ಕರ್ನಾಟಕ

karnataka

ETV Bharat / state

ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ನಲಪಾಡ್ ವಿರುದ್ಧ ಎಫ್ಐಆರ್ ದಾಖಲು

ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಸಿದ್ದ ಆರೋಪದ ಮೇಲೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ನಲಪಾಡ್ ವಿರುದ್ಧ ಎಫ್​ಐಆರ್ ದಾಖಲಾಗಿದೆ..

fir-filed-against-youth-congress-president-mohamad-nalapad
ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ನಲಪಾಡ್ ವಿರುದ್ಧ ಎಫ್ಐಆರ್ ದಾಖಲು

By

Published : Feb 19, 2022, 4:49 PM IST

ಬೆಂಗಳೂರು :ಕೋರ್ಟ್ ಆದೇಶ ಉಲ್ಲಂಘಿಸಿ ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಸಿದ್ದ ಆರೋಪದ ಮೇಲೆ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮದ್​ ನಲಪಾಡ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಹಲಸೂರು ಗೇಟ್ ಠಾಣೆಯಲ್ಲಿ ಫ್ಲೆಕ್ಸ್ ವಿಚಾರಕ್ಕೆ ಎರಡು ದೂರು ದಾಖಲಾಗಿತ್ತು.

ಪ್ರಮುಖವಾಗಿ ಬಿಬಿಎಂಪಿ ಕಂದಾಯ ಅಧಿಕಾರಿ ನೀಡಿದ ದೂರಿನ ಮೇರೆಗೆ ಮೊಹಮದ್ ನಲಪಾಡ್ ಮೇಲೆ ಪ್ರಕರಣ ದಾಖಲಾಗಿದೆ. ಟೌನ್‌ ಹಾಲ್ ಮುಂಭಾಗ ಕಾರ್ಪೊರೇಷನ್ ಸರ್ಕಲ್ ವ್ಯಾಪ್ತಿಯಲ್ಲಿ ಬಿ ಕೆ ಹರಿಪ್ರಸಾದ್ ಅಭಿನಂದನಾ ಕಾರ್ಯಕ್ರಮಕ್ಕೆ 150ಕ್ಕೂ ಹೆಚ್ಚು ಅನಧಿಕೃತ ಫ್ಲೆಕ್ಸ್ ನಲಪಾಡ್ ಅಂಡ್ ಟೀಮ್ ಅಳವಡಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಬಸ್​ ನಿಲ್ಲಿಸಿ ವೋಟ್​ ಮಾಡಿ ಬಂದ ಡ್ರೈವರ್​.. ಚಾಲಕನ ನಡೆಗೆ ಬಹುಪರಾಕ್​

ಈ ಕುರಿತು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಎಂಬುವರು ಪ್ರಥಮವಾಗಿ ದೂರು ನೀಡಿದ್ದರು. ಇದಾದ ಬಳಿಕ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಚಂದ್ರಕಾಂತ್​ ಅವರಿಂದ ಕೂಡ 2ನೇ ದೂರು ದಾಖಲಾಗಿತ್ತು. ಹೀಗಾಗಿ, ಮೊಹಮದ್ ನಲಪಾಡ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details