ಬೆಂಗಳೂರು: ಅಪೊಲೋ ಆಸ್ಪತ್ರೆ ವತಿಯಿಂದ ಪ್ರಥಮ ಚಿಕಿತ್ಸೆ ಮತ್ತು ಜೀವ ಉಳಿಸುವ ಕೌಶಲ್ಯ ತರಬೇತಿ ಕಾರ್ಯಾಗಾರವನ್ನು ಬನ್ನೇರುಘಟ್ಟ ರಸ್ತೆಯಲ್ಲಿನ ಅಪೊಲೋ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಪೊಲೋ ಆಸ್ಪತ್ರೆ ವತಿಯಿಂದ ಪ್ರಥಮ ಚಿಕಿತ್ಸೆ ಹಾಗೂ ಜೀವ ಉಳಿಸುವ ಕೌಶಲ್ಯ ತರಬೇತಿ ಕಾರ್ಯಾಗಾರ ತುರ್ತು ಪರಿಸ್ಥಿತಿ ಅಥವಾ ಅಪಘಾತ ಸಂದರ್ಭಗಳಲ್ಲಿ ರೋಗಿಯನ್ನು ಹೇಗೆ ಆರೈಕೆ ಮಾಡಬೇಕು ಎಂಬುದರ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರ ನಡೆಯಿತು.
ಸುವರ್ಣ ನಿಮಿಷ ಎಂದು ಕರೆಯಲ್ಪಡುವ ಸಮಯದಲ್ಲಿ ವ್ಯಕ್ತಿಯನ್ನು ಹೇಗೆ ವೈದ್ಯಕೀಯ ಸಾಧನವಿಲ್ಲದೆ ಆರೈಕೆ ಮಾಡಬಹುದು ಹಾಗೂ ಸಾವನ್ನು ಹೇಗೆ ತಡೆಯಬಹುದು ಎಂಬುದರ ಬಗ್ಗೆ ನುರಿತ ತಜ್ಞರು ಮಾಹಿತಿ ನೀಡಿದರು.
ಅಪಘಾತ ಮಾತ್ರವಲ್ಲದೆ ರಕ್ತಸ್ರಾವ, ಪಾರ್ಶ್ವವಾಯು, ಕಾಲು ಮುರಿತ, ಉಸಿರುಗಟ್ಟುವಿಕೆ, ಹಾವು ಕಡಿತ ಮತ್ತು ವಿದ್ಯುತ್ ಆಘಾತದಿಂದ ಸಾವು ಸಂಭವಿಸಬಹುದು. ಆದರೆ, ಅಂತಹ ಸಂದರ್ಭದಲ್ಲಿ ಜೀವವನ್ನು ಉಳಿಸುವುದು ಹೇಗೆ ಮತ್ತು ಏನೆಲ್ಲ ಮಾಡಬಹುದು ಎಂಬುದರ ಬಗ್ಗೆ ಕಾರ್ಯಾಗಾರದಲ್ಲಿ ತಿಳಿಸಲಾಯಿತು.
ಮುಂದಿನ ದಿನಗಳ ಕಾಲ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ-ಬಿಟಿ ಉದ್ಯೋಗಿಗಳಿಗೆ, ಹಿರಿಯ ನಾಗರಿಕರ ಕ್ಲಬ್, ಎನ್ಸಿಸಿ ಕೆಡೆಟ್, ಪೊಲೀಸ್ ಸಿಬ್ಬಂದಿ ಹಾಗೂ ಎನ್ಜಿಒ ಸಂಸ್ಥೆಗಳಿಗೆ ಇಂತಹ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ಡಾ. ವೆಂಕಟೇಶ್ ತಿಳಿಸಿದರು.