ಕರ್ನಾಟಕ

karnataka

ETV Bharat / state

ವಿಶೇಷ ಮರುಪಾವತಿ ಅಭಿಯಾನ ವಿಸ್ತರಿಸಲು ಕೇಂದ್ರ ವಿತ್ತ ಸಚಿವೆಗೆ ಎಫ್​​ಕೆಸಿಸಿಐ ಪತ್ರ - ಮರುಪಾವತಿ ಡ್ರೈವ್ ವಿಸ್ತರಿಸಲು ಮನವಿ

ಕಾರ್ಪೊರೇಟ್ ವ್ಯವಹಾರಗಳು ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಪತ್ರ ಬರೆದಿದ್ದು, ತಮ್ಮ ಒಕ್ಕೂಟದ ಕಾರ್ಯ ಚಟುವಟಿಕೆಗಳ ಬಗ್ಗೆ ಗಮನ ಸೆಳೆಯುವುದರೊಂದಿಗೆ ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟಿದೆ.

FKCCI letter
ನಿರ್ಮಲಾ ಸೀತಾರಾಮನ್​ಗೆ ಎಫ್ಕೆಸಿಸಿಐ ಪತ್ರ

By

Published : May 19, 2021, 6:55 AM IST

ಬೆಂಗಳೂರು: ಸೆಂಟ್ರಲ್ ಬೋರ್ಡ್ ಆಫ್​ ಇನ್​ಡೈರೆಕಟ್ಟ್ ಟ್ಯಾಕ್ಸ್ ಆ್ಯಂಡ್ ಕಸ್ಟಮ್ಸ್ (ಸಿಬಿಐಸಿ) ಪ್ರಾರಂಭಿಸಿರುವ ವಿಶೇಷ ಮರುಪಾವತಿ ಮತ್ತು ನ್ಯೂನತೆಯ ವಿಲೇವಾರಿ ಅಭಿಯಾನದ ಅವಧಿಯನ್ನು 15 ಮೇ 2021 ರಿಂದ 31 ಮೇ 2021 ರವರೆಗ ವಿಸ್ತರಿಸಬೇಕು. ಮತ್ತು ಬಾಕಿ ಇರುವ ಎಲ್ಲಾ ಮರುಪಾವತಿ, ಕರ್ತವ್ಯ ನ್ಯೂನತೆಯ ಹಕ್ಕುಗಳನ್ನು ಸಕಾಲಿಕವಾಗಿ ವಿಲೇವಾರಿ ಮಾಡಲು ಅನುವು ಮಾಡಿಕೊಡುವಂತೆ ಎಫ್‌ಕೆಸಿಸಿಐ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದೆ.

ಎಫ್‌ಕೆಸಿಸಿಐ ಕರ್ನಾಟಕದ ಒಂದು ಅಪೆಕ್ಸ್ ವಾಣಿಜ್ಯ ಸಂಸ್ಥೆಯಾಗಿದೆ. ರಫ್ತುದಾರರು, ಸುಮಾರು 300 ವಾಣಿಜ್ಯೋದ್ಯಮ ಸಂಘಗಳು, 30 ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳು ಸೇರಿದಂತೆ 4,000ಕ್ಕೂ ಹೆಚ್ಚು ದೊಡ್ಡ, ಮಧ್ಯಮ, ಸಣ್ಣ ಕೈಗಾರಿಕೆಗಳು, ಸೇವೆ ಮತ್ತು ವ್ಯಾಪಾರ ಸಂಸ್ಥೆಗಳನ್ನು ಪ್ರತಿನಿಧಿಸುತ್ತದೆ. ರಾಜ್ಯದಲ್ಲಿ ಒಟ್ಟಾರೆಯಾಗಿ ಸುಮಾರು 2 ಮಿಲಿಯನ್ ಕಾರ್ಮಿಕರು ನಮ್ಮ ವ್ಯಾಪ್ತಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಬರುತ್ತಾರೆ ಎಂದು ಸಂಸ್ಥೆಯ ಬಗ್ಗೆ ಅಧ್ಯಕ್ಷ ಪೆರಿಕಲ್ ಎಂ.ಸುಂದರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂಓದಿ: 2020-21ರ ಆರ್ಥಿಕ ವರ್ಷದಲ್ಲಿ ಕೆನರಾ ಬ್ಯಾಂಕ್ ಲಾಭದಲ್ಲಿ ಭಾರಿ ಇಳಿಕೆ

ವಿಶೇಷ ಅಭಿಯಾನ ಕೋವಿಡ್ ಕಷ್ಟದ ಸಮಯದಲ್ಲಿ ವ್ಯಾಪಾರ ಘಟಕಗಳಿಗೆ, ವಿಶೇಷವಾಗಿ ಎಂಎಸ್‌ಎಂಇಗಳಿಗೆ ತಕ್ಷಣದ ಪರಿಹಾರ ಒದಗಿಸುತ್ತದೆ. ಎಲ್ಲಾ ಕೈಗಾರಿಕೆ, ಸೇವೆ ಮತ್ತು ವ್ಯವಹಾರ ಚಟುವಟಿಕೆಗಳು ಸ್ಥಗಿತಗೊಂಡಾಗ ಈ ಡ್ರೈವ್ ಅತ್ಯಂತ ಅವಶ್ಯಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಾದ ಲಾಕ್‌ಡೌನ್ ಕ್ರಮಗಳನ್ನು ಮತ್ತು ಕೈಗಾರಿಕೆಗಳ ಕಾರ್ಯ ನಿರ್ವಹಣೆಗೆ ನಿರ್ಬಂಧಗಳನ್ನು ವಿಧಿಸಿವೆ ಎಂಬ ವಿಷಯ ನಿಮಗೆ ತಿಳಿದಿದೆ. ಅಗತ್ಯ ವಸ್ತುಗಳನ್ನು ಉತ್ಪಾದಿಸುವ ಘಟಕಗಳ 24 ಗಂಟೆ ಕೆಲಸ ಮಾಡುವವರಿಗೆ ಮಾತ್ರ ಅನುಮತಿ ಇದೆ. ಎಲ್ಲಾ ಇತರ ಚಟುವಟಿಕೆಗಳು, ವ್ಯಾಪಾರ ಸಂಸ್ಥೆಗಳು ಮತ್ತು ಸಂಘಗಳ ಕಚೇರಿಗಳನ್ನು ಸಹ ಮುಚ್ಚಲಾಗಿದೆ. ಇದನ್ನು ಮೇ 30 ರವರೆಗೆ ವಿಸ್ತರಿಸುವ ಸಾಧ್ಯತೆಯಿದೆ. ಪರಿಣಾಮ ಕೈಗಾರಿಕೆಗಳು, ಸೇವೆ ಮತ್ತು ವ್ಯವಹಾರ ಸಂಸ್ಥೆಗಳಿಗೆ ಮರು ಪಾವತಿಸುವುದು ಅಥವಾ ಕರ್ತವ್ಯ ನ್ಯೂನತೆಗಾಗಿ ತಮ್ಮ ಪ್ರಸ್ತಾಪಗಳನ್ನು ಸಲ್ಲಿಸುವುದು ಬಹಳ ಕಷ್ಟಕರವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸುವುದು ಸೇರಿದಂತೆ ಹಕ್ಕುಗಳನ್ನು ಸಲ್ಲಿಸಲು ವ್ಯಾಪಾರ ಘಟಕಗಳಿಗೆ ಸಹಾಯದ ಅಗತ್ಯವಿದೆ. ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಪ್ರಸ್ತಾವನೆಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸುವಂತೆ ನಿಮ್ಮ ಕಚೇರಿಗೆ ವಿನಂತಿಸಲು ಬಹಳಷ್ಟು ಉದ್ಯಮ ಮತ್ತು ವ್ಯಾಪಾರ ಸಂಸ್ಥೆಗಳು ನಮ್ಮನ್ನು ಸಂಪರ್ಕಿಸಿವೆ. ಆದ್ದರಿಂದ, ದಯಮಾಡಿ ಡ್ರೈವ್ ಅನ್ನು ಆಗಸ್ಟ್ 31 ರವರೆಗೆ ವಿಸ್ತರಿಸಲು ನಾವು ವಿನಂತಿಸುತ್ತೇವೆ ಎಂದು ಪತ್ರದಲ್ಲಿ ವಿತ್ತ ಸಚಿವರಿಗೆ ಮನವಿ ಮಾಡಲಾಗಿದೆ.

ABOUT THE AUTHOR

...view details