ಕರ್ನಾಟಕ

karnataka

ETV Bharat / state

ಮೊದಲ ದಿನವೇ ಕುಸಿದ ಪಟಾಕಿ ವ್ಯಾಪಾರ: ಕಂಗಾಲಾದ ವ್ಯಾಪಾರಿಗಳು!

ಕೊರೊನಾ ಸೋಂಕು ಭೀತಿ, ಮಳೆ ಇತ್ಯಾದಿಗಳಿಂದ ಜನರಲ್ಲಿ ಹಸಿರು ಪಟಾಕಿಯ ವ್ಯಾಪಾರವೂ ಮೊದಲ ದಿನವೇ ಕುಂಠಿತವಾಗಲು ಒಂದು ಕಾರಣವಾದ್ರೆ ಇನ್ನೊಂದೆಡೆ ಹಬ್ಬದ ಹಿಂದಿನ ದಿನ ಮಳಿಗೆಗಳನ್ನ ಇರಿಸಲು ಪೋಲಿಸ್ ಇಲಾಖೆ ಅನುಮತಿ‌ ನೀಡಿದ್ದು ಕೂಡ ವ್ಯಾಪರ ಕುಸಿಯಲು ಮತ್ತೊಂದು ಕಾರಣವಾಗಿದೆ.

fire crackers selling is down in bangalore
ಮೊದಲ ದಿನವೇ ಕುಸಿದ ಪಟಾಕಿ ವ್ಯಾಪಾರ

By

Published : Nov 14, 2020, 4:51 AM IST

ಬೆಂಗಳೂರು: ವಾಯು ಮಾಲಿನ್ಯದ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರ ದೀಪಾವಳಿಗೆ ಪಟಾಕಿ ಸಿಡಿಸುವ ಬದಲು ಹಸಿರು ಪಟಾಕಿ ಬಳಸುವಂತೆ ಆದೇಶಿಸಿದ ಬೆನ್ನಲೆ ವ್ಯಾಪಾರಿಗಳು ಗ್ರೀನ್ ಪಟಾಕಿಗಳನ್ನ ಮಾರುವ ಸಿದ್ಧತೆ ನಡೆಸಿದರೂ ವ್ಯಾಪಾರ ಕುಸಿಯುವ ಭೀತಿ ವ್ಯಾಪಾರಿಗಳಲ್ಲಿ ಮನೆ ಮಾಡಿದೆ.

ಮೊದಲೆಲ್ಲ ವ್ಯಾಪಾರಿಗಳಿಗೆ ವಾರಕ್ಕೂ ಮೊದಲೇ ಪಟಾಕಿ ಮಾರಾಟಕ್ಕೆ ಅನುಮತಿ ನೀಡುತ್ತಿದ್ದ ಸರ್ಕಾರ ಈ ಬಾರಿ ಕೊನೆಯ ಕ್ಷಣದಲ್ಲಿ ಹಸಿರು ಪಟಾಕಿ ಬಳಕೆಗೆ ಒಪ್ಪಿಗೆ ಸೂಚಿಸಿದೆ. ನಗರದಲ್ಲೂ ಶೇ. 90ರಷ್ಟು ಗುಣಮಟ್ಟದ ಹಸಿರು ಪಟಾಕಿ ಮಾರಾಟವಾಗುತ್ತಿದೆ. ಶಬ್ಧ ಹಾಗೂ ಹೊಗೆ ಉತ್ಪತ್ತಿಯಾಗುವ ಪ್ರಮಾಣ ಕಡಿಮೆಯಿದೆ. ಭೂಚಕ್ರ, ಸುರ್‌ಸುರ್ ಬತ್ತಿ, ಹೂ ಕುಡಕೆ ಮೊದಲಾದ ಪಟಾಕಿ ಉತ್ಪಾದನೆ, ಮಾರಾಟ ಹೆಚ್ಚಿನ ಸಂಖ್ಯೆಯಲ್ಲಿದೆ. ಹಲವು ಭಿನ್ನ ಮಾದರಿಗಳೂ ಕೂಡ ಈ ಬಾರಿ ಮಾರುಕಟ್ಟೆಯಲ್ಲಿ‌ ಲಭ್ಯವಾಗುತ್ತಿವೆ.

ಮೊದಲ ದಿನವೇ ಕುಸಿದ ಪಟಾಕಿ ವ್ಯಾಪಾರ

ಕೊರೊನಾ ಹಿನ್ನಲೆಯಲ್ಲಿ ನಗರದ ಗ್ರೌಂಡ್‌ಗಳಲ್ಲಿ ಪಟಾಕಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಪ್ರತಿ ಅಂಗಡಿಯ ನಡುವೆಯೂ 20 ಅಡಿ ಅಂತರವಿರಿಸಿದ್ದು. ವ್ಯಾಪಾರಿಗಳು ಹಾಗೂ ಗ್ರಾಹಕರು ಸ್ಯಾನಿಟೈಸರ್, ಮಾಸ್ಕ್‌, ಥರ್ಮಲ್ ಸ್ಕ್ಯಾನಿಂಗ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ.

ಕೊರೊನಾ ಸೋಂಕು ಭೀತಿ, ಮಳೆ ಇತ್ಯಾದಿಗಳಿಂದ ಜನರಲ್ಲಿ ಹಸಿರು ಪಟಾಕಿಯ ವ್ಯಾಪಾರವೂ ಮೊದಲ ದಿನವೇ ಕುಂಠಿತವಾಗಲು ಒಂದು ಕಾರಣವಾದ್ರೆ ಇನ್ನೊಂದೆಡೆ ಹಬ್ಬದ ಹಿಂದಿನ ದಿನ ಮಳಿಗೆಗಳನ್ನ ಇರಿಸಲು ಪೋಲಿಸ್ ಇಲಾಖೆ ಅನುಮತಿ‌ ನೀಡಿದ್ದು ಕೂಡ ವ್ಯಾಪರ ಕುಸಿಯಲು ಮತ್ತೊಂದು ಕಾರಣವಾಗಿದೆ.

ಇನ್ನು ಪ್ರತಿ ದೀಪಾವಳಿಗೆ ಬೆಂಗಳೂರಿನಲ್ಲಿ ಅಂದಾಜು 60 ಮೈದಾನದಲ್ಲಿ ಪಟಾಕಿ ಮಳಿಗೆ ತೆರೆಯಲು ಪಾಲಿಕೆ ಅನುಮತಿ ನೀಡುತ್ತಿತ್ತು. ಸುಮಾರು 500ರಿಂದ 600 ಮಳಿಗೆಗಳಿಂದ 100 ಕೋಟಿ ವ್ಯವಹಾರ ನಡೆಯುತ್ತಿತ್ತು. ಈ ವರ್ಷ ಸುಮಾರು 40 ಸ್ಥಳದಲ್ಲಿ ಮಾರಾಟಕ್ಕೆ ಅವಕಾಶವಿದ್ದರೂ ವ್ಯಾಪಾರಿಗಳ ಸಂಖ್ಯೆಯಲ್ಲೂ ಕುಸಿತ ಕಂಡಿದೆ.

ಮಲ್ಲೇಶ್ವರದ ಚಂದ್ರಶೇಖರ ಅಜಾದ್ ಕ್ರೀಡಾಂಗಣದಲ್ಲಿ ಪ್ರತಿವರ್ಷ ಸುಮಾರು 20 ಮಳಿಗೆ ತೆರೆಯಲು ಪಾಲಿಕೆ ಅನುಮತಿ ನೀಡುತ್ತಿತ್ತು. ಈ ಬಾರಿ 10 ಮಳಿಗೆಗೆ ಅವಕಾಶ ನೀಡಿದ್ದರೂ, ಕೇವಲ 6 ವ್ಯಾಪಾರಿಗಳು ಮಳಿಗೆ ತೆರೆದಿದ್ದಾರೆ. ಹೊಂಬೇಗೌಡ ನಗರದ ಕ್ರೀಡಾಂಗಣದಲ್ಲಿ ಕೇವಲ 2-3 ಮಳಿಗೆ ತಲೆಯೆತ್ತಿವೆ.

ಹಸಿರು ಪಟಾಕಿ ಏಕೆ?

‌ಸಾಮಾನ್ಯವಾಗಿ ಪಟಾಕಿಯಲ್ಲಿ ಅಲ್ಯೂಮಿನಿಯಂ, ಬೇರಿಯಂ, ಪೊಟ್ಯಾಷಿಯಂ ನೈಟ್ರೇಟ್, ಇಂಗಾಲದಂಥ ಹಾನಿಕಾರಕ ರಾಸಾಯನಗಳನ್ನ ಬಳಸಲಾಗುತ್ತದೆ. ಇದರಿಂದ ಶಬ್ಧ, ವಾಯು ಮಾಲಿನ್ಯ, ಪರಿಸರ ಮಾಲಿನ್ಯದ ಪ್ರಮಾಣ ಹೆಚ್ಚುತ್ತಿರುವುದನ್ನು ಗಮನಿಸಿದ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧಮಾ ಸಂಸ್ಥೆ (ಸಿಎಸ್‌ಐಆರ್), ಹಸಿರು ಪಟಾಕಿ ಬಳಕೆಯಿಂದ ಶೇ. 30ರಷ್ಟು ವಾಯು ಮಾಲಿನ್ಯ ಕಡಿಮೆಯಾಗುತ್ತದೆ ಎಂದು ವರದಿ ಸಲ್ಲಿಸಿತು. ಈ ಹಿನ್ನಲೆಯಲ್ಲಿ ದೆಹಲಿ ಸುತ್ತಮುತ್ತ ಕಳೆದ ಹಲವು ವರ್ಷದಿಂದ ನವೆಂಬರ್ ಹಾಗೂ ಡಿಸೆಂಬರ್ ವೇಳೆಯಲ್ಲಿ ಹೆಚ್ಚು ವಾಯು ಮಾಲಿನ್ಯ ಉಂಟಾಗುತ್ತಿರುವುದನ್ನು ಗಮನಿಸಿದ ಎನ್‌ಜಿಟಿ ಪಟಾಕಿ ಸಿಡಿಸುವುದನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು.

ಇದನ್ನು ಗಮನಿಸಿದ ಕರ್ನಾಟಕ, ರಾಜಸ್ಥಾನ, ಒಡಿಶಾ, ಆಂಧ್ರ ಪ್ರದೇಶ ಮೊದಲಾದ ರಾಜ್ಯಗಳಲ್ಲೂ ಪಟಾಕಿ ಸಿಡಿಸುವುದಕ್ಕೆ ಅನುಮತಿ ನಿಷೇಧಿಸಿದ್ದಲ್ಲದೆ, ಹಸಿರು ಪಟಾಕಿ ಬಳಸುವಂತೆ ಜಾಗೃತಿ ಮೂಡಿಸಿತು. ಹಸಿರು ಪಟಾಕಿ ಗುರುತಿಸುವುದು ಹೇಗೆ ಎಂಬುದಕ್ಕೆ ಹಸಿರು ಪಟಾಕಿ ಸುಡುವುದರಿಂದ ವಾಯು ಮಾಲಿನ್ಯದಲ್ಲಿ ಶೇ. 60ರಷ್ಟು ಕಡಿಮೆಯಾಗುತ್ತದೆ. ಪ್ರತಿ ಪಟಾಕಿ ಬಾಕ್ಸ್‌ ಮೇಲೆ ಈ ವರ್ಷದಿಂದ ಕ್ಯೂಆರ್ ಕೋಡ್ ಹಾಕಲಾಗಿದೆ, ಇದನ್ನು ಸ್ಕ್ಯಾನ್ ಮಾಡಿದರೆ ಸರ್ಕಾರ ನೀಡಿರುವ ಪ್ರಮಾಣ ಪತ್ರ ವೀಕ್ಷಿಸಬಹುದು. ಜೊತೆಯಲ್ಲಿ ಬಾಕ್ಸಿನ ಮೇಲೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನೀಡುವ ಗುರುತಿನ ಚೀಟಿ ಕೂಡ ಕಾಣಬಹುದು.

ABOUT THE AUTHOR

...view details