ಕರ್ನಾಟಕ

karnataka

ETV Bharat / state

ಅವಧಿ ಮೀರಿ ಮಧ್ಯರಾತ್ರಿಯವರೆಗೂ ವ್ಯವಹಾರ : ಪ್ರತಿಷ್ಠಿತ ಹೋಟೆಲ್ ವಿರುದ್ಧ ಎಫ್ಐಆರ್ - ಈಟಿವಿ ಭಾರತ ಕನ್ನಡ

ರಾತ್ರಿ 1ಗಂಟೆಯ ವರೆಗೆ ಹೋಟೆಲ್ ತೆರೆಯಲು ನೀಡಿರುವ ಅವಕಾಶವನ್ನು ಮೀರಿ ಗ್ರಾಹಕರಿಗೆ ಸೇವೆ ನೀಡುತ್ತಿದ್ದ ಬೆಂಗಳೂರಿನ ಪ್ರತಿಷ್ಠಿತ ಎಂಪೈರ್ ಹೋಟೇಲ್ ವಿರುದ್ಧ ಕೋರಮಂಗಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

fir on empire hotel
ಅವಧಿ ಮೀರಿ ಮಧ್ಯರಾತ್ರಿಯವರೆಗೂ ಹೋಟೆಲ್ ವ್ಯವಹಾರ

By

Published : Nov 16, 2022, 5:17 PM IST

Updated : Nov 16, 2022, 5:24 PM IST

ಬೆಂಗಳೂರು: ನಗರದಲ್ಲಿ ರಾತ್ರಿ ವೇಳೆ ಹೋಟೆಲ್ ಉದ್ಯಮ ನಡೆಸಲು ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯಿಂದ ನಿಬಂಧನೆಗಳಿವೆ. ಆದರೆ ಅವಧಿ ಮೀರಿ ಆಹಾರ ಪೂರೈಕೆಯಲ್ಲಿ ತೊಡಗಿದ್ದ ಆರೋಪದಡಿ ಪ್ರತಿಷ್ಠಿತ ಎಂಪೈರ್ ಹೋಟೆಲ್ ವಿರುದ್ಧ ಕೋರಮಂಗಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಸಾಮಾನ್ಯವಾಗಿ ರಾತ್ರಿ 1 ಗಂಟೆಯವರೆಗೂ ಹೋಟೆಲ್ ನಡೆಸಲು ಅವಕಾಶವಿದೆ. ಆದರೆ ಕೋರಮಂಗಲದ 5ನೇ ಬ್ಲಾಕ್ ನಲ್ಲಿರುವ ಎಂಪೈರ್ ಹೋಟೆಲ್‌ನಲ್ಲಿ ಮಾತ್ರ ರಾತ್ರಿ 2 ಗಂಟೆಯವರೆಗೂ ವಹಿವಾಟು ನಡೆಸುತ್ತಿತ್ತು. ಮಧ್ಯರಾತ್ರಿಯವರೆಗೂ ಗ್ರಾಹಕರು ಕೂಗಾಡುತ್ತ ಇತರರಿಗೂ ತೊಂದರೆ ಕೊಡುತ್ತಿದ್ದರು ಎನ್ನಲಾಗ್ತಿದೆ.

ಇದೇ ವೇಳೆ ಗಸ್ತಿನಲ್ಲಿ ಕೋರಮಂಗಲದ ಠಾಣಾ ಸಿಬ್ಬಂದಿ ಹೋಟೆಲ್‌ಗೆ ತೆರಳಿ ವಿಚಾರಿಸಿದಾಗ ಅವಧಿ ಮೀರಿ 2 ಗಂಟೆಯವರೆಗೂ ಹೋಟೆಲ್ ನಡೆಸುತ್ತಿರೋದು ತಿಳಿದು ಬಂದಿದೆ. ಹೀಗಾಗಿ ಹೋಟೆಲ್ ಮ್ಯಾನೇಜರ್ ಇಕ್ಬಾಲ್ ವಿರುದ್ಧ ಕೋರಮಂಗಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ :ಗಂಡನ ಸಾಲದ ಶೂಲಕ್ಕೆ ಹೆಂಡತಿ ಆತ್ಮಹತ್ಯೆ

Last Updated : Nov 16, 2022, 5:24 PM IST

ABOUT THE AUTHOR

...view details