ಬೆಂಗಳೂರು:ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಮೊದಲ ಮಹಿಳಾ ಬ್ಯಾಚ್ ಸನ್ನದ್ಧವಾಗಿದ್ದು, ಈ ತಂಡಕ್ಕೆ ಬೆಂಗಳೂರಿನ ಪೊಲೀಸ್ ಮತ್ತು ಮಿಲಿಟರಿ ಪೊಲೀಸ್ ಕೇಂದ್ರ ಶಾಲೆಯ ದ್ರೋಣಾಚಾರ್ಯ ಪರೇಡ್ ಮೈದಾನದಲ್ಲಿ ಅಭಿನಂದಿಸಲಾಗಿದೆ.
ಭಾರತೀಯ ಸೇನೆ ನಿಯೋಜನೆಗೆ ಮೊದಲ ಮಹಿಳಾ ಬ್ಯಾಚ್ ಸಿದ್ಧ - ದ್ರೋಣಾಚಾರ್ಯ ಪರೇಡ್ ಮೈದಾನ
83 ಮಹಿಳೆಯರನ್ನೊಳಗೊಂಡ ತಂಡಕ್ಕೆ ಸಿಎಂಪಿ ಕೇಂದ್ರ ಮತ್ತು ತರಬೇತಿ ಶಾಲೆಯ ಬ್ರಿಗೇಡಿಯರ್ ಸಿ. ದಯಾನಂದ್ ಅಭಿನಂದಿಸಿದ್ದಾರೆ. ಸುಮಾರು 61 ವಾರಗಳ ನಿರಂತರ ಕಠಿಣ ತರಬೇತಿ ಪಡೆದಿರುವ ಪಡೆ, ಇದೀಗ ಗಡಿಯಲ್ಲಿ ಸೇವೆ ಸಲ್ಲಿಸಲು ತಯಾರಾಗಿದೆ.
ತರಬೇತಿ ಮುಗಿಸಿ ಭಾರತೀಯ ಸೇನೆ ನಿಯೋಜನೆಗೆ ಸಿದ್ಧವಾದ ಮೊದಲ ಮಹಿಳಾ ಬ್ಯಾಚ್
83 ಮಹಿಳೆಯರನ್ನೊಳಗೊಂಡ ತಂಡಕ್ಕೆ ಸಿಎಂಪಿ ಕೇಂದ್ರ ಮತ್ತು ತರಬೇತಿ ಶಾಲೆಯ ಬ್ರಿಗೇಡಿಯರ್ ಸಿ. ದಯಾನಂದ್ ಅಭಿನಂದಿಸಿದ್ದಾರೆ. ಸುಮಾರು 61 ವಾರಗಳ ನಿರಂತರ ಕಠಿಣ ತರಬೇತಿ ಪಡೆದಿರುವ ಪಡೆ, ಇದೀಗ ಗಡಿಯಲ್ಲಿ ಸೇವೆ ಸಲ್ಲಿಸಲು ತಯಾರಾಗಿದೆ.
ಸೇನೆಯಲ್ಲಿ ಈ ಮಹಿಳೆಯರು ಪೊಲೀಸ್ ಕರ್ತವ್ಯಗಳನ್ನು ನಿಭಾಯಿಸುವುದು ಯುದ್ಧದ ಸಂದರ್ಭದಲ್ಲಿ ಕೈದಿಗಳ ನಿರ್ವಹಣೆ, ಕೌಶಲ್ಯಾಭಿವೃದ್ಧಿ ಸೇರಿ ವಾಹನ ಚಾಲನೆಯ ಕುರಿತು ತರಬೇತಿ ಪಡೆದಿದ್ದಾರೆ.