ಕರ್ನಾಟಕ

karnataka

ETV Bharat / state

ತುಮಕೂರಿನ ಶಿರಾ ಬಳಿ ಅಪಘಾತ : ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ - five lakh compensation

ತುಮಕೂರಿನ ಶಿರಾ ಬಳಿ ಅಪಘಾತ ಸಂಭವಿಸಿ ಒಂಭತ್ತು ಜನರು ಸಾವಿಗೀಡಾಗಿದ್ದಾರೆ. ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ.

ತುಮಕೂರಿನ ಶಿರಾ ಬಳಿ ಅಪಘಾತ
ತುಮಕೂರಿನ ಶಿರಾ ಬಳಿ ಅಪಘಾತ

By

Published : Aug 25, 2022, 4:23 PM IST

ಬೆಂಗಳೂರು: ತುಮಕೂರಿನ ಶಿರಾ ಬಳಿ ಅಪಘಾತ ಬಳಿ ಸಂಭವಿಸಿದ್ದು, ಅದರಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಜೊತೆ ಮಾತನಾಡಿದ ಅವರು, ಇದು ದುರ್ದೈವ ಸಂಗತಿ. ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 9 ಜನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ಐದು ಲಕ್ಷ ಪರಿಹಾರ ನೀಡುತ್ತೇವೆ ಎಂದು ಹೇಳಿದರು.

ಸಿದ್ದರಾಮಯ್ಯ ಸತ್ಯ ಹರಿಶ್ಚಂದ್ರರಾ ?: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಿಎಂ ಕಿಡಿಕಾರಿದ್ದು, ಸಿದ್ದರಾಮಯ್ಯ ಏನು ಸತ್ಯ ಹರಿಶ್ಚಂದ್ರರಾ ? ಎಂದು ಪ್ರಶ್ನಿಸಿದರು. ಕೆಂಪಣ್ಣ ಒಂದು ವರ್ಷದಿಂದ ಆರೋಪ ಮಾಡ್ತಾ ಇದ್ದಾರೆ. ಇಷ್ಟು ದಿನ ನಿಖರವಾಗಿ ಯಾವೊಬ್ಬ ಸಚಿವರ ಮೇಲೆ ಆರೋಪ‌ ಮಾಡಿರಲಿಲ್ಲ. ಈಗ ಸಚಿವ ಮುನಿರತ್ನ ಮೇಲೆ‌ ಆರೋಪ‌ ಮಾಡಿದ್ದಾರೆ. ಕೆಂಪಣ್ಣ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು‌ ಮುನಿರತ್ನ ಅವರೇ ಹೇಳಿದ್ದಾರೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಹೆಚ್ಚಿನ ಓದಿಗೆ:ತುಮಕೂರು ರಸ್ತೆ ಅಪಘಾತ..ಕಾರ್ಮಿಕರೆಲ್ಲ ನಿದ್ರೆ ಮಂಪರಿನಲ್ಲಿದ್ದಾಗ ಡಿಕ್ಕಿ ಹೊಡೆದ ಲಾರಿ, ಪರಿಹಾರ ಘೋಷಿಸಿದ ಮೋದಿ

ABOUT THE AUTHOR

...view details