ಬೆಂಗಳೂರು:ಕನ್ನಡ ಸಾಹಿತ್ಯ ಪರಿಷತ್ಗೆ ಐದು ಜನ ಗೌರವ ಸದಸ್ಯರನ್ನು ಆಯ್ಕೆ ಮಾಡಿದೆ. ಈ ಹಿಂದೆ ಇದ್ದ ನಾಲ್ವರು ಹಿರಿಯ ಸಾಹಿತಿಗಳು ಕಾಲವಾದ ಕಾರಣ ಐವರು ಹೊಸ ಸದಸ್ಯರನ್ನು ಕನ್ನಡ ಸಾಹಿತ್ಯ ಪರಿಷತ್ ಆಯ್ಕೆ ಮಾಡಿದೆ. ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ್ ಸುದ್ದಿಗೋಷ್ಠಿ ನಡೆಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ್ ಈ ಕುರಿತು ಮಾತನಾಡಿದ ಡಾ.ಮನು ಬಳಿಗಾರ್, ಈ ವರ್ಷ ಪ್ರಥಮ ಬಾರಿಗೆ ಆಯ್ಕೆಯಾದ ಸದಸ್ಯರಿಗೆ ಗೌರವ ಧನ ಒಂದು ಲಕ್ಷ ರೂಪಾಯಿ ನೀಡಲಾಗುವುದು. ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿದೆ. ಈ ಸ್ಥಾನ ಜೀವಮಾನ ಪೂರ್ತಿ ಇರಲಿದೆ ಎಂದರು. ನೂತನವಾಗಿ ಆಯ್ಕೆಯಾಗಿರುವ ಗೌರವ ಸದಸ್ಯರು, ಡಾ. ವೀಣಾ ಶಾಂತೇಶ್ವರ್- ಖ್ಯಾತ ವಿಮರ್ಶಕರು, ಧಾರವಾಡ, ಡಾ. ಗೋ.ರು.ಚನ್ನಬಸಪ್ಪ- ಜಾನಪದ ವಿದ್ವಾಂಸರು, ಡಾ.ಹಂಪಾ ನಾಗರಾಜಯ್ಯ- ಭಾಷಾ ಕೋವಿದರು, ಪ್ರಖ್ಯಾತ ಕವಿ ಡಾ.ದೊಡ್ಡರಂಗೇಗೌಡ ಹಾಗೂ ವಿದ್ವಾಂಸರಾದ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ್ ಅವರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದೆ.
ಆಯ್ಕೆ ಸಮಿತಿಯಲ್ಲಿ, ಗೌರವ ಕೋಶಾಧ್ಯಕ್ಷರಾದ ಮಲ್ಲಿಕಾರ್ಜುನ , ಡಾ. ದಂಡಾವತಿ ಹಾಗೂ ಎಸ್.ಆರ್ ವಿಜಯಶಂಕರ್ ಇದ್ದರು. 1985 ರಿಂದ ಕನ್ನಡ ಸಾಹಿತ್ಯ ಪರಿಷತ್ಗೆ ಕುವೆಂಪು ಆದಿಯಾಗಿ ಈವರೆಗೆ ಕೈಯ್ಯಾರ ಕಿಯ್ಯಣ್ಣ ರೈ, ಚಂದ್ರಕಾಂತ ಕುಸನೂರು, ಪಾಟೀಲ ಪುಟ್ಟಪ್ಪ, ಎಚ್.ಜೆ. ಲಕ್ಕಪ್ಪಗೌಡ, ಡಾ.ಎಂ.ಅಕಬರ ಅಲಿ ಸೇರಿ ಒಟ್ಟು 19 ಜನ ಇದ್ದರು. ಇದರಲ್ಲಿ ಹೆಚ್. ಜೆ.ಲಕ್ಕಪ್ಪಗೌಡ ಮಾತ್ರ ಪ್ರಸ್ತುತ ಇದ್ದಾರೆ.
ಮರಾಠ ಅಭಿವೃದ್ಧಿ ನಿಗಮಕ್ಕೆ ಪ್ರತಿಕ್ರಿಯೆ:
ರಾಜ್ಯದಲ್ಲಿ ವಿವಾದ ಸೃಷ್ಟಿಸಿರುವ ಮರಾಠ ಅಭಿವೃದ್ಧಿ ನಿಗಮದ ಕುರಿತು ಪರಿಷತ್ತಿನ ನಿಲುವು ಬಗ್ಗೆ ಮಾತನಾಡಿದ ಡಾ. ಮನು ಬಳಿಗಾರ್, ಮರಾಠ ಅಭಿವೃದ್ಧಿ ನಿಗಮ ಮರಾಠ ಜನಾಂಗಕ್ಕಾಗಿ ಮಾಡಿದ್ದಾರೆ. ಆದರೆ, ಈ ಹೊತ್ತಿನಲ್ಲಿ ಮಾಡಿರುವುದು ಚರ್ಚಾಸ್ಪದ ವಿಷಯ. ಮರಾಠಿ ಭಾಷೆಗಾಗಿ ಮಾಡಿದ್ದರೆ ಕ.ಸಾ.ಪ ಅದನ್ನು ವಿರೋಧಿಸುತ್ತದೆ. ಆದ್ರೆ ಅದು ಮರಾಠಿ ಭಾಷೆಗಲ್ಲ, ಆದರೆ ಸರ್ಕಾರ ಕಾರ್ಯಸೂಚಿ ಕೊಡುವಾಗ ಎಚ್ಚರ ವಹಿಸಬೇಕು. ಮರಾಠ ಜನಾಂಗ ಬೇರೆ- ಮರಾಠಿ ಬಾಷೆ ಬೇರೆ. ಬೇಂದ್ರೆಯವರ ಮಾತೃಭಾಷೆ, ಮನೆಭಾಷೆ ಕೂಡಾ ಮರಾಠಿಯಾಗಿತ್ತು. ಆದರೆ ಮರಾಠಿ ಭಾಷೆಯ ಜನ ಕರಾಳ ದಿನ ಆಚರಿಸುವುದು, ಕನ್ನಡ ವಿರೋಧಿ ಧೋರಣೆ ತಾಳುವುದು ಒಳ್ಳೆಯದಲ್ಲ, ಅದನ್ನು ಬಿಡಬೇಕು ಎಂದರು.
ಡಿಸೆಂಬರ್ ಹದಿನೈದರ ಬಳಿಕ ಸಮ್ಮೇಳನಕ್ಕೆ ನಿರ್ಧಾರ :
ಈಗಾಗಲೇ ಹಾವೇರಿಯಲ್ಲಿ ಫೆಬ್ರವರಿ ತಿಂಗಳಲ್ಲಿ ನಿಗದಿಯಾಗಿರುವ ಸಮ್ಮೇಳನದ ಬಗ್ಗೆ ಸರ್ಕಾರ ಡಿಸೆಂಬರ್ ಹದಿನೈದರ ಬಳಿಕ ಸರ್ಕಾರದ ನಿರ್ಧಾರ ತಿಳಿಸುವುದಾಗಿ ಸಚಿವ ಬಸವರಾಜ್ ಬೊಮ್ಮಾಯಿಯವರು ತಿಳಿಸಿದ್ದಾರೆ. ಇದಕ್ಕೆ ಹದಿನೈದರ ಗಡುವು ನೀಡಿದ್ದು, ಕೊರೊನಾ ಹಾವಳಿ ಕಡಿಮೆಯಾದರೆ ಸಾಹಿತ್ಯ ಸಂಜೆ ಮಾಡಲಾಗುವುದು. ಸರ್ಕಾರಗಳ ನಿಯಮಾವಳಿಗಳು ಸಡಿಲಗೊಂಡರೆ ಸಮ್ಮೇಳನ ಮಾಡಲು ಸಾಹಿತ್ಯ ಪರಿಷತ್ತು ಸಿದ್ಧವಾಗಿದೆ. ಈ ವಿಚಾರದಲ್ಲಿ ವೈಯಕ್ತಿಕ ನಿರ್ಣಯ ಯಾರದ್ದೂ ಇಲ್ಲ. ಅಧ್ಯಕ್ಷನಾಗಿ ಮಾಡೋದಿಲ್ಲ ಅಂತನೂ ಹೇಳುವುದಿಲ್ಲ. ಆದರೆ ಸರ್ಕಾರದ ನಿರ್ಣಯಗಳು ಒಪ್ಪಿತವಾದರೆ ನಿರ್ಧರಿಸಿದ ದಿನಾಂಕಕ್ಕೆ ಸಮ್ಮೇಳನ ನಡೆಯಲಿದೆ ಎಂದರು.
ಕ.ಸಾ.ಪ ಅಧ್ಯಕ್ಷ ಮನು ಬಳಿಗಾರ್ ಅಧಿಕಾರಾವಧಿ 2021 ರ ಫೆಬ್ರವರಿಗೆ ಅಂತ್ಯವಾಗಲಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣಾ ಸಿದ್ಧತೆ ನಾಲ್ಕು ತಿಂಗಳ ಮೊದಲೇ ಪ್ರಾರಂಭ ಮಾಡಲಾಗಿತ್ತು. ನವೆಂಬರ್ ಹತ್ತಕ್ಕೇ ನೋಟಿಸ್ ನೀಡಲಾಗಿತ್ತು. ಕಾರ್ಯಕಾರಿ ಸಮಿತಿಯಲ್ಲಿಟ್ಟು, ಸರ್ಕಾರಕ್ಕೆ ಪತ್ರವನ್ನು ಬರೆಯಲಾಗಿತ್ತು. ಇನ್ನು ಚುನಾವಣೆ ನಡೆಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು. ಮತದಾರರು ಅಂದಾಜು 3,30,000 ಮತದಾರರು ಆಗಬಹುದು. ಇದರಲ್ಲಿ 3,08,000 ಮತದಾರರು ವೋಟ್ ಹಾಕಬಹುದು.
ಚುನಾವಣಾ ಸುಧಾರಣೆಯ ಭಾಗವಾಗಿ ಈ ಹಿಂದೆ ನ್ಯಾಷನಲ್ ಕಾಲೇಜಿನಲ್ಲೇ ಮತ ಚಲಾವಣೆ ಮಾಡಬೇಕಿತ್ತು. ಮತಗಟ್ಟೆ ಹೆಚ್ಚಳ ಮಾಡಬೇಕಿತ್ತು. ಇದಕ್ಕೆ ಈ ತೊಂದರೆ ತಪ್ಪಿಸಲು,
ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಒಂದು ಮತಗಟ್ಟೆಯಂತೆ 28 ಕಡೆ ವಿಧಾನಸಭಾ ಕ್ಷೇತ್ರಗಳಲ್ಲಿ ಮಾಡಲು ಕೇಳಲಾಗಿದೆ. ಬೆಂಗಳೂರು ಹೊರಗೆ 500 ಮತದಾರರು ಇರುವ ಕಡೆ ಒಂದು ಮತಗಟ್ಟೆ ಇರಬೇಕೆಂದು ಆಗಿದೆ ಎಂದರು. ಇನ್ನು ಎಸ್.ಸಿ , ಎಸ್.ಟಿ ಮಹಿಳಾ ಪ್ರಾತಿನಿಧ್ಯ ಹೆಚ್ಚು ಮಾಡಲು ಹೆಚ್ಚಿನ ಮೀಸಲಾತಿ ನೀಡಲಾಗಿದೆ ಎಂದರು.