ಕರ್ನಾಟಕ

karnataka

ETV Bharat / state

ಪುನೀತ್‌ ರಾಜ್​ಕುಮಾರ್​ ಮೊದಲ ವರ್ಷದ ಪುಣ್ಯಸ್ಮರಣೆ: ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ದೊಡ್ಮನೆ ಕುಟುಂಬಸ್ಥರು - ಪವರ್​​ಸ್ಟಾರ್​ ಪುನೀತ್ ರಾಜ್​ಕುಮಾರ್

ಇಂದು ಅಪ್ಪು ಮೊದಲ ವರ್ಷದ ಪುಣ್ಯ ಸ್ಮರಣೆ. ಈ ಹಿನ್ನೆಲೆ ದೊಡ್ಮನೆ ಕುಟುಂಬಸ್ಥರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದರು.

death anniversary of Power Star Puneeth Rajkumar
ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ದೊಡ್ಮನೆ ಕುಟುಂಬಸ್ಥರು

By

Published : Oct 29, 2022, 12:02 PM IST

Updated : Oct 29, 2022, 12:45 PM IST

ಬೆಂಗಳೂರು:ಪವರ್​​ಸ್ಟಾರ್​ ಪುನೀತ್ ರಾಜ್​ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆ ದೊಡ್ಮನೆ ಕುಟುಂಬಸ್ಥರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದರು. ಅಪ್ಪು ನೆನೆದು ಪತ್ನಿ ಅಶ್ವಿನಿ ಭಾವುಕರಾದರು. ಶಿವರಾಜ್​ಕುಮಾರ್​ ರಾಘವೇಂದ್ರ ರಾಜ್​ಕುಮಾರ್, ವಿನಯ್​ ರಾಜ್​ಕುಮಾರ್​ ಸೇರಿ ಹಲವರು ಭಾಗಿಯಾಗಿದ್ದರು.

ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ದೊಡ್ಮನೆ ಕುಟುಂಬಸ್ಥರು

ಭೋಜನಪ್ರಿಯ ಅಪ್ಪುಗೆ ಇಷ್ಟವಾದ ಖಾದ್ಯಗಳನ್ನು ಕುಟುಂಬಸ್ಥರು ಎಡೆ ಇಟ್ಟಿದ್ದರು. ನಾಟಿಕೋಳಿ ಸಾರು, ಧಮ್ ಬಿರಿಯಾನಿ, ಒಬ್ಬಟ್ಟು, ಸೇರಿ ಹಲವು ಊಟ ಎಡೆ ಇಡಲಾಗಿತ್ತು.

ಅಪ್ಪು ಸಮಾಧಿ ಬಳಿ ಜನಸಾಗರ: ಪುನೀತ್​ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ರಾತ್ರಿಯಿಂದಲೇ ಅಪ್ಪು ಸಮಾಧಿ ಬಳಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನಸಾಗರವೇ ಅಪ್ಪು ಸಮಾಧಿಗೆ ಹರಿದು ಬರುತ್ತಿದೆ. ಅಪ್ಪು ಸಮಾಧಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿದೆ. ಸಮಾಧಿ ಪೂರ್ತಿ ಹಸಿರು ಶ್ವೇತಾಂಬರಿ ವರ್ಣದ ಹೂಗಳಿಂದ ಸಿಂಗಾರಗೊಂಡಿದೆ.

ಅಭಿಮಾನಿಗಳ ಕಣ್ಣೀರು:ನಿನ್ನೆಯಷ್ಟೇ ಅಪ್ಪು ಅಭಿನಯದ, ಅಭಿನಯಕ್ಕಿಂತ ಹೆಚ್ಚು ಜೀವಿಸಿದ ಗಂಧದ ಗುಡಿ ಸಿನಿಮಾ ರಿಲೀಸ್ ಆಗಿದೆ. ಅಭಿಮಾನಿಗಳು ಅಪ್ಪು ಜರ್ನಿ ಕಂಡು ಭಾವುಕರಾಗುತ್ತಿದ್ದಾರೆ. ಇಂದು ಅಪ್ಪು ಅಭಿಮಾನಿಗಳಿಗೆ ಸಮಾಧಿ ಬಳಿ ಅಭಿಮಾನಿಗಳಿಗೆ ಅನ್ನದಾನದ ವ್ಯವಸ್ಥೆ ಕೂಡ ಮಾಡಲಾಗಿದೆ.

ಇದನ್ನೂ ಓದಿ:ಹಲವು ಸಮಾಜ ಸೇವೆಗಳ ಮೂಲಕ ಹೃದಯ ವೈಶಾಲ್ಯ ಮೆರೆದಿದ್ದ ಹೃದಯವಂತ ಅಪ್ಪು

Last Updated : Oct 29, 2022, 12:45 PM IST

For All Latest Updates

ABOUT THE AUTHOR

...view details