ಬೆಂಗಳೂರು: ಕಳೆದ ಒಂದು ವಾರದಿಂದ ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ಮುಷ್ಕರ ನಡೆಸುತ್ತಿದ್ದಾರೆ. ಈ ಮುಷ್ಕರದ ವೇಳೆ ರಾಜ್ಯಾದ್ಯಂತ ಹಲವಾರು ಬಸ್‌ಗಳನ್ನ ಸ್ವತಃ ನೌಕರರು ಡ್ಯಾಮೇಜ್ ಮಾಡಿದ್ದಾರೆ. ಹೀಗಾಗಿ ಸಾರಿಗೆ ನೌಕರರ ವಿರುದ್ಧ ಮತ್ತೊಂದು ಕಾನೂನು ಅಸ್ತ್ರವನ್ನ ನಿಗಮಗಳು ಪ್ರಯೋಗಿಸಿವೆ.
ಸಾರಿಗೆ ನೌಕರರ ವಿರುದ್ಧ ಮತ್ತೊಂದು ಕಾನೂನು ಅಸ್ತ್ರ ಪ್ರಯೋಗಿಸಿದ ನಿಗಮಗಳು
ಮುಷ್ಕರದ ವೇಳೆ ಬಸ್‌ಗಳನ್ನ ಡ್ಯಾಮೇಜ್ ಮಾಡಿದವರ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ. ನಾಲ್ಕು ನಿಗಮಗಳಿಂದ ಪೊಲೀಸ್ ಠಾಣೆಯಲ್ಲಿ ಒಟ್ಟು 72 ಎಫ್ಐಆರ್ ಗಳನ್ನ ದಾಖಲಿಸಿವೆ.
ಕಾನೂನು ಅಸ್ತ್ರ ಪ್ರಯೋಗಿಸಿದ ನಿಗಮಗಳು
ಮುಷ್ಕರದ ವೇಳೆ ಬಸ್‌ಗಳನ್ನ ಡ್ಯಾಮೇಜ್ ಮಾಡಿದವರ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ. ಈಗಾಗಲೇ ಏಳು ದಿನಗಳಲ್ಲಿ ಒಟ್ಟು 36 ಬಸ್‌ಗಳನ್ನ ಜಖಂಗೊಳಿಸಲಾಗಿದೆ. ಹೀಗಾಗಿ ರಾಜ್ಯದ್ಯಾಂತ ನಾಲ್ಕು ನಿಗಮಗಳಿಂದ ಪೊಲೀಸ್ ಠಾಣೆಯಲ್ಲಿ ಒಟ್ಟು 72 ಎಫ್ಐಆರ್ ಗಳು ದಾಖಲಾಗಿವೆ.
ಬಸ್ ಜಖಂಗೊಳಿಸುವ ಕೃತ್ಯದಲ್ಲಿ ನಾಲ್ಕು ನಿಗಮದಿಂದ ಒಟ್ಟು 115 ಜನ ಭಾಗಿಯಾಗಿದ್ದರು. ಅದರಲ್ಲಿ 19 ಜನರನ್ನ ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.