ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಪತ್ನಿ ಹೆಸರಿನಲ್ಲಿ ನಿವೇಶನ ನೋಂದಣಿ ಮಾಡಿದ ಗಂಭೀರ ಆರೋಪದಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿವೃತ್ತ ಉಪಕಾರ್ಯದರ್ಶಿ ವಿರುದ್ಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಡಿಎ ವಿಚಕ್ಷಣ ದಳದ ಇನ್‌ಸ್ಪೆಕ್ಟರ್ ಸಂಜೀವ ರಾಯಪ್ಪ ನೀಡಿದ ದೂರಿನ ಮೇರೆಗೆ ನಿವೃತ್ತ ಉಪಕಾರ್ಯದರ್ಶಿ ಬಿ.ಟಿ.ಶಂಕರ್ ರಾಜ್ ಅರಸ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಅರಸ್ ವಿರುದ್ಧ ವಂಚನೆಯಡಿ ಎಫ್ಐಆರ್ ದಾಖಲಾಗಿದೆ.
ನಕಲಿ ದಾಖಲೆಯಿಂದ ಪತ್ನಿ ಹೆಸರಿಗೆ ಸೈಟ್: 30 ವರ್ಷದ ಬಳಿಕ ಬಿಡಿಎ ನಿವೃತ್ತ ಅಧಿಕಾರಿ ವಿರುದ್ಧ ಕೇಸ್
ಬಿಡಿಎ ವಿಚಕ್ಷಣ ದಳದ ಇನ್‌ಸ್ಪೆಕ್ಟರ್ ಸಂಜೀವ ರಾಯಪ್ಪ ನೀಡಿದ ದೂರಿನ ಆಧಾರದಲ್ಲಿ ಬಿಡಿಎ ನಿವೃತ್ತ ಕಾರ್ಯದರ್ಶಿ ಹಾಗೂ ಅವರ ಪತ್ನಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Published : Jan 15, 2024, 8:55 AM IST
1993-94ರ ಅವಧಿಯಲ್ಲಿ ಬಿಡಿಎಯಲ್ಲಿ ಕಾರ್ಯದರ್ಶಿಯಾಗಿದ್ದ ಶಂಕರ್ ರಾಜ್, ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿದ್ದ ಮೂಲೆ ನಿವೇಶನವನ್ನು ಅಕ್ರಮವಾಗಿ ಪತ್ನಿಯ ಹೆಸರಿಗೆ ನೋಂದಣಿ ಮಾಡಿದ್ದರು. ಸಾರ್ವಜನಿಕರಿಗೆ ಹರಾಜು ಹಾಕಬೇಕಿದ್ದ ಈ ನಿವೇಶನವನ್ನು ಒಳಸಂಚು ರೂಪಿಸಿ ಅಧಿಕಾರ ದುರ್ಬಳಕೆ ಮಾಡಿಕೊಂಡು ರಿಜಿಸ್ಟರ್ ಮಾಡಿಸಿದ್ದರು. ನಕಲಿ ದಾಖಲಾತಿ ಇಟ್ಟುಕೊಂಡು, ಯಾವುದೇ ಹಣ ಪಾವತಿಸದೇ ಕಚೇರಿಯಲ್ಲಿರುವ ಸೀಲ್ ಬಳಸಿ ವಂಚಿಸಿದ್ದರು. ಇದಾಗಿ 30 ವರ್ಷಗಳ ಬಳಿಕ ಇದೀಗ ವಂಚನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಮೈಸೂರು: ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಉಪನ್ಯಾಸಕನಿಂದ ಶಿಕ್ಷಕರಿಗೆ ವಂಚನೆ ಆರೋಪ