ಬೆಂಗಳೂರು:ಉದ್ಯಾನನಗರಿ ಬೆಂಗಳೂರಿನಲ್ಲಿ ಸಸ್ಯಕಾಶಿ ಲಾಲ್ಬಾಗ್ ಸ್ವಚ್ಚ ಗಾಳಿ, ಹಚ್ಚ ಹಸಿರಿನ ಪರಿಸರ, ಕಿವಿಗೆ ಹಿತವೆನಿಸೋ ಪಕ್ಷಿಗಳ ಚಿಲಿಪಿಲಿಗಳನ್ನೊಳಗೊಂಡ ಸುಂದರ ತಾಣ. ಪ್ರವಾಸಿಗರ ಈ ನೆಚ್ಚಿನ ತಾಣದಲ್ಲಿ ಪ್ರಥಮ ಚಿಕಿತ್ಸೆ ನೀಡೋ ಆಸ್ಪತ್ರೆಯನ್ನ ತೆರೆಯಲಾಗಿದ್ದು, ಅದನ್ನ ಲಾಲ್ಬಾಗ್ ಆಸ್ಪತ್ರೆ ಎಂದೇ ಹೆಸರಿಸಲಾಗಿದೆ.
ಸಸ್ಯಕಾಶಿ ಲಾಲ್ಬಾಗ್ ಉದ್ಯಾನವನದಲ್ಲೀಗ,,, ಚಿಕಿತ್ಸಾ ಯೋಗ.. ಹೌದು, ಆರೋಗ್ಯ ದೃಷ್ಟಿಯಿಂದ ತೋಟಗಾರಿಕೆ ಇಲಾಖೆ ಉದ್ಯಾನದೊಳಗೆ ಲಾಲ್ಬಾಗ್ ಆಸ್ಪತ್ರೆ ಶುರು ಮಾಡಿದೆ. ಈ ಮುಂಚೆ ಡಿಡಿ ಕಚೇರಿಯಲ್ಲೇ ಮಿನಿ ಕ್ಲಿನಿಕ್ ಆರಂಭವಾಗಿತ್ತು. ಆದರೆ, ಆಸ್ಪತ್ರೆಯ ವೈದ್ಯರು ಸರಿಯಾಗಿ ಹಾಜರಾಗದ ಕಾರಣ ಅದನ್ನ ಮುಚ್ಚಲಾಗಿತ್ತು.
ಸದ್ಯ ಲಾಲ್ಬಾಗ್ ನಲ್ಲೇ ಒಂದು ಆಸ್ಪತ್ರೆ ಅಗತ್ಯ ಎಂಬ ಕಾರಣಕ್ಕೆ ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ ಉಪ ನಿರ್ದೇಶಕರ ಗಾರ್ಡನ್ ಕಚೇರಿಯಲ್ಲಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ. ಲಾಲ್ಬಾಗ್ ನಲ್ಲಿ ಶ್ವಾನಗಳು, ಹಾವುಗಳು, ಜೇನುನೊಣಗಳು ವಾಸವಾಗಿದ್ದು, ಅದೆಷ್ಟು ಬಾರಿ ಅನಾಹುತ ಪ್ರಸಂಗಗಳು ನಡೆದಿವೆ. ಅಷ್ಟೇ ಅಲ್ಲದೆ ಸಸ್ಯಕಾಶಿಯಲ್ಲಿ ಫ್ಲವರ್ ಶೋ ಸೇರಿದಂತೆ ಇತರ ಯಾವುದೇ ಕಾರ್ಯಕ್ರಮಗಳಲ್ಲಿ ಜನಸಂಖ್ಯೆ ಹೆಚ್ಚಾದಾಗ ಕೆಲ ಅನಾಹುತಗಳು ನಡೆಯೋದು ಮಾಮೂಲಿ. ಇಂತ ಸಂದರ್ಭಗಳಲ್ಲಿ ಕೂಡಲೇ ಪ್ರಥಮ ಚಿಕಿತ್ಸೆ ನೀಡಲು ಯಾವುದೇ ವ್ಯವಸ್ಥೆ ಇರಲಿಲ್ಲ.
ಸಸ್ಯಕಾಶಿ ಲಾಲ್ಬಾಗ್ ಉದ್ಯಾನವನದಲ್ಲೀಗ,,, ಚಿಕಿತ್ಸಾ ಯೋಗ.. ಸದ್ಯ ಸಾರ್ವಜನಿಕರ ಹಿತದೃಷ್ಟಿಯಿಂದ ಆಸ್ಪತ್ರೆ ನಿರ್ಮಿಸಲಿದ್ದು, ಇದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಇಲಾಖೆಯವರೇ ಒಬ್ಬ ನರ್ಸ್ ನೇಮಿಸಿಕೊಂಡಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ ಕೇವಲ ಪ್ರಾಣಿ ದಾಳಿಗೆ ಒಳಗಾಗುವ ಜನರಿಗೆ ಮಾತ್ರ ತುರ್ತು ಚಿಕಿತ್ಸೆ ನೀಡಲಾಗುತ್ತೆ. ಈಗಾಗಲೇ 54 ಪ್ರಥಮ ಚಿಕಿತ್ಸಾ ಬಾಕ್ಸ್ಗಳನ್ನ ಅಳವಡಿಸಲಾಗಿದೆ