ಬೆಂಗಳೂರು:ಕೆಐಎಎಲ್ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ ವಿರುದ್ದ ಬೆಂಗಳೂರು ಸಿಬಿಐನ ಬೆಂಗಳೂರು ಎಸಿಬಿ ಘಟಕದಲ್ಲಿ ಎಫ್ಐಆರ್ ದಾಖಲಾಗಿದೆ. ಅಕ್ರಮ ಚಿನ್ನ ಸಾಗಣೆ ಯತ್ನ, ಹಲವು ಪ್ರಕರಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 2.5 ಕೆ.ಜಿ. ಚಿನ್ನವನ್ನ ಕೆಐಎಎಲ್ನ ಕಾರ್ಗೊ ಗೋಡೌನ್‌ನಲ್ಲಿ ಇರಿಸಲಾಗಿತ್ತು. ಆದರೆ, ಸದ್ಯ ಇದು ನಾಪತ್ತೆಯಾಗಿದೆ.
ಕೆಐಎಎಲ್ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ ವಿರುದ್ದ ಎಫ್ಐಆರ್ ದಾಖಲು - KIAL Airport Customs Officers
ಕೆಐಎಎಲ್ನ ಕಾರ್ಗೊ ಗೋಡೌನ್‌ನಲ್ಲಿ ಇರಿಸಲಾಗಿದ್ದ ಬರೋಬ್ಬರಿ 2.5 ಕೆ.ಜಿ. ಚಿನ್ನ ನಾಪತ್ತೆಯಾಗಿದ್ದು, ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಸಿಬಿಐನ ಬೆಂಗಳೂರು ಎಸಿಬಿ ಘಟಕದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಸಿಬಿಐ
ಹೀಗಾಗಿ ಇದು ಹೇಗೆ ನಾಪತ್ತೆಯಾಗಿದೆ. ಹೀಗಾಗಿ ಕಸ್ಟಮ್ಸ್ ಅಸಿಸ್ಟೆಂಟ್ ಕಮಿಷನರ್ಗಳಾದ ವಿನೋದ್ ಚಿನ್ನಪ್ಪ, ಕೆ.ಕೇಶವ್, ಸೂಪರಿಂಟೆಂಡೆಂಟ್ ಎನ್. ಜೆ.ರವಿಶಂಕರ್, ಡೀನ್ ರೆಕ್ಸ್, ಕೆ.ಬಿ.ಲಿಂಗರಾಜು, ಮತ್ತೊರ್ವ ಎಸ್.ಟಿ ಹಿರೇಮಠ್ ಮೇಲೆ ಅನುಮಾನ ಇದೆ ಎಂದು ಕಸ್ಟಮ್ಸ್ ಜಂಟಿ ಆಯುಕ್ತ ಎಂ.ಜೆ.ಚೇತನ್ ಸಿಬಿಐನ ಎಸಿಬಿ ಘಟಕಕ್ಕೆ ದೂರು ನೀಡಿದ್ದಾರೆ.
ಸದ್ಯ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದ್ದು, ಎಫ್ಐಆರ್ನಲ್ಲಿ ಎಂ.ಜೆ.ಚೇತನ್ ಸೂಚಿಸಿದವರ ಹೆಸರನ್ನು ನಮೂದು ಮಾಡಲಾಗಿ ಸದ್ಯ ಅಧಿಕಾರಿಗಳೂ ತನಿಖೆ ಮುಂದುವರೆಸಿದ್ದಾರೆ.
Last Updated : Oct 18, 2020, 12:11 PM IST