ಕರ್ನಾಟಕ

karnataka

ETV Bharat / state

ರೇಖಾ ಕೆಮಿಕಲ್ಸ್ ಫ್ಯಾಕ್ಟರಿ ಬೆಂಕಿ ಅವಘಡ: ಅಗ್ನಿಶಾಮಕ ಸಿಬ್ಬಂದಿ ಕಾರ್ಯಕ್ಷಮತೆಯಿಂದ ತಪ್ಪಿದ ಅನಾಹುತ...! - Rekha Chemicals Factory

ಹೊಸ ಗುಡ್ಡದಹಳ್ಳಿಯ ರೇಖಾ ಕೆಮಿಕಲ್ಸ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅಗ್ನಿ ಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.

fire-at-rekha-chemicals-factory
ರೇಖಾ ಕೆಮಿಕಲ್ಸ್ ಫ್ಯಾಕ್ಟರಿ

By

Published : Nov 10, 2020, 4:54 PM IST

Updated : Nov 10, 2020, 9:28 PM IST

ಬೆಂಗಳೂರು: ಹೊಸ ಗುಡ್ಡದಹಳ್ಳಿಯ ಹಳೆ ಚರ್ಚ್ ಬಳಿ ಇರುವ ರೇಖಾ ಕೆಮಿಕಲ್ಸ್ ಫ್ಯಾಕ್ಟರಿಗೆ ಇಂದು ಬೆಳಗ್ಗೆ 10-30 ಕ್ಕೆ ಬೆಂಕಿ ಹತ್ತಿಕೊಂಡಿತ್ತು. ಪರಿಣಾಮ ಅದೆಷ್ಟೋ ಜೀವಗಳು ಪ್ರಾಣಬಿಡಬೇಕಿತ್ತು.ಆದ್ರೆ, ಸಿಬ್ಬಂದಿ ಕಾರ್ಯಕ್ಷಮತೆಗೆ ಆಗಬೇಕಿದ್ದ ಅನಾಹುತ ತಪ್ಪಿದೆ.

ಅದ್ಯಾವ ಪರಿ ಬೆಂಕಿ ತನ್ನ ಕೆನ್ನಾಲಿಗೆ ಚಾಚಿತ್ತು ಎಂದರೆ, ಸ್ವಲ್ಪ ಸಮಯದವರೆಗೆ ಅಗ್ನಿ ಶಾಮಕ ಸಿಬ್ಬಂದಿಯೇ ತನ್ನ ಕಾರ್ಯಾಚರಣೆ ನಿಲ್ಲಿಸಿ ತಲೆ ಕೆಡಿಸಿಕೊಂಡಿದ್ದರು. ಎಂಬತ್ತಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿಗಳು 20-21 ಅಗ್ನಿಶಾಮಕ ವಾಹನದಿಂದ ನೀರನ್ನು ಫೈರ್ ಮಾಡಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ.

ಇಕ್ಕಟ್ಟಿನ ಜಾಗಗಳಾದ ಕಾರಣ ಅಕ್ಕಪಕ್ಕದ ಮನೆಗಳಿಗೂ ಬೆಂಕಿ ಕೆನ್ನಾಲಿಗೆ ಹರಡಿ ಭಸ್ಮಗೊಳಿಸಿತ್ತು. ಸ್ಯಾನಿಟೈಸರ್, ಕೆಮಿಕಲ್, ಆಲ್ಕೋಹಾಲ್ ಕಂಟೆಂಟ್ ಆಗಿರುವ ಕಾರಣ ನೀರು ಚಿಮುಕಿಸಿದಷ್ಟು ಹತ್ತಿ ಉರಿಯತೊಡಗಿತ್ತು. ಹೀಗಾಗಿ ಸ್ವಲ್ಪ ಸಮಯ ಕಾರ್ಯಾಚರಣೆಯನ್ನೇ ನಿಲ್ಲಿಸಬೇಕಾಯ್ತು.

ಕೆಮಿಕಲ್ ಡ್ರಮ್ಮುಗಳು ಸಿಡಿಯುವ ಭೀತಿ ಹಿನ್ನೆಲೆ ಪೊಲೀಸರು ಅಕ್ಕಪಕ್ಕದ ಮನೆಯವರನ್ನ ಖಾಲಿ ಮಾಡಿಸಿದ್ರು. ನಂತರ ಫೈರ್ ಕಂಟ್ರೋಲ್ ಕೆಮಿಕಲ್ ಬಳಸಿ ನೀರು ಹಾಯಿಸಿದಾಗ ಆದಷ್ಟು ಬೆಂಕಿ ಕಂಟ್ರೋಲ್ ಗೆ ಬಂದಿತ್ತು. ಸತತ ಆರು ಗಂಟೆಗಳವರೆಗೂ ನಡೆದ ಕಾರ್ಯಾಚರಣೆಯಲ್ಲಿ ಮೂರು ಜನ ಫೈರ್ ಸಿಬ್ಬಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇನ್ನು ಒಳಗಿದ್ದ ನಾಲ್ವರು ಕಾರ್ಮಿಕರು ಬೆಂಕಿ ತಗುಲಿದ ಬಳಿಕ ಹೊರ ಬಂದಿದ್ದಾರೆ.

ರೇಖಾ ಕೆಮಿಕಲ್ಸ್ ಫ್ಯಾಕ್ಟರಿ ಬೆಂಕಿ ಅವಘಡ

ಸಿಗರೇಟ್ ಸೇದಿ ಬಿಸಾಡಿದ್ದರಿಂದ ಈ ಬೆಂಕಿ ತಗುಲಿದೆ ಎಂಬ ಅನುಮಾನಗಳು ವ್ಯಕ್ತವಾಗ್ತಿದೆ. ಎಫ್ ಎಸ್ ಎಲ್ ಅಧಿಕಾರಿಗಳು ಯಾವ ರೀತಿಯಲ್ಲಿ ನಿಖರ ಕಾರಣ ಹುಡುಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Last Updated : Nov 10, 2020, 9:28 PM IST

ABOUT THE AUTHOR

...view details