ಬೆಂಗಳೂರು :ಸಾಮಾನ್ಯವಾಗಿ ಮಾಂಸಹಾರಿಗಳಿಗೆ ಮೀನು ಊಟ ಅಂದ್ರೆ ಪಂಚಪ್ರಾಣ. ಅದರಲ್ಲೂ ಮಂಗಳೂರಿನ ಫಿಶ್ ಖಾದ್ಯವೆಂದರೆ ಕೊಂಚ ಜಾಸ್ತಿಯೇ ಬಾಯಿ ನೀರು ಬರುತ್ತೆ. ಈ ಅವಕಾಶ ಇಂದು ಸಿಲಿಕಾನ್ ಸಿಟಿ ಜನರಿಗೆ ಒದಗಿ ಬಂದಿತ್ತು.
ಕತ್ರಿಗುಪ್ಪೆಯ ಸಿಂಧೂರ ಹೋಟೆಲ್ನಲ್ಲಿ ಫಿಶ್ ಮೇಳ ನಗರದ ಕತ್ರಿಗುಪ್ಪೆಯ ಸಿಂಧೂರ ಹೋಟೆಲ್ನಲ್ಲಿ ಇಂದು ಫಿಶ್ ಮೇಳ ಆಯೋಜಿಸಲಾಗಿತ್ತು. ಹೀಗಾಗಿ, ಇಲ್ಲಿಗೆ ನಾನ್ ವೆಜ್ ಪ್ರಿಯರು ಕುಟುಂಬ ಸಮೇತರಾಗಿ ಬಂದು ನಾನಾ ಬಗೆಯ ಫಿಶ್ ಖಾದ್ಯಗಳನ್ನ ಸವಿದರು.
ಅಂಜಲ್ ಫ್ರೈ, ಬೆಸ್ತಾ ಸೂಪ್, ಸುಕ್ಕ, ಏಡಿ ಬಸಲೇ ಗಸಿ, ನೀರ್ ದೋಸೆ, ಫಿಶ್ ಫಿಂಗರ್ ಇಂತಹ ವೆರೈಟಿ ವೆರೈಟಿ ಸೀ ಫುಡ್ಗಳನ್ನು ನಾನ್-ವೆಜ್ ಪ್ರಿಯರು ಚಪ್ಪರಿಸಿ ತಿಂದಿದ್ದಾರೆ. ಕರಾವಳಿಯ ಸಾಂಪ್ರದಾಯಿಕ ಖಾದ್ಯಗಳಾದ ಬಾಂಗಡೆ, ಕೊಕನಟ್ ಬಜ್ಜಿ, ನೀರ್ ದೋಸೆ, ನುಗ್ಗೇಕಾಯಿ ಸೂಪ್, ಕೊಡಯ್ ಮಸಾಲ ಫ್ರೈ, ಫಿಶ್ ಕರಿ, ರಾಗಿ ಮಣ್ಣಿ, ಹೀಗೆ ವಿವಿಧ ಬಗೆಯ 12 ಖಾದ್ಯಗಳನ್ನು ಸವಿದ ಸಿಲಿಕಾನ್ ಸಿಟಿ ಜನ ಸಂತಸ ವ್ಯಕ್ತಪಡಿಸಿದ್ದಾರೆ. ಫಿಶ್ ಮೇಳ ಅಕ್ಟೋಬರ್ 31ರವರೆಗೆ ನಡೆಯಲಿದೆ.
ಓದಿ:ಮೈಸೂರು ಮೃಗಾಲಯದಲ್ಲಿ ಒರಾಂಗೂಟಾನ್ ಪ್ರವಾಸಿಗರ ವೀಕ್ಷಣೆಗೆ ಅವಕಾಶ