ಕರ್ನಾಟಕ

karnataka

ETV Bharat / state

ಭೂತಕೋಲ ಆಚರಣೆ ಬಗ್ಗೆ ವಿವಾದಾತ್ಮಕ ಹೇಳಿಕೆ.. ಬೆಂಗಳೂರಲ್ಲಿ ನಟ ಚೇತನ್ ವಿರುದ್ಧ ಎಫ್​ಐಆರ್ - ಭೂತಕೋಲ ಆಚರಣೆ ಬಗ್ಗೆ ವಿವಾದಾತ್ಮಕ ಹೇಳಿಕೆ

ನಟ ಚೇತನ್ ವಿರುದ್ಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಬೆಂಗಳೂರಲ್ಲಿ ನಟ ಚೇತನ್ ವಿರುದ್ಧ ಎಫ್​ಐಆರ್
ಬೆಂಗಳೂರಲ್ಲಿ ನಟ ಚೇತನ್ ವಿರುದ್ಧ ಎಫ್​ಐಆರ್

By

Published : Oct 22, 2022, 10:30 PM IST

ಬೆಂಗಳೂರು: ಕಾಂತಾರ ಚಿತ್ರದಲ್ಲಿನ ಭೂತಕೋಲ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ನಟ ಚೇತನ್ ನೀಡಿದ ಹೇಳಿಕೆ ಖಂಡಿಸಿ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಶೇಷಾದ್ರಿಪುರ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ.

ಹಿಂದೂ ಧರ್ಮವನ್ನು ಅವಹೇಳನ ಮಾಡಿದ್ದಾರೆ ಮತ್ತು ಜಾತಿ-ಜಾತಿ‌ ನಡುವೆ ವಿಷ ಬೀಜ ಬಿತ್ತುವ ಕೆಲಸ‌ ಮಾಡ್ತಿದ್ದಾರೆಂದು ಆರೋಪಿಸಿ ನಟ ಚೇತನ್ ವಿರುದ್ಧ ದೂರು ದಾಖಲಿಸಲಾಗಿದೆ. ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ, ಅದು ಬುಡಕಟ್ಟು ಜನಾಗಂದ ಸಂಸ್ಕೃತಿ, ಆದ್ರೆ ರಿಷಬ್ ಶೆಟ್ಟಿ ಇದನ್ನು ಹಿಂದೂ ಸಂಸ್ಕೃತಿ ಅಂತ ಹೇಳುತ್ತಿದ್ದಾರೆ ಎಂದು ಚೇತನ್ ಅಭಿಪ್ರಾಯಪಟ್ಟಿದ್ದರು.

ದೂರು ದಾಖಲಾದ ಹಿನ್ನೆಲೆ ನಟ ಚೇತನ್​​ಗೆ ಪೊಲೀಸರು ನೋಟಿಸ್ ನೀಡಿದ್ದು, ಭಾನುವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ನಟ ಚೇತನ್ ಹೇಳಿಕೆಗೆ ಹಿಂದೂಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿವೆ.

(ಓದಿ: ಕೆಲವರು ಚೀಪ್ ಪಬ್ಲಿಸಿಟಿಗೋಸ್ಕರ ಈ ರೀತಿ ಹೇಳಿಕೆ ನೀಡುತ್ತಾರೆ : ಪೇಜಾವರ ಶ್ರೀ)

ABOUT THE AUTHOR

...view details