ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಮೊದಲ ದಿನದ ಸಿಇಟಿ ಯಶಸ್ವಿ: ಪಾಸಿಟಿವ್ ವಿದ್ಯಾರ್ಥಿಗಳೂ ಹಾಜರ್‌‌, ಶೇ 75 ಹಾಜರಾತಿ - DCM Ashwathth Narayan

ಒಟ್ಟು 22 ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ವಿದ್ಯಾರ್ಥಿಗಳೂ ಸಹ ಇವತ್ತು ಪರೀಕ್ಷೆ ಬರೆದಿದ್ದಾರೆ.‌ ಯಾವುದೇ ಆತಂಕವಿಲ್ಲದೇ ಪರೀಕ್ಷೆ ಯಶಸ್ವಿಯಾಗಿಸಿದ ಎಲ್ಲರಿಗೂ ಡಿಸಿಎಂ‌ ಡಾ. ಅಶ್ವತ್ಥ್​ ನಾರಾಯಣ್ ಕೃತಜ್ಞತೆ ಸಲ್ಲಿಸಿದ್ದಾರೆ.

First day CET exam successfully completed in the state
ರಾಜ್ಯದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡ ಮೊದಲ ದಿನದ ಸಿಇಟಿ ಪರೀಕ್ಷೆ

By

Published : Jul 30, 2020, 8:23 PM IST

ಬೆಂಗಳೂರು: ಕೊರೊನಾ ಆತಂಕದ ನಡುವೆಯು ಸಿಇಟಿ ಪರೀಕ್ಷೆ ವ್ಯವಸ್ಥಿತವಾಗಿ ನಡೆದಿದೆ. ಕಾನೂನಾತ್ಮಕ, ಶಾಂತಿಯುತವಾಗಿ ಯಾವುದೇ ಆತಂಕವಿಲ್ಲದೇ ಪರೀಕ್ಷೆ ಯಶಸ್ವಿಯಾಗಿಸಿದ ಎಲ್ಲರಿಗೂ ಡಿಸಿಎಂ‌ ಡಾ. ಅಶ್ವತ್ಥ ನಾರಾಯಣ ಕೃತಜ್ಞತೆ ಸಲ್ಲಿಸಿದ್ದಾರೆ.

ಕೋವಿಡ್​​​ ಸನ್ನಿವೇಶದಲ್ಲಿ ಕಲ್ಪನೆ ಮೀರಿ ಪರೀಕ್ಷೆ ಯಶಸ್ವಿಯಾಗಲಿದೆ ಅಂತ ಯಾರೂ ಊಹಿಸಿರಲಿಲ್ಲ. ಎಲ್ಲರ ಸಹಕಾರದೊಂದಿಗೆ ಮೊದಲ ದಿನ ಪರೀಕ್ಷೆ ಮುಗಿದಿದ್ದು, ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ‌ ಅನಿರ್ವಾಯವಾಗಿತ್ತು ಎಂದಿದ್ದಾರೆ‌‌.

ಮೊದಲ ದಿನ ಒಟ್ಟು 1,94,419 ನೋಂದಾಯಿತ ವಿದ್ಯಾರ್ಥಿಗಳ ಪೈಕಿ 1,47,491 ಮಂದಿ ಹಾಜರಾಗಿದ್ದಾರೆ. ಜೀವಶಾಸ್ತ್ರ-1,47,491, ಗಣಿತ ವಿಷಯಕ್ಕೆ -1,73,408 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.‌ ಕಳೆದ ವರ್ಷ 1,94,311 ನೋಂದಾಯಿತ ವಿದ್ಯಾರ್ಥಿಗಳ ಪೈಕಿ ಜೀವಶಾಸ್ತ್ರ 1,48,022, ಗಣಿತ 1,78,517 ಮಂದಿ ಪರೀಕ್ಷೆ ಬರೆದಿದ್ದರು. ಈ ಮೂಲಕ ಶೇ. 92ರಷ್ಟು ಮಂದಿ ಪರೀಕ್ಷೆ ಎದುರಿಸಿದ್ದರು. ಈ ಬಾರಿ 75% ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುವುದಾಗಿ ಮಾಹಿತಿ ನೀಡಿದರು.

ಒಟ್ಟು 22 ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಇರುವ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.‌ ಇನ್ನು ನಾಳೆ 10:30ಕ್ಕೆ ಭೌತಶಾಸ್ತ್ರ ಹಾಗೂ 2:30ಕ್ಕೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ.

ABOUT THE AUTHOR

...view details