ಬೆಂಗಳೂರು:ಮೊದಲು ಕೆಪಿಸಿಸಿ ಅಧ್ಯಕ್ಷರ ನೇಮಕ ಆಗಬೇಕು. ಆ ನಂತರ ಕಾರ್ಯಾಧ್ಯಕ್ಷರ ವಿಚಾರ ಎಂದು ಮಾಜಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಮೊದಲು ಕೆಪಿಸಿಸಿ ಅಧ್ಯಕ್ಷರು ನೇಮಕ, ನಂತರ ಕಾರ್ಯಾಧ್ಯಕ್ಷರ ವಿಚಾರ: ಜಾರ್ಜ್ - ಮಾಜಿ ಸಚಿವ ಕೆಜೆ ಜಾರ್ಜ್
ಮೊದಲು ಕೆಪಿಸಿಸಿ ಅಧ್ಯಕ್ಷರ ನೇಮಕ ಆಗಬೇಕು. ಆ ನಂತರ ಕಾರ್ಯಾಧ್ಯಕ್ಷರ ವಿಚಾರ ಎಂದು ಮಾಜಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಸಿದ್ದರಾಮಯ್ಯನವರ ನಿವಾಸ ಕಾವೇರಿಯ ಮುಂಭಾಗ ಸುದ್ದಿಗಾರರ ಜೊತೆ ಮಾತನಾಡಿದ ಕೆ.ಜೆ. ಜಾರ್ಜ್, ಆದಷ್ಟು ಬೇಗ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡಬೇಕು ಅನ್ನೋದು ನನ್ನ ಅಭಿಪ್ರಾಯ. ವಿಪಕ್ಷ ನಾಯಕ, ಸಿಎಲ್ಪಿ ಬೇರೆ ಬೇರೆ ಆಗಬೇಕು ಅಂತ ಎಲ್ಲಿ ಚರ್ಚೆ ಆಗಿದೆ? ಸಿಎಲ್ಪಿ, ಎಲ್ಓಪಿ ವಿಚಾರದಲ್ಲಿ ಹೈಕಮಾಂಡ್ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ ಎನಿಸುತ್ತದೆ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇದರಲ್ಲಿ ನನ್ನನ್ನು ಕೇಳಿದರೆ ಏನು ಹೇಳಲಿ? ಎಂದರು.
ಇಡಿ ವಿಚಾರಣೆಗೆ ಹಾಜರಾದ ವಿಚಾರ ಪ್ರಸ್ತಾಪಿಸಿ, ಡಿ.ಕೆ. ರವಿ ಕೇಸ್ನಲ್ಲಿ ಏನಾಯ್ತು ಅಂತ ಗೊತ್ತಿದೆಯಲ್ಲ. ಸಿಬಿಐ ಬಿ ರಿಪೋರ್ಟ್ ಹಾಕಿದ ಮೇಲೆ ಯಾರಾದ್ರೂ ಮಾತಾಡಿದ್ರಾ? ಗಣಪತಿ ಕೇಸ್ ನಲ್ಲೂ ಹಾಗೇ ಆಗಿದೆ. ಸ್ಟೀಲ್ ಬ್ರಿಡ್ಜ್ ಆರೋಪ ಮಾಡಿದ್ರು, ವೈಟ್ ಟಾಪಿಂಗ್ ಆರೋಪ ಮಾಡಿದ್ರು. ನೀವೇ ಯೋಚನೆ ಮಾಡಿ ಇದರ ಹಿಂದೆ ಟಾರ್ಗೆಟ್ ಮಾಡಿದ್ದಾರಾ? ಇಲ್ವಾ ಅಂತ? ಎಂದು ಪ್ರಶ್ನಿಸಿದರು.