ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಮೊದಲ ದಿನವಾಗಿದ್ದ ಸೋಮವಾರ ಪಟಾಕಿಯಿಂದ 11 ಮಂದಿ ಗಾಯಗೊಂಡಿದ್ದು, ನಗರದ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ಬಹುತೇಕರು ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಬ್ಬದ ಮೊದಲ ದಿನದ ಸಿಡಿಮದ್ದು ದುರಂತ.. 11 ಮಂದಿಗೆ ಗಾಯ - ಈಟಿವಿ ಭಾರತ ಕನ್ನಡ
ದೀಪಾವಳಿಯ ಮೊದಲ ದಿನವೇ ಪಟಾಕಿಯಿಂದ 11 ಜನ ಗಾಯಗೊಂಡಿದ್ದಾರೆ. ಕೆಲವರು ಪಟಾಕಿ ಹಚ್ಚುವಾಗ ಗಾಯ ಮಾಡಿಕೊಂಡರೆ, ಇನ್ನೂ ಕೆಲವರು ದಾರಿಯಲ್ಲಿ ಹೋಗುವಾಗ ಪಟಾಕಿ ಸಿಡಿದು ಗಾಯವಾಗಿದೆ.
ಹಬ್ಬದ ಮೊದಲ ದಿನದ ಸಿಡಿಮದ್ದು ದುರಂತ.. 11 ಮಂದಿಗೆ ಗಾಯ
ಚಾಮರಾಜಪೇಟೆಯ 10 ವರ್ಷದ ಬಾಲಕ ಆಜಾದ್, 50 ವರ್ಷದ ರಮೇಶ್, ಮೈಸೂರು ರಸ್ತೆಯ 19 ವರ್ಷದ ಜಯಸೂರ್ಯ, 4 ವರ್ಷದ ಸುರಭಿ, ಸರ್ಜಾಪುರದ ಸಂಗೀತ ವರ್ಮಾ 49 ವರ್ಷ, ಅವೆನ್ಯೂ ರಸ್ತೆಯ 22 ವರ್ಷದ ಅಬೀಬುಲ್ಲ ಸೇರಿ ಒಟ್ಟು 11 ಜನರಿಗೆ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ. ಪಟಾಕಿ ಹೊಡೆಯುವಾಗ ಕೆಲವರು ಗಾಯಗೊಂಡರೆ ಹಾಗೂ ಇನ್ನೂ ಕೆಲವರು ದಾರಿಯಲ್ಲಿ ಹೋಗುವಾಗ ಪಟಾಕಿ ಸಿಡಿದಿದೆ.
ಇದನ್ನೂ ಓದಿ :ದೀಪಾವಳಿ ಹಬ್ಬದಲ್ಲಿ ದುರಂತ.. ಪಟಾಕಿ ಸಿಡಿಸುತ್ತಿದ್ದ 10 ಮಂದಿಗೆ ಗಾಯ, ಕಣ್ಣು ಕಳೆದುಕೊಂಡ ಬಾಲಕ!