ಕರ್ನಾಟಕ

karnataka

ETV Bharat / state

ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ಹಾಗೂ ಬಿಬಿಎಂಪಿಯಿಂದ 'ಫಿಟ್ ಇಂಡಿಯಾ ಸೈಕ್ಲೋಥಾನ್' - ಬಿಬಿಎಂಪಿಯಿಂದ ಫಿಟ್ ಇಂಡಿಯಾ ಸೈಕ್ಲೋಥಾನ್

ಫಿಟ್ ಇಂಡಿಯಾ ಸೈಕ್ಲೋಥಾನ್ ಗೆ ಬಿಬಿಎಂಪಿ ವಿಶೇಷ ಆಡಳಿತಾಧಿಕಾರಿ ಗೌರವ್ ಗುಪ್ತಾ ಹಾಗೂ ಆಯುಕ್ತರಾದ ಮಂಜುನಾಥ್ ಪ್ರಸಾದ್ ಚಾಲನೆ ನೀಡಿದರು.

Fit India Cyclothon in Bangalore
ಫಿಟ್ ಇಂಡಿಯಾ ಸೈಕ್ಲೋಥಾನ್

By

Published : Dec 20, 2020, 10:30 AM IST

Updated : Dec 20, 2020, 1:39 PM IST

ಬೆಂಗಳೂರು: ಬಿಬಿಎಂಪಿ ಹಾಗೂ ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ವತಿಯಿಂದ ಕಬ್ಬನ್ ಪಾರ್ಕ್ ಹಡ್ಸನ್ ವೃತ್ತದಿಂದ ಫಿಟ್ ಇಂಡಿಯಾ ಸೈಕ್ಲೋಥಾನ್ ಗೆ ಬಿಬಿಎಂಪಿ ವಿಶೇಷ ಆಡಳಿತಾಧಿಕಾರಿ ಗೌರವ್ ಗುಪ್ತಾ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಚಾಲನೆ ನೀಡಿದರು. ಈ ವೇಳೆ ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕರಾದ ರಾಜೇಂದ್ರ ಚೋಳನ್ ಸೇರಿದಂತೆ ವಿವಿಧ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಸೈಕಲ್ ಜಾಥಾದಲ್ಲಿ ಪಾಲ್ಗೊಂಡರು.

ಫಿಟ್ ಇಂಡಿಯಾ ಸೈಕ್ಲೋಥಾನ್

ಇದೇ ಸಂದರ್ಭದಲ್ಲಿ ನಗರದಲ್ಲಿ ಕೋವಿಡ್ ವಾರಿಯರ್ಸ್ ಗಳಾಗಿ ಹಗಲಿರುಳು ಶ್ರಮಿಸಿದವರಿಗೆ ಗೌರವ ಸಲ್ಲಿಸುತ್ತಿರುವುದು ಅಭಿನಂದನೀಯ ಎಂದು ಆಡಳಿತಗಾರರು ತಿಳಿಸಿದರು‌. ಆಯುಕ್ತರು ಮಾತನಾಡಿ, ಪ್ರಧಾನಮಂತ್ರಿಗಳ ಕನಸಾಗಿರುವ ಫಿಟ್ ಇಂಡಿಯಾ ಅಭಿಯಾನದ ಅಂಗವಾಗಿ ಇಂದು ಪಾಲಿಕೆ ಹಾಗೂ ಬೆಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಸೈಕ್ಲೋಥಾನ್ ಆಯೋಜಿಸಲಾಗಿದೆ. ಪ್ರತಿಯೊಬ್ಬ ನಾಗರಿಕರೂ ಆರೋಗ್ಯವಾಗಿ, ದೈಹಿಕವಾಗಿ ಸದೃಢವಾಗಿರಬೇಕಾದರೆ ಪ್ರತಿನಿತ್ಯ ದೈಹಿಕ ಶಿಕ್ಷಣ ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ ಎಲ್ಲರೂ ಫಿಟ್ ಆಗಿರುವ ಮೂಲಕ ಆರೋಗ್ಯಕರವಾಗಿರಬೇಕು ಎಂದರು.

ಅಲ್ಲದೆ ನಗರದಲ್ಲಿ ಕೋವಿಡ್-19 ತಡೆಯಲು ಹಗಲಿರುಳು ಶ್ರಮಿಸಿದ ಸಾಕಷ್ಟು ಕೋವಿಡ್ ವಾರಿಯರ್ಸ್ ನಗರದಲ್ಲಿದ್ದಾರೆ. ಅವರನ್ನು ಗುರುತಿಸಿ ಗೌರವ ಸೂಚಿಸುವುದು ಉತ್ತಮ ಕೆಲಸ ಎಂದರು. ಕೋವಿಡ್-19 ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುವ ವೈದ್ಯರು, ಸಂಚಾರಿ ವಿಭಾಗದ ಪೊಲೀಸರು ಹಾಗೂ ಮಾರ್ಷಲ್ ಗಳನ್ನು ಗುರುತಿಸಿ 2,000 ರೂ. ಪ್ರೋತ್ಸಾಹ ಗೌರವಧನ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಇದನ್ನು ಓದಿ :ಎರಡೇ ಗಂಟೆಯಲ್ಲಿ 23 ಲಕ್ಷ ರೂ. ದಂಡ ವಸೂಲಿ : ವಾಹನ ಸವಾರರಿಗೆ ಶಾಕ್​ ನೀಡಿದ ಟ್ರಾಫಿಕ್​​ ಪೊಲೀಸ್

ಸೈಕಲ್ ಜಾಥಾವು ಹಡ್ಸನ್ ವೃತ್ತ - ಚಿನ್ನಸ್ವಾಮಿ ಕ್ರೀಡಾಂಗಣದ ಕಸ್ತೂರಬಾ ರಸ್ತೆ(ಕ್ವೀನ್ಸ್ ರಸ್ತೆ) ಮೂಲಕ - ಜಿ.ಪಿ.ಒ ವೃತ್ತ - ರಾಜಭವನ ರಸ್ತೆ - ಚಾಲುಕ್ಯ ವೃತ್ತ - ಡಾ. ಬಿ.ಆರ್.ಅಂಬೇಡ್ಕರ್ ವೀಧಿ(ಎಂ.ಎಸ್.ಕಟ್ಟಡ ಮಾರ್ಗವಾಗಿ) - ಕೆ.ಆರ್.ವೃತ್ತ - ನೃಪತುಂಗ ರಸ್ತೆ ಮಾರ್ಗವಾಗಿ ಹಡ್ಸನ್ ವೃತ್ತಕ್ಕೆ ಸೈಕ್ಲೋಥಾನ್ ಪೂರ್ಣಗೊಂಡಿತು.

Last Updated : Dec 20, 2020, 1:39 PM IST

ABOUT THE AUTHOR

...view details