ಬೆಂಗಳೂರು: ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಯಜಮಾನ ಶಂಕರ್ ಸಮ್ಮುಖದಲ್ಲಿ ಬ್ಯಾಡರಹಳ್ಳಿ ಪೊಲೀಸರು ಸ್ಥಳ ಮಹಜರು ನಡೆಸಲಿದ್ದಾರೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ:ಐವರ ಸಾವು ಪ್ರಕರಣ: ಬದುಕುಳಿದ ಪುಟ್ಟ ಕಂದನನ್ನು ಎತ್ತಿಕೊಂಡು ತಾತ ಓಡುತ್ತಿರುವ ವಿಡಿಯೋ ವೈರಲ್

ಇಂದು ಇನ್ಸ್ಪೆಕ್ಟರ್ ರಾಜೀವ್ ಮತ್ತು ಸಿಬ್ಬಂದಿ ಸ್ಥಳ ಮಹಜರು ನಡೆಸಿ, ಆತ್ಮಹತ್ಯೆಗೆ ಕಾರಣವೇನು?, ಡೆತ್ ನೋಟ್ ಬರೆಯಲಾಗಿದೆಯೇ? ಎಂದು ಪರಿಶೀಲನೆ ನಡೆಸಲಿದ್ದಾರೆ. ಜೊತೆಗೆ ಬದುಕುಳಿದ ಮಗುವಿಗೆ ವಿಷ ತಿನ್ನಿಸಲಾಗಿತ್ತಾ?, ಸಾಯುವ ಮುನ್ನ ಏನು ಮಾಡಿದರು? ಎಂಬೆಲ್ಲಾ ವಿಷಯಗಳ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಯಲಿದೆ.
ಇದನ್ನೂ ಓದಿ:ಹಣ-ಆಸ್ತಿ ಎಲ್ಲವೂ ಇತ್ತು.. ಮಾನಸಿಕ ನೆಮ್ಮದಿ ಮರೆಯಾಗಿತ್ತು: ಮಕ್ಕಳ ದಾಂಪತ್ಯದ ಬಿರುಕಿಗೆ ಇಡೀ ಕುಟುಂಬ ಬಲಿ
ಮೃತರ ಮೊಬೈಲ್ ಸೀಜ್ ಮಾಡಿ, ಮೊಬೈಲ್ನಲ್ಲಿ ಕೊನೆಯ ನಂಬರ್ ಡೈಯಲ್ ಮತ್ತು ವಾಟ್ಸ್ ಆಪ್ ಚಾಟ್ ಕುರಿತು ಕೂಡ ಪೊಲೀಸರು ಚೆಕ್ ಮಾಡಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.