ಕರ್ನಾಟಕ

karnataka

ETV Bharat / state

ಪ್ರೀತಿಸುವಂತೆ ಪೀಡಿಸುತ್ತಿದ್ದ ಪುಡಾರಿಗಳು: ರೊಚ್ಚಿಗೆದ್ದ ಪುಂಡರ ಗುಂಪು ಮಾಡಿದ್ದೇನು..? - ಆರೋಪಿಗಳನ್ನು ಬಂಧಿಸಿದ ಪೊಲೀಸ್​

ಮಹಿಳೆಯೊಬ್ಬರನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಪುಂಡರ ಗುಂಪು, ಆಕೆ ಮೇಲಿನ ಕೋಪವನ್ನು ಕಾರ್​ ಹಾಗೂ ದ್ವಿಚಕ್ರ ವಾಹನಗಳ ಮೇಲೆ ತೋರಿಸಿ, ಪ್ರಶ್ನಿಸಿದವರ ಮೇಲೆ ಹಲ್ಲೆ ನಡೆಸಿದ್ದಾರೆ.

Firing on a rowdisheater in bangalore
ಆರೋಪಿ ಶ್ರೀನಿವಾಸ

By

Published : Feb 16, 2020, 7:57 PM IST

ಬೆಂಗಳೂರು: ಮಹಿಳೆಯೊಬ್ಬರನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಪುಂಡರ ಗುಂಪು, ಆಕೆ ಮೇಲಿನ ಕೋಪವನ್ನು ಕಾರ್​ ಹಾಗೂ ದ್ವಿಚಕ್ರ ವಾಹನಗಳ ಮೇಲೆ ತೋರಿಸಿ, ಪ್ರಶ್ನಿಸಿದವರ ಮೇಲೆ ಹಲ್ಲೆ ನಡೆಸಿದ್ದಾರೆ.

ಶಶಿಕುಮಾರ್ ಬೆಂಗಳೂರು ಡಿಸಿಪಿ ಉತ್ತರವಲಯ

ರೌಡಿ ಶೀಟರ್ ಶ್ರೀನಿವಾಸ್ ಅಲಿಯಾಸ್ ಸೀಗಡಿ ಹಾಗೂ ಆತನ ಗ್ಯಾಂಗ್ ಬೆಂಗಳೂರಿನ ಕಪಿಲಾ ನಗರ ಹಾಗೂ ರಾಜಾಗೋಪಾಲ ನಗರ ಸುತ್ತ ಮುತ್ತ ಹಲವು ಪ್ರಕರಣಗಳಲ್ಲಿ ಭಾಗಿಯಾದ್ದ ಆರೋಪಿಗಳು ಈ ಪುಂಡಾಟ ಮೆರೆದಿದ್ದಾರೆ.

ಶಶಿಕುಮಾರ್ ಬೆಂಗಳೂರು ಡಿಸಿಪಿ ಉತ್ತರವಲಯ

ರಾಜಾಗೋಪಾಲ ನಗರ ಠಾಣೆಯ ರೌಡಿಶೀಟರ್ ಶ್ರೀನಿವಾಸ ಹಾಗೂ 9 ಸಹಚರರೊಂದಿಗೆ ಫೆಬ್ರವರಿ 4ರಂದು ಕಪಿಲ ನಗರಕ್ಕೆ ನುಗ್ಗಿದ್ದು, 11 ಆಟೋ ಹಾಗೂ 4 ಕಾರ್​ಗಳ ಗಾಜುಗಳನ್ನು ಜಖಂಗೊಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಣ್, ಮನೋಜ್ ಎಂಬ ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಪೊಲೀಸ್​, ಶ್ರೀನಿವಾಸ್​ಗೆ ಬಲೆ ಬೀಸಿದ್ದರು. ಜಾಲಹಳ್ಳಿ ಬಸ್​ ನಿಲ್ದಾಣ ಹಿಂಭಾಗದ ಹೆಚ್​ಎಂಟಿ ಹಳೆ ಬಿಲ್ಡಿಂಗ್​ನಲ್ಲಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಇಂದು ದಾಳಿ ನಡೆಸಿದ್ದಾರೆ. ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಹೀಗಾಗಿ ಕಾಲಿಗೆ ಗುಂಡು ಹಾರಿಸಿ, ನೆಲಕ್ಕೆ ಕೆಡವಿದ್ದಾರೆ.

ಮಹಿಳೆಯೊಬ್ಬರ ನಂಬರ್​ಗೆ ಸಂದೇಶಗಳನ್ನು ಕಳುಹಿಸುವುದು ಹಾಗೂ ರಸ್ತೆಯಲ್ಲಿ ಹಿಂಬಾಲಿಸುವುದನ್ನು ಮಾಡಿದ್ದಾರೆ. ನಂತರ ಈ ವಿಚಾರ ಮಹಿಳೆಯ ಪತಿಗೆ ತಿಳಿದಿದ್ದು, ಬುದ್ದಿ ಹೇಳಿದ್ದಾರೆ. ಇದರಿಂದ ಈ ಪುಂಡರು ಕರೆ ಮಾಡಿದಾಗ ಎಚ್ಚರಿಕೆ ನೀಡಿ, ಕಾಲ್​ ಕಟ್​ ಮಾಡಿದ್ದರು. ಇದರಿಂದ ಆ ನಗರದ ವಾಹನಗಳನ್ನು ಜಖಂ ಮಾಡಿರುವುದಾಗಿ, ಪೊಲೀಸರ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾರೆ.

ABOUT THE AUTHOR

...view details