ಬೆಂಗಳೂರು :ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಾರ್ವಜನಿಕ ಸ್ಥಳಗಳಲ್ಲಿ 'ಉಗುಳುವುದನ್ನು ನಿಲ್ಲಿಸಿ' (ಸ್ಟಾಪ್ ಸ್ಪಿಟ್ಟಿಂಗ್) ಎಂಬ ಜಾಗೃತಿ ಜಾಥಾಗೆ ಚಾಲನೆ ನೀಡಿದರು. ಈ ಜಾತಾ ಬಿಬಿಎಂಪಿ, ರೋಟರಿ, ನಮ್ಮ ಬೆಂಗಳೂರು ಫೌಂಡೇಷನ್, ಬ್ಯೂಟಿಫುಲ್ ಬೆಂಗಳೂರು ಮೊದಲಾದ ಇಪ್ಪತ್ತು ಸಂಸ್ಥೆಗಳ ಸಹಯೋಗದಲ್ಲಿ ನಡೆಯಲಿದೆ.
ಜಾಥಾಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ರಂದೀಪ್ ಅವರು, ಆಂಟಿ ಸ್ಪಿಟ್ ಕಾಂಪೇನ್ಗೆ ಚಾಲನೆ ನೀಡಲಾಗಿದೆ. 20 ಸಂಘ-ಸಂಸ್ಥೆಗಳು ಪಾಲಿಕೆ ಜೊತೆ ಕೈಜೋಡಿಸಿವೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಅಪರಾಧ. ಇದರಿಂದ ಕೋವಿಡ್ ಸೇರಿ ಇತರೆ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಾಧ್ಯತೆ ಇದೆ. ನಗರವನ್ನು ಸ್ವಚ್ಛ ಸರ್ವೇಕ್ಷಣ ಸರ್ವೇಯಲ್ಲಿ ಹೆಚ್ಚು ಅಂಕ ಪಡೆಯುವಂತೆ ಮಾಡಲು ಇದು ಅಗತ್ಯವಾಗಿದೆ ಎಂದರು.