ಕರ್ನಾಟಕ

karnataka

ETV Bharat / state

ಸಿಸಿಐ ತನಿಖೆ ಪ್ರಶ್ನಿಸಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ ಫ್ಲಿಪ್ ಕಾರ್ಟ್, ಅಮೆಜಾನ್ - High Court challenging CCI probe

ಇ-ಕಾಮರ್ಸ್ ಎಂದರೆ ಮಾರುಕಟ್ಟೆಯ ಸ್ಥಳಗಳೇ ಹೊರತು ಉತ್ಪಾದನಾ ಕ್ಷೇತ್ರವಲ್ಲ. ದೂರುದಾರರು ಆರೋಪಿಸಿರುವಂತೆ ಇ-ಕಾಮರ್ಸ್ ಸಂಸ್ಥೆ ಎಲ್ಲಿಯೂ ಸ್ಪರ್ಧಾ ಕಾಯ್ದೆ ಉಲ್ಲಂಘಿಸಿಲ್ಲ. ಈ ಅಂಶಗಳನ್ನು ಏಕಸದಸ್ಯ ಪೀಠ ಪರಿಗಣಿಸಿಲ್ಲ ಎಂದರು. ಕೆಲ ಕಾಲ ವಾದ ಆಲಿಸಿದ ಪೀಠ, ವಿಚಾರಣೆ ಮುಂದೂಡಿತು..

ಫ್ಲಿಪ್ ಕಾರ್ಟ್, ಅಮೆಜಾನ್
ಫ್ಲಿಪ್ ಕಾರ್ಟ್, ಅಮೆಜಾನ್

By

Published : Jun 19, 2021, 5:51 PM IST

ಬೆಂಗಳೂರು :ಸ್ಪರ್ಧಾತ್ಮಕ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಆದೇಶಿಸಿರುವ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಇ-ಕಾಮರ್ಸ್ ದೈತ್ಯ ಸಂಸ್ಥೆಗಳಾದ ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಸಂಸ್ಥೆಗಳು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿವೆ.

ಸಿಸಿಐ ತನಿಖೆ ರದ್ದುಕೋರಿದ್ದ ಅರ್ಜಿ ವಜಾ ಮಾಡಿರುವ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಸಂಸ್ಥೆಗಳು ಸಲ್ಲಿಸಿರುವ ಅರ್ಜಿಗಳನ್ನು ನ್ಯಾ. ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರ ಸಂಸ್ಥೆ ಫ್ಲಿಪ್ ಕಾರ್ಟ್ ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್ ವಕೀಲ ಹರೀಶ್ ಸಾಳ್ವೆ, ಏಕ ಸದಸ್ಯ ಪೀಠ ಅರ್ಜಿದಾರ ಸಂಸ್ಥೆಗಳ ವಿವರಣೆಯನ್ನು ಸರಿಯಾಗಿ ಗ್ರಹಿಸಿಲ್ಲ.

ಹೈಕೋರ್ಟ್

ಇ-ಕಾಮರ್ಸ್ ಎಂದರೆ ಮಾರುಕಟ್ಟೆಯ ಸ್ಥಳಗಳೇ ಹೊರತು ಉತ್ಪಾದನಾ ಕ್ಷೇತ್ರವಲ್ಲ. ದೂರುದಾರರು ಆರೋಪಿಸಿರುವಂತೆ ಇ-ಕಾಮರ್ಸ್ ಸಂಸ್ಥೆ ಎಲ್ಲಿಯೂ ಸ್ಪರ್ಧಾ ಕಾಯ್ದೆ ಉಲ್ಲಂಘಿಸಿಲ್ಲ. ಈ ಅಂಶಗಳನ್ನು ಏಕಸದಸ್ಯ ಪೀಠ ಪರಿಗಣಿಸಿಲ್ಲ ಎಂದರು. ಕೆಲ ಕಾಲ ವಾದ ಆಲಿಸಿದ ಪೀಠ, ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ :ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್ ಸಂಸ್ಥೆಗಳು ಉಳಿದ ವ್ಯಾಪಾರಿಗಳಿಗೆ ಕುತ್ತು ತರುವ ರೀತಿ ಬೆಲೆ ನಿಗದಿ ಮಾಡುತ್ತಿವೆ. ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ನೀಡುತ್ತಿರುವ ಜತೆಗೆ, ಆದ್ಯತೆಯ ಮಾರಾಟಗಾರರ ಜೊತೆ ವಿಶೇಷ ಪಾಲುದಾರಿಕೆಯಲ್ಲಿ ತೊಡಗಿವೆ ಎಂದು ಅಖಿಲ ಭಾರತ ವರ್ತಕರ ಮಹಾ ಒಕ್ಕೂಟ (ಸಿಎಐಟಿ) ಹಾಗೂ ದೆಹಲಿ ವ್ಯಾಪಾರ್ ಮಹಾಸಂಘ್ (ಡಿವಿಎಂ) ಆರೋಪಿಸಿದ್ದವು. ಅಲ್ಲದೇ, ಈ ಕುರಿತು ಸಿಸಿಐಗೆ ದೂರು ನೀಡಿದ್ದವು.

ಈ ಹಿನ್ನೆಲೆಯಲ್ಲಿ ಸಿಸಿಐ ಅಮೆಜಾನ್ ಹಾಗೂ ಫ್ಲಿಫ್ ಕಾರ್ಟ್ ವಿರುದ್ಧ ತನಿಖೆಗೆ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ರದ್ದು ಕೋರಿ ಇ-ಕಾಮರ್ಸ್ ಸಂಸ್ಥೆಗಳು ಕಳೆದ ಜನವರಿ 13ರಂದು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದವು. ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿತ್ತಲ್ಲದೇ, ಸಿಸಿಐ ತನಿಖೆಯಲ್ಲಿ ಮಧ್ಯಪ್ರವೇಶಿಸುವ ಅಗತ್ಯ ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.

ABOUT THE AUTHOR

...view details