ಕರ್ನಾಟಕ

karnataka

ETV Bharat / state

ಮಾರುಕಟ್ಟೆಗೆ ಲಗ್ಗೆ ಇಟ್ಟ ಚಾಕೋಲೆಟ್ ಪಟಾಕಿಗಳು!

ದೀಪಾವಳಿ ಹಬ್ಬಕ್ಕೆ ಇನ್ನೇನು ಕೌಂಟ್​​ಡೌನ್ ಶುರುವಾಗಿದೆ. ಪಟಾಕಿ ಸಿಡಿಸಿ ಹಬ್ಬ ಆಚರಿಸಬೇಕು ಎಂದು ಕೊಂಡವರಿಗೆ ಈ ಬಾರಿ ಸರ್ಕಾರ ಬ್ರೇಕ್​ ಹಾಕಿದೆ. ಆದರೆ ಈ ಬಾರಿ ದೀಪಾವಳಿಗೆ ನೀವು ನಿಮ್ಮ ಇಷ್ಟದ ಪಟಾಕಿಯನ್ನು ವಿಭಿನ್ನವಾಗಿ ಸಿಡಿಸಬಹುದು. ಅದ್ರೆ ಸ್ವಲ್ಪ ಟ್ವಿಸ್ಟ್ ಏನಂದ್ರೆ ಇದು ನಿಮ್ಮ ಬಾಯಲ್ಲಿ ಸಿಡಿಯುತ್ತೆ.

ಮಾರುಕಟ್ಟೆಗೆ ಲಗ್ಗೆ ಇಟ್ಟ ಚಾಕೋಲೆಟ್ ಪಟಾಕಿಗಳು
ಮಾರುಕಟ್ಟೆಗೆ ಲಗ್ಗೆ ಇಟ್ಟ ಚಾಕೋಲೆಟ್ ಪಟಾಕಿಗಳು

By

Published : Nov 12, 2020, 6:04 PM IST

ಬೆಂಗಳೂರು:ಪಟಾಕಿ ಎಂದೊಡನೆ ತಟ್ಟನೆ ನೆನಪಾಗೋದು ಪಟ್ ಪಟ್ ಅಂತ ಹೋಡಿಯೋ ಬಿಜಲೀ, ಜೋರಾದ ಶಬ್ದದಿಂದ ಎಲ್ಲರನ್ನು ಬೆರಾಗಾಗಿಸೋ ಲಕ್ಷ್ಮಿ ಪಟಾಕಿ, ಹೈಡ್ರೋಜನ್ ಬಾಂಬ್ ಹಾಗೂ ಸರ ಪಟಾಕಿ ಇತ್ಯಾದಿವುಗಳು. ಆದ್ರೆ ಇದೀಗ ಮಾರುಕಟ್ಟೆಗೆ ವಿಭಿನ್ನ ಪಟಾಕಿಗಳು ಲಗ್ಗೆ ಇಟ್ಟಿವೆ.

ಮಾರುಕಟ್ಟೆಗೆ ಲಗ್ಗೆ ಇಟ್ಟ ಚಾಕೋಲೆಟ್ ಪಟಾಕಿಗಳು

ಸುರ್ ಸುರ್ ಬತ್ತಿ ಚಾಕೋಲೆಟ್​​, ರಾಕೆಟ್, ಎಲಾಚಿ ಆಟೋ ಬಾಂಬ್, ಚಾಕೋ ಚಕ್ರ, ಬಟರ್ ಸ್ಕಾಚ್, ಫ್ಲವರ್ ಪಾಟ್ ಹೀಗೆ ವಿಭಿನ್ನ ಪಟಾಕಿಗಳು ಎಂಟ್ರಿಯಾಗಿವೆ. ಪಟಾಕಿ ಹೆಸರಲ್ಲಿರುವ ಇವೆಲ್ಲಾ ಬಾಯಲ್ಲಿ ನೀರು ಬರಿಸುವ ಟೇಸ್ಟಿ ಚಾಕೋಲೆಟ್ಸ್​ಗಳು. ಇದೇ ಮೊದಲ ಬಾರಿಗೆ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಪಟಾಕಿ ಮಾದರಿಯಲ್ಲಿ ಚಾಕೋಲೆಟ್ ತಯಾರಿಸಿ ಜನರಲ್ಲಿ ವಿಭಿನ್ನವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಪಟಾಕಿ ಹೊಡೆಯುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ನಿಮ್ಮ ಕಣ್ಣನ್ನು ನೀವು ಸಂರಕ್ಷಿಸಿಕೊಳ್ಳಿ. ಈ ಬಾರಿ ದೀಪಾವಳಿಯನ್ನು ವಿಭಿನ್ನವಾಗಿ ಆಚರಿಸಿ ಎಂದು ಜಾಗೃತಿ ಮೂಡಿಸಲಾಗುತ್ತಿದೆ.

ಮಾರುಕಟ್ಟೆಗೆ ಲಗ್ಗೆ ಇಟ್ಟ ಚಾಕೋಲೆಟ್ ಪಟಾಕಿಗಳು

ಚಾಕೋಲೆಟ್​​ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಇಷ್ಟ ಪಡೋ ಚಾಕೋಲೆಟ್ ಈಗ ಪಟಾಕಿ ಮಾದರಿಯಲ್ಲಿ ಲಗ್ಗೆ ಇಟ್ಟು, ಎಲ್ಲರನ್ನು ಫಿದಾ ಮಾಡುತ್ತಿದೆ. ಇನ್ನು ಹಬ್ಬಕ್ಕೆ ಪ್ರೀತಿ ಪಾತ್ರರಿಗೆ ಗಿಫ್ಟ್ ಕೂಡ ಈ ಚಾಕೋಲೆಟ್ ಪಟಾಕಿ ಕೊಟ್ಟು ಪರಿಸರ ಸ್ನೇಹಿಯಾಗುವ ಹಬ್ಬ ಆಚರಿಸಬಹುದಾಗಿದೆ.

ಮಾರುಕಟ್ಟೆಗೆ ಲಗ್ಗೆ ಇಟ್ಟ ಚಾಕೋಲೆಟ್ ಪಟಾಕಿಗಳು

ABOUT THE AUTHOR

...view details