ಬೆಂಗಳೂರು: ಮಾಗಡಿ ರಸ್ತೆಯ ಸೀಗೇಹಳ್ಳಿ ಬಿಎಂಟಿಸಿ ಡಿಪೋ-35 ರ ಬಳಿಯ ಪ್ಲಾಸ್ಟಿಕ್ ಗೋಡೌನ್ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ನಿಂದ ಗೋದಾಮಿಗೆ ಬೆಂಕಿ ಬಿದ್ದಿದೆ ಎನ್ನಲಾಗಿದೆ.
ಸೀಗೇಹಳ್ಳಿ BMTC ಡಿಪೋ-35ರ ಬಳಿಯ ಗೋಡೌನ್ಗೆ ಬೆಂಕಿ - ಗೋಡೌನ್ಗೆ ಬೆಂಕಿ
ಸೀಗೇಹಳ್ಳಿ ಬಿಎಂಟಿಸಿ ಡಿಪೋ 35 ರ ಬಳಿಯ ಗೋಡೌನ್ವೊಂದರಲ್ಲಿ ಭಾರಿ ಅಗ್ನಿಅವಘಡ ಸಂಭವಿಸಿದೆ.
ಬೆಂಕಿ
ಸ್ಥಳಕ್ಕೆ ದೌಡಾಯಿಸಿರುವ ಎಂಟು ಅಗ್ನಿಶಾಮಕ ವಾಹನಗಳು ಮತ್ತು ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆ ವೇಳೆಗಾಗಲೇ ಪಕ್ಕದಲ್ಲಿದ್ದ ಆರು ಮರಗಳಿಗೂ ಜ್ವಾಲೆ ವ್ಯಾಪಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ.
ಇದನ್ನೂ ಓದಿ: ಬೋಟ್ ದುರಂತ: ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ