ವರುಣಾಘಾತಕ್ಕೆ ಸಂಭವಿಸಿದ ಹಾನಿ ವಿವರ | |
ಒಟ್ಟು ಸಂಭವಿಸಿದ ಸಾವು | 88 |
ನಾಪತ್ತೆಯಾದವರ ಸಂಖ್ಯೆ | 06 |
ಜಾನುವರುಗಳ ಸಾವು | 1847 |
ಒಟ್ಟು ಸಂರಕ್ಷಿಸಲ್ಪಟ್ಟ ಸಂತ್ರಸ್ತರು | 1,59,991 |
ಪ್ರವಾಹ ಪೀಡಿತ ಜಿಲ್ಲೆ | 22 |
ಪ್ರವಾಹ ಪೀಡಿತ ತಾಲೂಕು | 103 |
ನೆರೆ ಹಾವಳಿಯಿಂದ ಸಾವಿಗೀಡಾದವರ ಸಂಖ್ಯೆ 88ಕ್ಕೆ ಏರಿಕೆ: 6 ಮಂದಿ ನಾಪತ್ತೆ - ಉತ್ತರ ಕರ್ನಾಟಕ
ರಾಜ್ಯದಾದ್ಯಂತ ಮಳೆಯ ಅಬ್ಬರ ತಗ್ಗಿದ್ದು, ಸಾವು, ನೋವುಗಳ ಸಂಖ್ಯೆ ಹೆಚ್ಚಾಗುತ್ತಲೆ ಇವೆ. ಪ್ರವಾಹ ಪ್ರದೇಶಗಳಲ್ಲಿ ನೀರಿನ ಇಳಿಮುಖವಾಗಿದ್ದು. ಕೆಲವು ಸಂತ್ರಸ್ತರು ತಮ್ಮ ಗ್ರಾಮಗಳಿಗೆ ವಾಪಾಸ್ಸಾಗುತ್ತಿದ್ದಾರೆ.
ಒಟ್ಟು ಬೆಳೆ ಹಾನಿ
ಒಟ್ಟು ಮನೆಗಳ ಹಾನಿ
ಬೆಂಗಳೂರು:ರಾಜ್ಯದ ಭೀಕರ ಪ್ರವಾಹದಿಂದ ಈವರೆಗೆ ಪ್ರಾಣ ಕಳೆದುಕೊಂಡವರ ಸಂಖ್ಯೆ 88ಕ್ಕೆ ಏರಿಕೆಯಾಗಿದೆ.
ಸುಮಾರು 6 ಮಂದಿ ಪ್ರವಾಹದಿಂದ ನಾಪತ್ತೆಯಾಗಿದ್ದಾರೆ. ಗುರುವಾರ ಕೃಷ್ಣಾ ಮೇಲ್ದಂಡೆ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ರಾಜ್ಯದ ಹಲವೆಡೆ ಮಳೆಯ ಪ್ರಮಾಣ ತಗ್ಗಿದೆ.
ಬೆಳಗಾವಿ 24, ಕೊಡಗಿ 13, ಶಿವಮೊಗ್ಗ 10 ಹಾಗೂ ಚಿಕ್ಕಮಗಳೂರು 9, ಮೈಸೂರು 5 ಜನರು ಮೃತಪಟ್ಟಿದ್ದಾರೆ. ಉಳಿದಂತೆ ಉತ್ತರ ಕನ್ನಡ, ಹಾಸನ, ಉಡುಪಿ, ಧಾರವಾಡದಲ್ಲಿ ತಲಾ 4 ಮಂದಿ ಹಾಗೂ ಬಾಗಲಕೋಟೆ, ದಕ್ಷಿಣ ಕನ್ನಡದಲ್ಲಿ 3 ಮಂದಿ ಸಾವಿಗೀಡಾಗಿದ್ದಾರೆ. ಕಲಬುರುಗಿ, ವಿಜಯಪುರ, ರಾಯಚೂರು, ಯಾದಗಿರಿ, ದಾವಣಗೆರೆ, ಜಿಲ್ಲೆಯಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ನಾಪತ್ತೆಯಾದವರಲ್ಲಿ ಕೊಡಗಿನಲ್ಲಿ 3, ಹಾವೇರಿಯ ಒಬ್ಬರು ಬೆಳಗಾವಿಯ 2 ಜನರು ಎಂದು ಗುರುತಿಸಲಾಗಿದೆ.
ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ನೆರೆ ಪ್ರಮಾಣ ಇಳಿ ಮುಖವಾಗಿದೆ. ಇತ್ತ ಆಲಮಟ್ಟಿ ಜಲಾಶಯ ಸೇರಿದಂತೆ ಪ್ರಮುಖ ಜಲಾಶಯಗಳಿಂದ ಹೊರ ಬಿಡುವ ನೀರಿನ ಪ್ರಮಾಣವು ಇಳಿಮುಖವಾಗಿದೆ. ಆದರೆ, ಜಾನುವಾರುಗಳ ಸಾವು ಇದೀಗ ದುಪ್ಪಟ್ಟಾಗಿದೆ. 900 ರಿಂದ 1847ಕ್ಕೆ ತಲುಪಿದೆ.