ಕರ್ನಾಟಕ

karnataka

ETV Bharat / state

ವಾಯುಸೇನೆ ಕ್ಯಾಂಪಸ್ ಮುಂಭಾಗ ಗಲಾಟೆ ಆರೋಪ: ಬಿಬಿಎಂಪಿ ನಿವೃತ್ತ ಅಧಿಕಾರಿ ವಿರುದ್ಧ ಎಫ್‌ಐಆರ್ - ಪಾಲಿಕೆ ನಿವೃತ್ತ ಅಧಿಕಾರಿ ಮಥಾಯ್ ವಿರುದ್ಧ ಎಫ್‌ಐಆರ್ ದಾಖಲು

ಬಿಬಿಎಂಪಿ ನಿವೃತ್ತ ಅಧಿಕಾರಿ, ಸಾಮಾಜಿಕ ಹೋರಾಟಗಾರ ಮಥಾಯ್ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ವಾಯುಸೇನೆ ಕ್ಯಾಂಪಸ್ ಮುಂಭಾಗ ಗಲಾಟೆ ಮಾಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ.

FIR filed against retired KAS officer Mathai
ಮಥಾಯ್ ವಿರುದ್ಧ ಎಫ್‌ಐಆರ್

By

Published : Jun 1, 2021, 9:23 AM IST

ಬೆಂಗಳೂರು:ವಾಯುಸೇನೆ ಕ್ಯಾಂಪಸ್ ಮುಂಭಾಗ ಗಲಾಟೆ ಮಾಡಿದ ಆರೋಪದ ಮೇಲೆ ಬಿಬಿಎಂಪಿ ನಿವೃತ್ತ ಅಧಿಕಾರಿ, ಸಾಮಾಜಿಕ ಹೋರಾಟಗಾರ ಮಥಾಯ್ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ವಾಯುಸೇನೆ ಮಾಜಿ ಅಧಿಕಾರಿ, ನಿವೃತ್ತ ಪಾಲಿಕೆ ಅಧಿಕಾರಿ ಮಥಾಯ್ ಮೇ 28ರ ಸಂಜೆ ಏರ್​ಫೋರ್ಸ್ ಮುಖ್ಯದ್ವಾರದಲ್ಲಿ ಕಾರಿನಲ್ಲಿ ಒಳಪ್ರವೇಶಿಸಲು ಮುಂದಾಗಿದ್ದರು. ವಾಯುಸೇನೆ ವಾಹನ ಮುಕ್ತ ದಿನವಾಗಿದ್ದ ಕಾರಣ ಕ್ಯಾಂಪಸ್ ಒಳಪ್ರವೇಶಕ್ಕೆ ಸೆಕ್ಯೂರಿಟಿ ಗಾರ್ಡ್‌ಗಳು ಅವಕಾಶ ನೀಡಿರಲಿಲ್ಲ. ಅಲ್ಲದೆ, ಸೇನೆ ಕ್ಯಾಂಟೀನ್‌ಗೆ ಅಂದು ನಿಗದಿತ ಗ್ರಾಹಕರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು.

ಇದರಿಂದ ಕುಪಿತಗೊಂಡ ಮಥಾಯ್ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸೇನೆ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಭದ್ರತಾ ಅಧಿಕಾರಿಯೊಬ್ಬರು ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

For All Latest Updates

ABOUT THE AUTHOR

...view details