ಕರ್ನಾಟಕ

karnataka

ETV Bharat / state

ಶಂಕಿತ ಉಗ್ರರ ಸೆರೆ ಪ್ರಕರಣ... ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ ಎನ್​​​ಐಎ - ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ ಎನ್​​​ಐಎ

ರಾಜ್ಯದಲ್ಲಿ ವಿಧ್ವಂಸಕ ಕೃತ್ಯವೆಸಗಲು ಯೋಜನೆ ರೂಪಿಸಿದ್ದ ಶಂಕಿತ ಉಗ್ರರ ವಿರುದ್ಧ ಎನ್​​​ಐಎ ಎಫ್​​ಐಆರ್​​ ದಾಖಲಿಸಿದೆ.

FIR agianst suspected terrorist by NIA
ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ ಎನ್​​​ಐಎ

By

Published : Feb 5, 2020, 6:59 PM IST

ಬೆಂಗಳೂರು:ರಾಜ್ಯದಲ್ಲಿ ವಿಧ್ವಂಸಕ ಕೃತ್ಯವೆಸಗಲು ಮುಂದಾಗಿದ್ದ ಶಂಕಿತ ಉಗ್ರರ ವಿರುದ್ಧ ಎನ್​​​ಐಎ ಎಫ್​​ಐಆರ್​​ ದಾಖಲಿಸಿದೆ.

ಶಂಕಿತ ಆರೋಪಿಗಳನ್ನ ಬೆಂಗಳೂರು ಸಿಸಿಬಿ ತಂಡ ಹಾಗೂ ತಮಿಳುನಾಡು ಕ್ಯೂ ಬ್ರಾಂಚ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು. ಸದ್ಯ ಆರೋಪಿಗಳು ರಾಜ್ಯದಲ್ಲೇ ವಿಧ್ವಂಸಕ ಕೃತ್ಯವೆಸಗಲು ರೆಡಿಯಾದ ಕಾರಣ ಪ್ರಮುಖ ಆರೋಪಿ ಮೆಹಬೂಬ್ ಪಾಷಾ ಸೇರಿದಂತೆ 15 ಜನರನ್ನ ಎನ್​ಐಎ ವಶಕ್ಕೆ ಪಡೆದಿದೆ. ಸದ್ಯ ಶಂಕಿತ ಉಗ್ರರ ವಿರುದ್ಧ ನವದೆಹಲಿಯ ಪೊಲೀಸ್ ಠಾಣೆಯಲ್ಲಿ‌ ಪ್ರತ್ಯೇಕ ಎರಡು ಎಫ್ಐಆರ್ ದಾಖಲಿಸಲಾಗಿದೆ.

ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ ಎನ್​​​ಐಎ

ಎಫ್ಐಆರ್ ನಲ್ಲಿ ಸೆಕ್ಷನ್ 153ಎ, 121ಬಿ, 122, 123,124ಎ, 125ಮತ್ತು UAPA ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳ ತನಿಖೆ ಮುಂದುವರೆಸಲಾಗಿದೆ. ಈಗಾಗಲೇ ಸಿಸಿಬಿ ಮತ್ತು ಕ್ಯೂ ಬ್ರಾಂಚ್ ಪೊಲೀಸರು ಆರೋಪಿಗಳನ್ನ ತನಿಖೆ ಮಾಡಿದಾಗ ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ರೆಡಿಯಾಗಿ ಹಲವಾರು ಮಂದಿಯನ್ನ ಜಿಹಾದಿಗೆ ಸೇರಿಸಿ ರಾಜ್ಯವನ್ನು ಆರು ತಿಂಗಳಿನಲ್ಲಿ ಉಡೀಸ್ ಮಾಡುವ ಪ್ಲಾನ್ ಮಾಡಿದ್ದ ವಿಚಾರ ಬಾಯಿ ಬಿಟ್ಟಿದ್ದರು. ಹೀಗಾಗಿ ಸದ್ಯ ಎನ್ಐಎ ವಶದಲ್ಲಿರುವ ಆರೋಪಿಗಳ ಸೂಕ್ತ ತನಿಖೆಯನ್ನು ಎನ್ಐಎ ನಡೆಸಲಿದೆ.

ABOUT THE AUTHOR

...view details