ಕರ್ನಾಟಕ

karnataka

ETV Bharat / state

Suspected terrorists case: ಮನೆಯ ಅಲ್ಮೇರಾದಲ್ಲಿ ಬಚ್ಚಿಟ್ಟಿದ್ದ ನಾಲ್ಕು ಹ್ಯಾಂಡ್ ಗ್ರೆನೇಡ್ ವಶಕ್ಕೆ: ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಮಾಹಿತಿ - ಸಿಸಿಬಿ ಪೊಲೀಸರು

ಶಂಕಿತ ಉಗ್ರರ ಪೈಕಿ ಐದನೇ ಆರೋಪಿ ಜಾಯಿದ್​ ತಬರೇಜ್​ನ ಮನೆಯಲ್ಲಿದ್ದ ನಾಲ್ಕು ಜೀವಂತ ಗ್ರೆನೇಡ್​ಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

Etv Bharat
Etv Bharat

By

Published : Jul 20, 2023, 3:31 PM IST

Updated : Jul 20, 2023, 8:00 PM IST

ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪದಡಿ ಐವರು ಶಂಕಿತ ಭಯೋತ್ಪಾದಕರನ್ನ ಬಂಧಿಸಿರುವ ಸಿಸಿಬಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಪ್ರಕರಣದ‌ ಐದನೇ ಆರೋಪಿ ಜಾಯಿದ್ ತಬರೇಜ್ ನ ಕೊಡಿಗೆಹಳ್ಳಿಯಲ್ಲಿರುವ ಮನೆಯಲ್ಲಿದ್ದ ನಾಲ್ಕು ಜೀವಂತ ಗ್ರೆನೇಡ್ ಜಪ್ತಿ ಮಾಡಿದ್ದಾರೆ.

ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದ ಆರೋಪದಡಿ ಸುಹೇಲ್, ಜಾಹಿದ್, ಮುದಾಸಿರ್, ಫೈಜರ್ ಹಾಗೂ ಉಮರ್ ಎಂಬುವರನ್ನು ನಿನ್ನೆ ಸಿಸಿಬಿ ಪೊಲೀಸರು ಬಂಧಿಸಿ 7 ಕಂಟ್ರಿ ಮೇಡ್ ಪಿಸ್ತೂಲ್, 42 ಸಜೀವ ಗುಂಡುಗಳು, 4 ವಾಕಿಟಾಕಿ, 2 ಡ್ರ್ಯಾಗರ್, ಹಾಗೂ 12 ಮೊಬೈಲ್​ಗಳನ್ನು ಜಪ್ತಿ ಮಾಡಿಕೊಂಡಿತ್ತು. ಇದೀಗ ಕೊಡಿಗೆಹಳ್ಳಿಯಲ್ಲಿರುವ ಜಾಹಿದ್ ಮನೆಯಲ್ಲಿ 4 ಜೀವಂತ ಗ್ರೆನೇಡ್​ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಮಾಹಿತಿ ನೀಡಿದ್ದಾರೆ.

ಮನೆಯ ಅಲ್ಮೇರಾದಲ್ಲಿ ಇಟ್ಟು ಲಾಕ್ ಮಾಡಿದ್ದ ಶಂಕಿತ ಉಗ್ರ: ಜನಸಂದಣಿ ಪ್ರದೇಶಗಳಲ್ಲಿ ಬಾಂಬ್ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಆರೋಪಿಗಳು ತಲೆಮರೆಸಿಕೊಂಡಿರುವ ಜುನೈದ್ ಖಾನ್ ಸೂಚನೆ ಮೇರೆಗೆ ಆರೋಪಿಗಳೆಲ್ಲರೂ ಕೃತ್ಯವೆಸಗಲು ಸಿದ್ಧತೆ ನಡೆಸಿದ್ದರು. ವಿದೇಶದಲ್ಲಿರುವ ಜುನೈದ್ ವ್ಯಕ್ತಿಯೋರ್ವನ ಮುಖಾಂತರ ಜಾಹಿದ್​ಗೆ ಪಾರ್ಸೆಲ್ ಮೂಲಕ ನಾಲ್ಕು ಗ್ರೆನೇಡ್ ಕಳುಹಿಸಿಕೊಟ್ಟಿದ್ದ. ಇದನ್ನ ಸುರಕ್ಷಿತವಾಗಿ ಇರಿಸುವಂತೆ ಸೂಚಿಸಿದ್ದ. ಇದರಂತೆ ಮನೆಯ ಕೊಠಡಿಯ ಅಲ್ಮೇರಾದಲ್ಲಿ ಇಟ್ಟು ಲಾಕ್ ಮಾಡಿಕೊಂಡಿದ್ದ.

ಪಾರ್ಸೆಲ್​ನಲ್ಲಿ ಗ್ರೆನೇಡ್ ಇರುವುದರ ಬಗ್ಗೆ ಜಾಯಿದ್​ಗೂ ಗೊತ್ತಿರಲಿಲ್ಲ. ಆದರೆ ವಿದ್ವಂಸಕ ಕೃತ್ಯವೆಸಗಲು ಸಾಧನ-ಸಲಕರಣೆ ಇರುವುದನ್ನ ಮನಗಂಡಿದ್ದ. ಸಿಸಿಬಿ ವಿಚಾರಣೆ ನೀಡಿದ ಮಾಹಿತಿ ಮೇರೆಗೆ ಸಿಸಿಬಿ, ಎಫ್​ಎಸ್​ಎಲ್, ಬಾಂಬ್ ನಿಷ್ಕ್ರಿಯ ದಳ ತಂಡಗಳು ತೆರಳಿ ಪರಿಶೀಲನೆ‌ ನಡೆಸಿ ಖಚಿತಪಡಿಸಿಕೊಂಡ ಬಳಿಕ ಗ್ರೈನೆಡ್​ಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಜಂಟಿ ಆಯುಕ್ತರು ತಿಳಿಸಿದ್ದಾರೆ.

ವಿವಿಧ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ: ಬಂಧಿತ ಐವರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ‌. ಎಷ್ಟು ದಿನಗಳಿಂದ ಕೃತ್ಯವೆಸಗಲು ಸಂಚು ರೂಪಿಸಿದ್ದರು‌. ಎಲ್ಲೆಲ್ಲಿ ಸ್ಪೋಟಿಸಲು ಪ್ಲ್ಯಾನ್ ಮಾಡಿಕೊಂಡಿದ್ದರು ಎಂಬುದರ ಬಗ್ಗೆ ಈ ಹಂತದಲ್ಲಿ ಮಾಹಿತಿ ನೀಡಲು ಅಸಾಧ್ಯ‌. ವಿವಿಧ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಹೇಳಿದ್ದಾರೆ.

ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್​ ಕಳುಹಿಸಲಾಗಿದೆ:ಬಂಧಿತ ಶಂಕಿತರ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ. ವಶಕ್ಕೆ ಪಡೆದುಕೊಂಡಿದ್ದ 12 ಮೊಬೈಲ್​ಗಳನ್ನ ರಿಟ್ರೀವ್ ಮಾಡಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಐವರ ವಿಚಾರಣೆ ಮುಕ್ತಾಯದ ಬಳಿಕ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳನ್ನ ಕರೆಯಿಸಿ ವಿಚಾರಣೆ ನಡೆಸಲಾಗುವುದು. ಪ್ರಕರಣದ ಪ್ರಮುಖ ಹಾಗೂ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಆರೋಪಿಯಾಗಿರುವ ಟಿ. ನಜೀರ್​ನನ್ನು ಬಾಡಿ ವಾರೆಂಟ್ ಮೇರೆಗೆ ಕಸ್ಟಡಿಗೆ ಪಡೆಯಲಾಗುವುದು ಎಂದು ಅವರು ವಿವರಿಸಿದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಸೆರೆ ಸಿಕ್ಕ ಐವರು ಶಂಕಿತ ಉಗ್ರರಿಗೆ 15 ದಿನ ಪೊಲೀಸ್‌ ಕಸ್ಟಡಿ: ಪೊಲೀಸ್‌ ಆಯುಕ್ತರಿಂದ ಪ್ರಕರಣದ ವಿವರ

Last Updated : Jul 20, 2023, 8:00 PM IST

ABOUT THE AUTHOR

...view details