ಬೆಂಗಳೂರು: ಭಾರತದಲ್ಲಿ ಇದುವರೆಗೂ ಹೂಡಿಕೆ ಮಾಡದ ಚೀನಾದಲ್ಲಿರುವ ಕಂಪನಿಗಳನ್ನು ಪತ್ತೆಹಚ್ಚಿ. ಅಲ್ಲಿಂದು ಹೊರಬರಲು ಇಚ್ಛಿಸುವ ಕಂಪನಿಗಳನ್ನು ಪಟ್ಟಿ, ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ತಿಳಿಸುವಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಸ್ಪೆಷಲ್ ಇನ್‌ವೆಸ್ಟ್‌ಮೆಂಟ್ ಟಾಸ್ಕ್ ಫೋರ್ಸ್ಗೆ ಸೂಚನೆ ನೀಡಿದರು.
ಕೊರೊನಾ ಸಂಕಷ್ಟದಿಂದ ಚೀನಾದಿಂದ ಹೊರ ಬರುತ್ತಿರುವ ಕೈಗಾರಿಕಾ ಘಟಕಗಳನ್ನು ರಾಜ್ಯದತ್ತ ಸೆಳೆಯಲು ರಚಿಸಲಾದ ಸ್ಪೆಷಲ್ ಇನ್‌ವೆಸ್ಟ್‌ಮೆಂಟ್ ಟಾಸ್ಕ್ ಫೋರ್ಸ್ನ ಮೊದಲ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೊರೊನಾ ಮಹಾಮಾರಿಯ ಸಂದರ್ಭವನ್ನು ನಿರ್ವಹಿಸಿದ ರೀತಿಯನ್ನು ಗಮನಿಸಿದಲ್ಲಿ ರಾಜ್ಯ ಸರ್ಕಾರದ ಆಡಳಿತ ಯಂತ್ರದ ದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ. ನಮ್ಮ ರಾಜ್ಯದಲ್ಲಿ ಹೂಡಿಕೆಗೆ ಉತ್ತಮ ವಾತಾವರಣವಿದೆ ಎಂದರು.