ಬೆಂಗಳೂರು:ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯಿಂದ ವಿದ್ಯುತ್ ದರ ಹೆಚ್ಚಳಕ್ಕೆ ಖಂಡನೆ ವ್ಯಕ್ತವಾಗಿದ್ದು, ಕೈಗಾರಿಕೆಗಳನ್ನ ಬಂದ್ ಮಾಡಿ ಬೀಗ ಹಾಕೋದಾಗಿ ಎಚ್ಚರಿಕೆ ನೀಡಿದ್ದಾರೆ.
ಚುನಾವಣೆ ಮುಗಿದ ನಂತರ ಏಕಾಏಕಿ ಏರಿಕೆಯಾದ ವಿದ್ಯುತ್ ದರದಿಂದ ಎಲ್ಲರೂ ಸಂಕಷ್ಟಕ್ಕೆ ಒಳಗಾಗುತ್ತಾರೆ. ಹೆಚ್ಚಳವಾಗಿರೋ ವಿದ್ಯುತ್ ಬಿಲ್ ವಿರೋಧಿಸಿ ಎಲ್ಲ ಕೈಗಾರಿಕೆಗಳು ಆಕ್ರೋಶ ವ್ಯಕ್ತಪಡಿಸಿವೆ. ಪ್ರತಿ ಯೂನಿಟ್ಗೆ 40 ಪೈಸೆ ಹೆಚ್ಚಳ ಮಾಡಿರೋ ಸರ್ಕಾರ ಕೊರೊನಾ ಸಮಯದಲ್ಲಿ ಈ ರೀತಿಯ ವಿದ್ಯತ್ ಹೆಚ್ಚಳ ಸರಿಯಲ್ಲ ಎಂದು ಸಂಸ್ಥೆ ತಿಳಿಸಿದೆ.
ನಾವು ಮೊದಲೇ ಸಂಕಷ್ಟದಲ್ಲಿದ್ದೇವೆ. ಏರಿಕೆಯಾಗಿರೋ ಹೊಸ ದರ ನಮಗೆ ಹೊರೆಯಾಗಲಿದೆ. ವಿದ್ಯುತ್ ದರ ಏರಿಕೆ ಮಾಡದಂತೆ ಈಗಾಗಲೇ ಎಫ್ಕೆಸಿಸಿಐ ಸರ್ಕಾರಕ್ಕೆ ಮನವಿ ಮಾಡಿದೆ. ಸರ್ಕಾರ ತಕ್ಷಣವೇ ದರ ಹೆಚ್ಚಳದ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿ ಅಧ್ಯಕ್ಷ ಪೆರಿಕಲ್ ಸುಂದರ್ ಹೇಳಿಕೆ ನೀಡಿದ್ದಾರೆ.
ಈಗಾಗಲೇ ಶೇ. 1ರಿಂದ 20ರಷ್ಟು ಕೈಗಾರಿಕೆಗಳು ಕೋವಿಡ್ ಪರಿಣಾಮದಿಂದ ಬಾಗಿಲು ಮುಚ್ಚಿದ್ದು, ಶೇ. 40ರಿಂದ 50ರಷ್ಟು ಮಾತ್ರ ಕಾರ್ಖಾನೆಗಳು ಕೆಲಸ ನಿರ್ವಹಿಸುತ್ತಿವೆ.