ಬೆಂಗಳೂರು: ಕೈಗಾರಿಕಾ ಟೌನ್ಷಿಪ್ ನಿರ್ಮಿಸುವಂತೆ ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ರು.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೈಗಾರಿಕಾ ಟೌನ್ಷಿಪ್ (Industrial township)ಗೆ ಆಗ್ರಹಿಸಿದ್ರು.25 ವರ್ಷ ಕಳೆದರೂ ಸಹ ರಾಜ್ಯ ಸರ್ಕಾರ ಕೇವಲ ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಟೌನ್ಷಿಪ್ ಹೊರತುಪಡಿಸಿ ಬೇರೆ ಇನ್ಯಾವ ಟೌನ್ಷಿಪ್ಘೋಷಣೆ ಮಾಡಿಲ್ಲ.
ಬಂದ ಎಲ್ಲಾ ಸರ್ಕಾರಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿವೆ. ಟೌನ್ಷಿಪ್ ನಿರ್ಮಾಣದ ನಂತರ ಗ್ರಾಮ ಪಂಚಾಯಿತಿಗೆ ಶೇ. 60 ಸಂಗ್ರಹಿಸಿದ ತೆರಿಗೆಯನ್ನು ಕೊಡುತ್ತೇವೆ. ನಾವು ಉಳಿದ 40 ಭಾಗವನ್ನು ಉಪಯೋಗಿಸಿಕೊಂಡು ಟೌನ್ಷಿಪ್ ನಿರ್ವಹಣೆ ಮಾಡುತ್ತೇವೆ. ಪ್ರಸ್ತುತ ಪೀಣ್ಯ, ಹಾರೋಹಳ್ಳಿ ಹಾಗೂ ಇನ್ನಿತರ ಕೈಗಾರಿಕಾ ಪ್ರದೇಶಗಳಿಗೆ ಟೌನ್ಷಿಪ್ ಅಗತ್ಯವಿದೆ. ಇಲ್ಲದಿದ್ದರೆ ಕೈಗಾರಿಕಾ ವಲಯ ಅಭಿವೃದ್ಧಿ ಆಗುವುದಿಲ್ಲ ಎಂದು ಸರ್ಕಾರಗಳ ನಡೆಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ರು.
ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ ಬ್ಯಾಂಕ್ಗಳ ವಿಲೀನದ ನಂತರ ಬ್ಯಾಕಿಂಗ್ ಸೇವೆಗಳು ಕ್ಷೀಣ:
ಅನೇಕ ಬ್ಯಾಂಕ್ಗಳು ವಿಲೀನವಾಗುತ್ತಿವೆ. ಇದರಿಂದ ಬ್ಯಾಂಕ್ ಶಾಖೆಗಳು ಹಾಗೂ ಸಿಬ್ಬಂದಿ ಕಡಿಮೆಯಾಗುತ್ತಿದ್ದು, ಬ್ಯಾಂಕ್ ನೀಡುವ ಸೇವೆಯ ಗುಣಮಟ್ಟ ಕ್ಷೀಣಿಸುತ್ತಿದೆ. ರಫ್ತು ಮಾಡುವವರು ಖಾತರಿ ಪತ್ರ (letter of credit) ಪಡೆಯಲು 15 ದಿನಗಳು ಬೇಕಾಗುತ್ತದೆ. ಠೇವಣಿ ಮಾಡುವುದಕ್ಕೆ 2 ಗಂಟೆಗಳು ಬೇಕು. ಹೀಗೆಯೇ ಆದರೆ ಬಹಳ ಕಷ್ಟ ಆಗುತ್ತದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 90 ದಿನಕ್ಕೆ ಎನ್ಪಿಎ ಮಾಡುತ್ತಿದ್ದಾರೆ. ಇದನ್ನು ಬದಲಿಸಿ 180 ದಿನದವರೆಗೆ ಕಾಲಾವಕಾಶ ನೀಡಬೇಕು. ಈ ಕುರಿತು ನಾನು ಕೇಂದ್ರ ಮಂತ್ರಿ ನಿತೀನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದೇನೆ ಎಂದರು.