ಕರ್ನಾಟಕ

karnataka

ETV Bharat / state

ರಾತ್ರಿ ವೇಳೆ ಸಾರ್ವಜನಿಕರನ್ನು ಬೆದರಿಸಿ ದರೋಡೆ: ಓರ್ವ ಅಪ್ರಾಪ್ತ ಸೇರಿ ಐವರ ಬಂಧನ - ರಾತ್ರಿ ಸಮಯದಲ್ಲಿ ಓಡಾಡುವ ಸಾರ್ವಜನಿಕರನ್ನ ಬೆದರಿಸಿ ಡಕಾಯಿತಿ

ರಾತ್ರಿ ವೇಳೆ ಒಂಟಿಯಾಗಿ ಬರುವವರ ಮೇಲೆ ಹಲ್ಲೆ ಮಾಡಿ, ಹೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಐವರು ಯುವಕರನ್ನ ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಕೆಲವರು ಕಾಲೇಜ್​ ವಿದ್ಯಾರ್ಥಿಗಳಿದ್ರೆ, ಇನ್ನೂ ಕೆಲವರು ಗ್ಯಾರೇಜ್​ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಐವರ ಬಂಧನ
ಐವರ ಬಂಧನ

By

Published : Apr 11, 2022, 2:29 PM IST

ಬೆಂಗಳೂರು: ರಾತ್ರಿ ಸಮಯದಲ್ಲಿ ಓಡಾಡುವ ಸಾರ್ವಜನಿಕರನ್ನ ಗುರಿಯಾಗಿಸಿಕೊಂಡು, ಅವರನ್ನು ಬೆದರಿಸಿ ಡಕಾಯಿತಿ ಮಾಡುತ್ತಿದ್ದ ಐವರು ಯುವಕರನ್ನ ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಓರ್ವ ಅಪ್ರಾಪ್ತ ಸೇರಿದಂತೆ ಬಂಧಿತರನ್ನ ಆನಂದ್(18), ಸಂತೋಷ್ (18), ನಿತಿನ್(20) ಹಾಗೂ ನಿತಿನ್ ಕುಮಾರ್(18) ಎಂದು ಗುರುತಿಸಲಾಗಿದೆ.

ಬಂಧಿತರಲ್ಲಿ ಕೆಲವರು ಕಾಲೇಜ್​ ವಿದ್ಯಾರ್ಥಿಗಳಿದ್ರೆ, ಇನ್ನೂ ಕೆಲವರು ಗ್ಯಾರೇಜ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ರಾತ್ರಿ ವೇಳೆ ನಿರ್ಜನ ಪ್ರದೇಶದಲ್ಲಿ ಇರುತ್ತಿದ್ದ ಆರೋಪಿಗಳು ಒಂಟಿಯಾಗಿ ಬರುವವರ ಮೇಲೆ ಹಲ್ಲೆ ಮಾಡಿ, ಹೆದರಿಸಿ ಹಣ ಸುಲಿಗೆ ಮಾಡುತ್ತಿದ್ದರು. ಹಣ ಕಳೆದುಕೊಂಡ ಕೆಲವರು ಚಿಕ್ಕಜಾಲ ಪೊಲೀಸರಿಗೆ ದೂರು ನೀಡಿದ್ದರು. ಅದರನ್ವಯ ತನಿಖೆ ಕೈಗೊಂಡ ಪೊಲೀಸರು ಇದೀಗ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಬೆಳಗಾವಿ ಸಿಸಿಬಿ ಪೊಲೀಸರ ಕಾರ್ಯಾಚರಣೆ : ಇಬ್ಬರು ಅಂತಾರಾಜ್ಯ ಪೆಡ್ಲರ್ ಅರೆಸ್ಟ್

ABOUT THE AUTHOR

...view details