ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ನಡೆದ ವೇಳೆ ಕಿಡಿಗೇಡಿಗಳು ಆರೋಪಿ ನವೀನ್ ಜೊತೆ ಸಂಪರ್ಕದಲ್ಲಿರದ ಅವರ ಸಹೋದರ ಹರ್ಷವರ್ಧನ್ ಮನೆಗೂ ಸಹ ಬೆಂಕಿ ಹಚ್ಚಿದ್ದಾರೆ.
ಬೆಂಗಳೂರು ಗಲಭೆ: ನವೀನ್ ಸಹೋದರ ಹರ್ಷವರ್ಧನ್ ಮನೆಗೂ ಬೆಂಕಿ ಇಟ್ಟ ದುರುಳರು! - MLA Akhand Srinivas
ಧರ್ಮವೊಂದರ ಗುರುವನ್ನು ನಿಂದಿಸಿರುವ ಆರೋಪ ಎದುರಿಸುತ್ತಿರುವ ನವೀನ್ ಅವರ ಸಹೋದರನ ಮನೆಗೂ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಮಾಹಿತಿ ಲಭ್ಯವಾಗಿದೆ.
ಆರೋಪಿ ನವೀನ್ ಸಹೋದರ ಹರ್ಷವರ್ಧನ್ ಮನೆಗೂ ಬೆಂಕಿ..!
ಕೌಟುಂಬಿಕ ಕಲಹದಿಂದ ಕಳೆದ 10 ವರ್ಷಗಳಿಂದ ನವೀನ್ ಜೊತೆ ಹರ್ಷವರ್ಧನ್ ಸಂಪರ್ಕದಲ್ಲಿ ಇಲ್ಲ. ನವೀನ್ ಸಹೋದರ ಹರ್ಷವರ್ಧನ್ ಡಿ. ಕೆ. ಶಿವಕುಮಾರ್ ಅವರ ಆಪ್ತ ಎನ್ನಲಾಗ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹರ್ಷವರ್ಧನ್, ಮನೆ ಬಳಿ ಸುಮಾರು ಐನೂರು ಜನ ಕಲ್ಲು, ಲಾಂಗ್ ಹಿಡಿದುಕೊಂಡು ಬಂದಿದ್ದರು. ಇದು ಪಕ್ಕಾ ಪ್ಲಾನ್ಡ್ ಗಲಾಟೆಯಾಗಿದೆ.
ನಾವು ಘಟನೆ ವೇಳೆ ಟೆರೇಸ್ ಮೇಲಿಂದ ಹಾರಿ ಇನ್ನೊಂದು ಮನೆಗೆ ಹೋಗಿದ್ದರಿಂದ ಪ್ರಾಣ ಉಳಿದಿದೆ. ಗಲಭೆಕೋರರು ಮನೆಯನ್ನು ಸಂಪೂರ್ಣ ಧ್ವಂಸ ಮಾಡಿ ನಗದು, ಚಿನ್ನಾಭರಣ ಎಗರಿಸಿದ್ದಾರೆ ಎಂದು ಹರ್ಷವರ್ಧನ್ ಆರೋಪಿಸಿದ್ದಾರೆ.