ಕರ್ನಾಟಕ

karnataka

ETV Bharat / state

ಅಗ್ನಿ ಸುರಕ್ಷತಾ ಮಾನದಂಡ ಪಾಲಿಸದ ಆಸ್ಪತ್ರೆಗಳ ವಿರುದ್ಧ ಬೇಕಿದೆ ಕಠಿಣ ಕ್ರಮ - ಅಗ್ನಿ ಸುರಕ್ಷತಾ ಮಾನದಂಡ ಪಾಲಿಸದ ಕೋವಿಡ್ ಆಸ್ಪತ್ರೆಗಳಿಗೆ ನೋಟಿಸ್

ಅಗ್ನಿ ಅವಘಡಗಳು ಸಂಭವಿಸದಂತೆ ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಅಗ್ನಿ ಶಾಮಕ ಇಲಾಖೆ ಹಲವಾರು ಕ್ರಮ ಕೈಗೊಂಡಿವೆ. ಆದರೆ, ಎಷ್ಟೋ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ, ಆಗಾಗ್ಗೆ ದುರಂತ ಸಂಭವಿಸುತ್ತಿವೆ. ಈ ಕುರಿತು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕಿದೆ.

fire-incident-reporting-fire-safety
ಅಗ್ನಿ ಸುರಕ್ಷತೆ ಸಿಲಿಂಡರ್​​

By

Published : Jan 25, 2021, 7:36 PM IST

ಬೆಂಗಳೂರು: ಆಸ್ಪತ್ರೆ ಮತ್ತು ನರ್ಸಿಂಗ್​ ಹೋಮ್​​ಗಳು ಅಗ್ನಿ ಸುರಕ್ಷತಾ ಮಾನದಂಡಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಎಲ್ಲ ರಾಜ್ಯಗಳಿಗೂ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. ಆದರೂ ಅವಘಡಗಳ ಸಂಖ್ಯೆ ಇಳಿಕೆಗೊಂಡಿಲ್ಲ. ಅಲ್ಲದೆ, ರಾಜಧಾನಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಮಾನದಂಡಗಳನ್ನು ಸರಿಯಾಗಿ ಅನುಸರಿಸುತ್ತಿಲ್ಲ ಎಂಬ ದೂರುಗಳೂ ಸಾಕಷ್ಟಿವೆ.

ಅಗ್ನಿ ಅವಘಡಗಳು ಸಂಭವಿಸದಂತೆ ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಅಗ್ನಿ ಶಾಮಕ ಇಲಾಖೆ ಹಲವಾರು ಕ್ರಮ ಕೈಗೊಂಡಿವೆ. ಆದರೆ, ಎಷ್ಟೋ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ, ಆಗಾಗ್ಗೆ ದುರಂತ ಸಂಭವಿಸುತ್ತಿವೆ. ಈ ಕುರಿತು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕಿದೆ.

ಇದನ್ನೂ ಓದಿ...ಸಾರ್ವಜನಿಕ ಸಾರಿಗೆ ಬಸ್​​ಗಳಲ್ಲಿಲ್ಲ ಪ್ರಥಮ ಚಿಕಿತ್ಸಾ ಕಿಟ್​​​: ಲಕ್ಷಾಂತರ ರೂಪಾಯಿ ಎಲ್ಲಿಗೆ ಹೋಗುತ್ತೆ?

ಅಗ್ನಿಶಾಮಕ ದಳ ಹಾಗೂ ತುರ್ತುಸೇವೆಗಳ ಐಜಿ ಸುನಿಲ್ ಅಗರವಾಲ್ ಈ ಕುರಿತು ಪ್ರತಿಕ್ರಿಯಿಸಿ, ಆಸ್ಪತ್ರೆಗಳು ಮಾನದಂಡಗಳನ್ನು ಪಾಲಿಸುತ್ತಿವೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಈ ಹಿಂದೆ ತಂಡವೊಂದನ್ನು ರಚಿಸಲಾಗಿತ್ತು. ಹಲವು ಆಸ್ಪತ್ರೆಗಳಿಗೆ ನೋಟಿಸ್ ಕೂಡ ನೀಡಲಾಗಿತ್ತು. ಆಗ ಹಲವು ಆಸ್ಪತ್ರೆಗಳು ಈ ಬಗ್ಗೆ ಎಚ್ಚರ ವಹಿಸಿದ್ದವು. ನಿಯಮ ಪಾಲಿಸದ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು ಎಂದರು.

ವೈದ್ಯ ಜಗದೀಶ್ ಹಿರೇಮಠ್

ಇನ್ನು ಕ್ಯಾಟ್-22 ನಿಯಮದ ಪ್ರಕಾರ ಆ ಸಂದರ್ಭದಲ್ಲಿ ಕೋವಿಡ್ ಕಾರಣಕ್ಕೆ ಹಲವು ಆಸ್ಪತ್ರೆಗಳನ್ನು ಮುಚ್ಚಿಸಲು ಸಾಧ್ಯವಾಗುವುದಿಲ್ಲ. ಆದರೂ ಈ ಬಗ್ಗೆ ಹೆಚ್ಚಿನ ಗಮನಹರಿಸಲಾಗುತ್ತಿದೆ. ವಿಶೇಷವಾಗಿ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಸುರಕ್ಷತೆ ವಹಿಸಲಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದರು.

ವೈದ್ಯ ಜಗದೀಶ್ ಹಿರೇಮಠ ಮಾತನಾಡಿ, ರೋಗಿಗಳ ಸುರಕ್ಷತೆ ದೃಷ್ಟಿಯಿಂದ ಅಗ್ನಿ ಸುರಕ್ಷತೆ ಬಗ್ಗೆ ಅರಿವು ಅಗತ್ಯ. ಹೈ ಪ್ರೋನ್ ಏರಿಯಾ, ಐಸಿಯು, ಓಟಿ ವಿಭಾಗದಲ್ಲಿ ವ್ಯವಸ್ಥಿತವಾಗಿ ಕೈಗೆ ಸಿಗುವ ಹಾಗೆ ಅಗ್ನಿ ಸುರಕ್ಷತೆ ಉಪಕರಣಗಳನ್ನು ಇಡಬೇಕು. ಇತ್ತೀಚೆಗಷ್ಟೇ ಮಹಾರಾಷ್ಟ್ರದ ಆಸ್ಪತ್ರೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ, ಐಸಿಯುನಲ್ಲಿದ್ದ ರೋಗಿಗಳು ಹಾಗೂ 10ಕ್ಕೂ ಹೆಚ್ಚು ನವಜಾತ ಶಿಶುಗಳು ಸಾವನ್ನಪ್ಪಿದ್ದವು. ‌ಹೀಗಾಗಿ, ಮುನ್ನೆಚ್ಚರಿಕೆ ವಹಿಸಿದರೆ ಪ್ರಾಣಹಾನಿ ತಪ್ಪಿಸಬಹುದು ಎಂದರು.

ABOUT THE AUTHOR

...view details