ಬೆಂಗಳೂರು: ರಾಜಧಾನಿಯಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣ ಸಂಬಂಧ ನಗರದ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ.
ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳಾದ ಸೋಹೆಲ್ ಹಾಗೂ ನಯಾಜ್ ಮೇಲೆ ಐಪಿಸಿ ಸೆಕ್ಷನ್ 153(ಎ), 506, 341, 34, 504, 323 ಹಾಗೂ 354 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಹಿಳೆ ಕೊಟ್ಟ ದೂರಿನಲ್ಲೇನಿದೆ?
'ಕಾರ್ಯಕ್ರಮವಿದ್ದ ಕಾರಣಕ್ಕೆ ಕಚೇರಿಯಿಂದ ಹೋರಾಡಲು ತಡವಾಗಿತ್ತು. ಹೀಗಾಗಿ, ಡ್ರಾಪ್ ಪಡೆಯುವುದಾಗಿ ಮನೆಯವರ ಅನುಮತಿ ಪಡೆದಿದ್ದೆ. ಅದರಂತೆ ಸಹೋದ್ಯೋಗಿ ಮಹೇಶ್ ಜೊತೆಯಲ್ಲಿ ಬರುತ್ತಿದ್ದೆ. ರಾತ್ರಿ ಸುಮಾರು 9:30ರ ವೇಳೆಗೆ ಅಪರಿಚಿತ ವ್ಯಕ್ತಿಗಳು ಡೈರಿ ಸರ್ಕಲ್ ಬಳಿ ಬೈಕ್ ತಡೆದಿದ್ದಾರೆ. ಈ ವೇಳೆ ನನ್ನ ಪತಿಯ ಮೊಬೈಲ್ ನಂಬರ್ ಪಡೆದು ಮುಖಕ್ಕೆ ಮೊಬೈಲ್ ಟಾರ್ಚ್ ಹಾಕಿದರು. ನಂತರ ಮಹೇಶ್ ಮೇಲೆ ಹಲ್ಲೆ ಮಾಡಿದರು. ಹಿಂದೂ ಹುಡುಗನ ಜೊತೆ ಯಾಕೆ ಹೋಗ್ತಿದ್ದಿಯಾ? ಎಂದು ಬೆದರಿಸಿದರು. ಹೋಗುವುದಾದರೆ ಬುರ್ಖಾ ತೆಗೆದು ಹೋಗು ಎಂದರು. ಇದಾದ ಬಳಿಕ ಆಟೋ ತೆಗೆದುಕೊಂಡು ಮನೆಗೆ ಹೋಗುವಂತೆ ಬೆದರಿಕೆ ಹಾಕಿದ್ದಾರೆ. ನನಗೆ ಭಯವಾಗಿ ಬಾಡಿಗೆ ಆಟೋ ತಗೊಂಡು ಮನೆಗೆ ಹೋದೆ' ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ನನ್ನ ಸರ್ಕಾರ ಇಂತಹ ಘಟನೆಗಳನ್ನು ಕಬ್ಬಿಣದ ಕೈಯಿಂದ ವ್ಯವಹರಿಸುತ್ತದೆ.. ಸಿಎಂ ಬೊಮ್ಮಾಯಿ ಖಡಕ್ ಎಚ್ಚರಿಕೆ
ಆರೋಪಿಗಳ ಮೇಲೆ ಪೊಲೀಸರು ಹಾಕಿರುವ IPC ಸೆಕ್ಷನ್‌ಗಳೇನು?: