ಬೆಂಗಳೂರು: ಬಿಡಿಎ ಅಂದ್ರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎಂಬುದು ಹೋಗಿ ಬೆಂಗಳೂರು ಅವ್ಯವಹಾರ ಪ್ರಾಧಿಕಾರ ಎಂಬಂತಾಗಿದೆ. ಸದಾ ಒಂದಿಲ್ಲೊಂದು ಅವ್ಯವಹಾರಗಳಿಂದಲೇ ಕುಖ್ಯಾತಿಯಾಗಿರುವ ಬಿಡಿಎನಲ್ಲಿ ಮತ್ತೊಂದು ಬೃಹತ್ ಭ್ರಷ್ಟಾಚಾರ ಬಯಲಿಗೆ ಬಂದಿದೆ. ಬಿಡಿಎ ಅಧಿಕಾರಿಗಳ ವಿರುದ್ಧ ಸಾಲು ಸಾಲು ಎಫ್ಐಆರ್ಗಳು ದಾಖಲಾಗುತ್ತಿವೆ.
ಬಿಡಿಎನ ಇಬ್ಬರು ಡೆಪ್ಯುಟಿ ಸೆಕ್ರೆಟರಿಗಳಾದ ಮಂಗಳ, ಅನಿಲ್, ಕೇಸ್ ವರ್ಕರ್ಗಳಾದ ಸಂಜಯ್ ಕುಮಾರ್, ಖಮರುನ್ನಿಸಾ, ವೆಂಕಟರಮಣಪ್ಪ, ಸೂಪರವೈಸರ ಮರಿಯಪ್ಪ ಹಾಗೂ ಫಲಾನುಭವಿಗಳಾದ ಅಪ್ಪಯಣ್ಣ, ರುಕ್ಮಿಣಿ ಎಂಬುವರು ಸೇರಿ 15 ಜನರ ವಿರುದ್ಧ ಶೇಷಾದ್ರಿಪುರಂ ಠಾಣೆಯಲ್ಲಿ 8 ಎಫ್ಐಆರ್ಗಳು ದಾಖಲಾಗಿವೆ.