ಬೆಂಗಳೂರು: ಚಾಂದಿನಿ ಚೌಕ್ ಬಳಿಯ ಹೋಟೆಲ್ ಸಿಬ್ಬಂದಿಯ ಸಂಪರ್ಕದಿಂದ ಶಿವಾಜಿನಗರದಲ್ಲಿ ನಾಲ್ವರಿಗೆ ಸೋಂಕು ಹರಡಿದ ಕಾರಣ, ಚಾಂದಿನ್ ಚೌಕ್ ಜೊತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಸಮೀಪದ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಶಿವಾಜಿನಗರದ ಈ ಐದು ರಸ್ತೆಗಳು ಸಂಪೂರ್ಣ ಬಂದ್: ಪೊಲೀಸರಿಂದ ಪಥ ಸಂಚಲನ - corona latest news
ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಶಿವಾಜಿನಗರದ ಜುಮ್ಮಾ ಮಸೀದಿ ರಸ್ತೆ, ಇ.ಬಿ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರಿಟ್, ರಸೆಲ್ ಮಾರ್ಕೆಟ್, ಬ್ರಾಡ್ ವೇ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಶಿವಾಜಿನಗರದ ಐದು ರಸ್ತೆ ಸಂಫೂರ್ಣ ಬಂದ್
ಮುಂದಿನ ಆದೇಶ ಬರುವವರೆಗೂ ಬಂದ್ ಮಾಡಲಾಗಿರುವ ಪ್ರದೇಶಗಳಲ್ಲಿ ಯಾವುದೇ ಅಂಗಡಿಗಳನ್ನು ತೆರೆಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಒಂದು ವೇಳೆ ತೆರೆದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.