೆರೆಯ ಏರಿಕೆ ಪ್ರಮಾಣ ಕಡಿಮೆ ಆಗಿದ್ದರೂ ಜನರಲ್ಲಿ ಇನ್ನೂ ಆತಂಕ ದೂರವಾಗಿಲ್ಲ. ಆದರೆ ಸಂಭಾವ್ಯ ಅಪಾಯಗಳನ್ನು ಎದುರಿಸಲು ರಕ್ಷಣಾ ತಂಡಗಳು, ಎನ್ ಡಿಆರ್ಎಫ್ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
-
ಧಾರವಾಡದಲ್ಲಿ ಪ್ರವಾಹಕ್ಕೆ ಸಿಲುಕಿರುವ ಜನರನ್ನು ರಕ್ಷಿಸಲು ಜಿಲ್ಲಾಡಳಿತ ಸಕಲ ರೀತಿಯ ಕ್ರಮ ಕೈಗೊಂಡಿದೆಯಾದರೂ, ಕಾಲೊನಿಯೊಂದರ ದಂಪತಿಗೆ ರಕ್ಷಣೆ ಕಲ್ಪಿಸುವಲ್ಲಿ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ.
-
ಚಪ್ಪರಬಂದ ಕಾಲೋನಿಯ ದ್ರಾಕ್ಷಾಯಿಣಿ ಹಾಗೂ ಮಂಜುನಾಥ ದಂಪತಿ ಪ್ರವಾಹಕ್ಕೆ ಸಿಲುಕಿ ನಿರಾಶ್ರಿತರಾಗಿದ್ದಾರೆ. ಕೇವಲ 6 ಅಡಿ ಜಾಗದಲ್ಲಿ ಇವರು ವಾಸವಾಗಿದ್ದು, ಭಾರಿ ಮಳೆ ಹಿನ್ನೆಲೆ ಗಟಾರ ಪಕ್ಕದಲ್ಲಿರುವ ಮನೆ ಗೋಡೆ ಕುಸಿತವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
11:13 August 11

11:11 August 11

11:10 August 11

10:38 August 11
- ವರುಣನ ಆರ್ಭಟಕ್ಕೆ ಉತ್ತರ ಕರ್ನಾಟಕ ಬಹುತೇಕ ದ್ವೀಪದಂತಾಗಿದೆ. ಉಕ್ಕಿಹರಿಯುತ್ತಿರುವ ಪ್ರವಾಹಕ್ಕೆ ಅಲ್ಲಿನ ಜನರು ಎಲ್ಲವನ್ನು ಕಳೆದುಕೊಂಡು ನಿರಾಶ್ರಿತರ ಕೇಂದ್ರ ಸೇರಿದ್ದು, ನೊಂದ ಜೀವಗಳಿಗೆ ಇಡೀ ಕರ್ನಾಟಕದ ಜನರೇ ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೇ ನೆರವಿನ ಸಹಾಯ ನೀಡಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದಾರೆ. ಇನ್ನೂ ಸ್ಯಾಂಡಲ್ವುಡ್ನ ಬಹುತೇಕ ಸ್ಟಾರ್ ನಟರುಗಳು ನೇರವು ನೀಡಿದ್ದಾರೆ. ಜೊತೆಗೆ ಅವರ ಅಭಿಮಾನಿಗಳಿಗೂ ನೆರೆ ಸಂತ್ರಸ್ತರ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ.
-
ಸದ್ಯ ನೀನಾಸಂ ಸತೀಶ್ ಅವರು ಸಹ ಉತ್ತರ ಕರ್ನಾಟಕದ ನೆರವಿಗೆ ಧಾವಿಸಿದ್ದಾರೆ. ಭೀಕರ ಮಳೆಗೆ ತತ್ತರಿಸಿ ಹೋಗಿರುವ ಉತ್ತರ ಕರ್ನಾಟಕ ಜನತೆಗೆ ನಾವು ನಮ್ಮ ಕೈಲಾದ ಸಹಾಯ ಮಾಡುತ್ತೇವೆ. ಅಭಿಮಾನಿಗಳು ಕೂಡ ಸಹಾಯ ಹಸ್ತವನ್ನು ನೀಡಬೇಕು, ಇಲ್ಲಿಂದ ಕಳುಹಿಸುವ ಸಾಮಗ್ರಿಗಳನ್ನು ಸಂತ್ರಸ್ತರಿಗೆ ತಲುಪಿಸಲು ಸಹಾಯ ಮಾಡಬೇಕು ಎಂದು ವಿಡಿಯೋ ಮೂಲಕ ಆಭಿಮಾನಿಗಳು, ಸ್ನೇಹಿತರಲ್ಲಿ ಮನವಿಯನ್ನು ಮಾಡಿದ್ದಾರೆ.
10:31 August 11

10:29 August 11

10:10 August 11

10:08 August 11
ರಾಜ್ಯಾದ್ಯಂತ ವರುಣನ ಆಕ್ರೋಶ ಮುಂದುವರೆದಿದ್ದು, ಹಲವಾರು ಜಲಾಶಯಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಒಂದೆಡೆ ಜನರು ಸ್ಥಳಾಂತರಗೊಳ್ಳುತ್ತಿದ್ದರೆ, ಮತ್ತೊಂದೆಡೆ ಜನರು ನಡುಗಡ್ಡೆಯಲ್ಲಿ ಸಿಲುಕಿಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ.
10:07 August 11
ರಾಜ್ಯಾದ್ಯಂತ ವರುಣನ ಆಕ್ರೋಶ ಮುಂದುವರೆದಿದ್ದು, ಹಲವಾರು ಜಲಾಶಯಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಒಂದೆಡೆ ಜನರು ಸ್ಥಳಾಂತರಗೊಳ್ಳುತ್ತಿದ್ದರೆ, ಮತ್ತೊಂದೆಡೆ ಜನರು ನಡುಗಡ್ಡೆಯಲ್ಲಿ ಸಿಲುಕಿಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ.
10:06 August 11

09:57 August 11
ಕೆಆರ್ಎಸ್ನಿಂದ ಭಾರೀ ಪ್ರಮಾಣದ ನೀರು ಬಿಡುಗಡೆ
ರಾಜ್ಯಾದ್ಯಂತ ವರುಣನ ಆಕ್ರೋಶ ಮುಂದುವರೆದಿದ್ದು, ಹಲವಾರು ಜಲಾಶಯಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಒಂದೆಡೆ ಜನರು ಸ್ಥಳಾಂತರಗೊಳ್ಳುತ್ತಿದ್ದರೆ, ಮತ್ತೊಂದೆಡೆ ಜನರು ನಡುಗಡ್ಡೆಯಲ್ಲಿ ಸಿಲುಕಿಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ.