ಆನೇಕಲ್: ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಹುಟ್ಟೂರು ಆನೇಕಲ್ಗೆ ಕೇಂದ್ರ ಸಚಿವ ಅಬ್ಬಯ್ಯ ನಾರಾಯಣ ಆಗಮಿಸಿದ್ದ ವೇಳೆ ದುರ್ಘಟನೆಯೊಂದು ಸಂಭವಿಸಿದೆ.
ಆನೇಕಲ್ನ ಚಂದಾಪುರ ಬಳಿ ಕೇಂದ್ರ ಸಚಿವರು ಆಗಮಿಸುತ್ತಿದ್ದ ವೇಳೆ ಪಟಾಕಿ ಸಿಡಿಸಲಾಯಿತು. ಪಟಾಕಿ ಕಿಡಿ ಪಕ್ಕದಲ್ಲೇ ಇದ್ದ ಬೈಕ್ಗೆ ತಗುಲಿದೆ. ಇದರ ಪರಿಣಾಮ ಬೆಂಕಿ ಹೊತ್ತಿಕೊಂಡಿತು. ಗಾಬರಿಗೊಂಡ ಅಭಿಮಾನಿಗಳು ಕೂಡಲೇ ಬೈಕ್ಗೆ ಹತ್ತಿದ ಬೆಂಕಿ ನಂದಿಸಿದ್ದಾರೆ.
ಪಟಾಕಿ ಕಿಡಿ ಸಿಡಿದು ಬೈಕ್ಗೆ ತಗುಲಿದ ಬೆಂಕಿ ಈ ಘಟನೆಯಿಂದ ನಾರಾಯಣಸ್ವಾಮಿ ಅಭಿಮಾನಿ ಬಳಗದಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು. ಈ ಹಿಂದೆ ಸಹ ಜನಾಶೀರ್ವಾದ ಕಾರ್ಯಕ್ರಮದ ವೇಳೆ ಅತ್ಯುತ್ಸಾಹದಲ್ಲಿದ್ದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಸೂಕ್ತ ಮಾಹಿತಿ ಪಡೆದುಕೊಳ್ಳದೇ ಭಾರಿ ಎಡವಟ್ಟು ಮಾಡಿಕೊಂಡಿದ್ದರು.
ಗದಗ್‌ನಲ್ಲಿ ಮೃತಪಟ್ಟ ಯೋಧನ ನಿವಾಸಕ್ಕೆ ಭೇಟಿ ನೀಡಬೇಕಿದ್ದ ಕೇಂದ್ರ ಸಚಿವರು, ಬದುಕಿರುವ ಸೈನಿಕನ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.
ಕೊರೊನಾ ನಿಯಮ ಸಂಪೂರ್ಣ ಉಲ್ಲಂಘನೆ
ಸಚಿವ ಎ. ನಾರಾಯಣಸ್ವಾಮಿ ಆಗಮನದ ಯಾತ್ರೆಯಲ್ಲಿ ಜನ ಜಾತ್ರೆ ಮೆರೆಯುವ ಮೂಲಕ ಕೊರೊನಾ ನಿಯಮ ಸಂಪೂರ್ಣ ಉಲ್ಲಂಘನೆಯಾಗಿದೆ ಎಂಬ ಆರೋಪ ತಾಲೂಕಿನಲ್ಲಿ ಕೇಳಿ ಬಂದಿದೆ.
ತಾಲೂಕಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳ ದಂಡು ಮೂರನೇ ಅಲೆ ಬಗ್ಗೆಯಾಗಲಿ, ಸರ್ಕಾರದ ನಿಯಮಗಳಿಗಾಗಲಿ ಸೊಪ್ಪು ಹಾಕಲಿಲ್ಲ. ನಾಯಕರ ಮೇಲಿನ ಅಭಿಮಾನದ ಭರಾಟೆಯಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದಿದ್ದಾರೆ.
ಜನಾಶೀರ್ವಾದ ಯಾತ್ರೆಯಲ್ಲಿ ಕೇಂದ್ರ ಸಚಿವರೇ ಮಾಸ್ಕ್ ಹಾಕದೆ ಭಾಗಿಯಾಗಿದ್ದು, ಪ್ರಚಾರದ ಅಬ್ಬರಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ನಿಯಂತ್ರಣ ಮಾಡಲಾಗದಷ್ಟು ಜನ ಕಿಕ್ಕಿರಿದು ಸೇರಿದ್ದರಿಂದ ಪೊಲೀಸರು ಹೈರಾಣಾದರು.
ಮುಖ್ಯ ರಸ್ತೆಗಳಲ್ಲಿ ಅಕ್ರಮ ಫ್ಲೆಕ್ಸ್
ಪಟ್ಟಣದ ಪ್ರಮುಖ ವೃತ್ತಗಳಲ್ಲಿರುವ ಮಹಾತ್ಮ ಗಾಂಧಿ, ರಾಜಾರಾಮ್ ಮೋಹನ್ ರಾಯ್, ಅಂಬೇಡ್ಕರ್ ಪುತ್ಥಳಿಗಳನ್ನು ಸಂಪೂರ್ಣ ಮುಚ್ಚುವಷ್ಟರ ಮಟ್ಟಿಗೆ ಫ್ಲೆಕ್ಸ್ ಹಾಕಲಾಗಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಕೊರೊನಾ ನಿಯಮ ಸಂಪೂರ್ಣ ಉಲ್ಲಂಘನೆ ಎಲೆಕ್ಟ್ರಾನಿಕ್ ಸಿಟಿಯಿಂದ ಆನೇಕಲ್‌ತನಕ ರಸ್ತೆ ಉದ್ದಕ್ಕೂ ಫ್ಲೆಕ್ಸ್-ಬ್ಯಾನರ್ ಹಾಕಲಾಗಿದೆ. ಇವು ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿವೆ. ಅಲ್ಲದೆ, ತಾಲೂಕಿನ ರಾಮ ಕುಟೀರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಸುಮಾರು 3000ಕ್ಕೂ ಹೆಚ್ಚು ಜನ ಭಾಗವಹಿಸುವ ಸಾಧ್ಯತೆಯಿದೆ.
ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈಗಾಗಲೇ ಪುರಸಭೆ ಫ್ಲೆಕ್ಸ್ಗಳನ್ನು ಹಾಕುವಂತಿಲ್ಲ ಎಂದು ಆದೇಶಿಸಿದ್ದರೂ ಸಹ ಬಿಜೆಪಿ ಕಾರ್ಯಕರ್ತರು ಕ್ಯಾರೇ ಎಂತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಓದಿ :ನಾಳೆಯಿಂದ ಭೌತಿಕ ತರಗತಿಗಳು ಆರಂಭ: ಶಾಲಾ-ಕಾಲೇಜುಗಳಿಗೆ ಹೊಸ ಗೈಡ್ಲೈನ್ಸ್