ದೇವನಹಳ್ಳಿ : ಕೊರೊನಾ ವೈರಸ್ ಎರಡನೇ ಅಲೆ ಇಂಗ್ಲೆಂಡ್ನಲ್ಲಿ ಶುರುವಾದ ಹಿನ್ನೆಲೆ, ಇಂಗ್ಲೆಂಡ್ ನಡುವಿನ ವಿಮಾನಯಾನ ರದ್ದು ಮಾಡಲಾಗಿತ್ತು. ಇಂದಿನಿಂದ ಇಂಗ್ಲೆಂಡ್ ನಡುವಿನ ವಿಮಾನಯಾನ ಪ್ರಾರಂಭವಾಗಿದ್ದು, ಮೊದಲ ವಿಮಾನ ಇಂದು ಮುಂಜಾನೆ 4-30 ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಇಂಗ್ಲೆಂಡ್ನಿಂದ ಮೊದಲ ವಿಮಾನದಲ್ಲಿ 289 ಪ್ರಯಾಣಿಕರು ಆಗಮಿಸಿದ್ದು, ಅದರಲ್ಲಿ ನಾಲ್ವರ ಕೋವಿಡ್-19 ತಪಾಸಣಾ ವರದಿಯು ಅನುಮಾನಾಸ್ಪದವಾಗಿ ಕಂಡು ಬಂದಿರುವುದರಿಂದ ಅವರೆಲ್ಲರನ್ನೂ ಐಸೋಲೇಷನ್ ಮಾಡಲಾಗಿದೆ. ಒಟ್ಟು 289 ಪ್ರಯಾಣಿಕರು ಆಗಮಿಸಿದ್ದು, 146 ಪುರುಷರು, 95 ಮಹಿಳೆಯರು, 32 ಮಕ್ಕಳು ಮತ್ತು 16 ಸಿಬ್ಬಂದಿ ಆಗಮಿಸಿದ್ದರು.