ಬೆಂಗಳೂರು :ಅವರೆಲ್ಲರೂ ಚಾಮರಾಜನಗರ ಜಿಲ್ಲೆಯವರು. ಆಗಾಗ ಬೆಂಗಳೂರಿಗೆ ಬೈಕ್ನಲ್ಲಿ ಬಂದು ಹೋಗುತ್ತಿದ್ದರು. ಆದರೆ, ಅವರು ಬರುವಾಗ ಬರೀ ಕೈಯಲ್ಲಿ ಬರುತ್ತಿರಲಿಲ್ಲ. ಕೈಯಲ್ಲಿ ಸಣ್ಣ ಸಣ್ಣ ಪ್ಯಾಕೇಟ್ಗಳನ್ನ ಹಿಡಿದುಕೊಂಡು ಬರುತ್ತಿದ್ದರು. ಈ ಬಾರಿಯೂ ಹಾಗೆ ಬಂದಿದ್ದ ಆ ಟೀಂ, ಈಗ ಪೊಲೀಸರ ಅತಿಥಿಯಾಗಿದ್ದಾರೆ. ಯಾಕೆಂದರೆ, ಆ ಪ್ಯಾಕೇಟ್ನಲ್ಲಿ ಅವರು ಗಾಂಜಾ ತಂದು ಮಾರಾಟ ಮಾಡುತ್ತಿದ್ದರು.
ಕೋರಮಂಗಲ ಪೊಲೀಸರಿಂದ ಭರ್ಜರಿ ಬೇಟೆ ಭರ್ಜರಿ ಕಾರ್ಯಾಚರಣೆ : ಕೋರಮಂಗಲ ಪೊಲೀಸರು, ಬರೋಬ್ಬರಿ 102 ಕೆಜಿ ಗಾಂಜಾ ಸಮೇತ ಐವರು ಆರೋಪಿಗಳನ್ನ ಬಂಧಿಸಿದ್ದಾರೆ. ರಮೇಶ್, ಶಿವರಾಜ್, ಮೂರ್ತಿ, ಮಂಜುನಾಥ್ ಮತ್ತು ಅಭಿಲಾಶ್ ಬಂಧಿತ ಆರೋಪಿಗಳು. ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದರು. ಪಕ್ಕಾ ಮಾಹಿತಿ ಪಡೆದ ಕೋರಮಂಗಲ ಪೊಲೀಸರು ದಾಳಿ ನಡೆಸಿ, ಮಾಲ್ ಸಮೇತ ಆರೋಪಿಗಳನ್ನ ಬಂಧಿಸಿದ್ದಾರೆ.
ಬೈಕ್‌ನಲ್ಲಿಯೇ ಬೆಂಗಳೂರಿಗೆ ಬಂದು ಗಾಂಜಾ ಮಾರಾಟ :ಅಂದಹಾಗೆ ಆರೋಪಿಗಳೆಲ್ಲರೂ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪುಷ್ಪಪುರ ಊರಿನಲ್ಲಿ ತಮ್ಮ ಅಡ್ಡೆ ಮಾಡಿಕೊಂಡಿದ್ದರು. ರಮೇಶ್ ಎಂಬ ಮುಖ್ಯ ಆರೋಪಿಯೇ ಈ ಟೀಂನ ಪ್ರಮುಖನಾಗಿದ್ದು, ವಿಶಾಖಪಟ್ಟಣಂನಿಂದ ಕಡಿಮೆ ಬೆಲೆಗೆ ಗಾಂಜಾ ತಂದು ಅದನ್ನ ತನ್ನೂರು ಪುಷ್ಪಪುರದಲ್ಲಿ ಶೇಖರಿಸುತ್ತಿದ್ದ.
ನಂತರ ಚಿಕ್ಕ ಚಿಕ್ಕ ಪ್ಯಾಕೇಟ್‌ಗಳನ್ನಾಗಿ ಮಾಡಿ ತನ್ನ ಸಹಚರರ ಜೊತೆ ಬೈಕ್‌ನಲ್ಲಿಯೇ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದರು. ಇದೇ ರೀತಿ ತಂದು ಮಾರಾಟ ಮಾಡುತ್ತಿದ್ದ ಆರೋಪಿಗಳ ಮಾಹಿತಿ ಪಡೆದಿದ್ದ ಕೋರಮಂಗಲ ಪೊಲೀಸರು, 102 ಕೆಜಿ ಗಾಂಜಾ ಮತ್ತು ಒಂದು ಬೈಕ್ ಸಮೇತ ಆರೋಪಿಗಳನ್ನ ಬಂಧಿಸಿದ್ದಾರೆ.
ಇನ್ನು ಪ್ರಮುಖ ಆರೋಪಿ ರಮೇಶ್ ವಿರುದ್ಧ ಕೋಣನಕುಂಟೆ, ಕೆಆರ್‌ಪುರಂ, ಹೆಚ್‌ಎಸ್‌ಆರ್ ಲೇಔಟ್, ಬೇಗೂರು ಠಾಣೆಗಳಲ್ಲಿ ಕೊಲೆ, ಗಾಂಜಾ, ಸರಗಳ್ಳತನ, ಕೇಸ್‌ಗಳೂ ಇವೆ. ಈತನ ಹಿಂದೆಯೂ ಬೇರೆ ವ್ಯಕ್ತಿಗಳ ಕೈವಾಡ ಇರೋ ಶಂಕೆಯಿದ್ದು, ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.